ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 8, 2017

CRIME INCIDENTS 07-07-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 07-07-2017 ರಂದು ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ಗಂಡ ಹಾಗೂ ಗಂಡನ ಮನೆಯ ಜನರು, ಫಿರ್ಯಾದಿ ಮಂದಿರಾ ಮಂಜುನಾಥ ಗೇಣಪ್ಪವರ ಇವಳಿಗೆ ಗಂಡ ಮಂಜುನಾಥ ಗೇಣಪ್ಪವರ  ಇವನು ಮದುವೆಯಾದ ಕೆಲವು ತಿಂಗಳುಗಳವರೆಗೆ ಸರಿಯಾಗಿ ನೋಡಿಕೊಂಡು, ಫಿರ್ಯಾದಿ ಗರ್ಭಿಣಿಯಾದ ನಂತರ ಅವಳ ಮೇಲೆ ಸಂಶಯಪಟ್ಟು ಅವಳಿಗೆ ಸರಿಯಾಗಿ ನೋಡಿಕೊಳ್ಳದೇ, ಮದುವೆಯ ಕಾಲಕ್ಕೆ ವರದಕ್ಷಿಣೆ ನೀಡಿದ್ದು, ಇನ್ನೂ ಹೆಚ್ಚಿನ ವರದಕ್ಷಿಣೆ ನೀಡುವಂತೆ ತಂಟೆ ಮಾಡಿ ಬೈದಾಡಿ ಹೊಡೆಬಡೆದು ಮಾನಸಿಕ ವ ದೈಹಿಕ ಕಿರುಕುಳ ನೀಡಿದ್ದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಃ 07-07-2017 ರಂದು ಮದ್ಯಾಹ್ನ 1430 ಗಂಟೆಗೆ  ಧಾರವಾಡ ಬೆಳಗಾಂವ ರಸ್ತೆ ಏರಟೇಕ  ಪ್ಯಾಕ್ಟರಿ ಮುಂದೆ ರಸ್ತೆ ಮೇಲೆ TVS XL ಮೋಟರ್ ಸೈಕಲ ನಂ KA-35-R-5201 ನೇದ್ದರ ಚಾಲಕನು ತನ್ನ ಮೋಟರ್ ಸೈಕಲನ್ನು ನರೇಂದ್ರ ಕ್ರಾಸ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ತನ್ನ ರಾಂಗ ಸೈಡಿಗೆ ನಡೆಸಿಕೊಂಡು ಬಂದು ಮೋಟರ್ ಸೈಕಲನ ವೇಗ ನಿಯಂತ್ರಣ ಮಾಡಲಾಗದೇ  ಧಾರವಾಡ ಕಡೆಯಿಂದ ಬೆಳಗಾಂವ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಬಾಬತ ಇನ್ನೋವಾ ಕಾರ ನಂ KA-22-P-48 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ ಬಸನಗೌಡ ಗುರುವಿನಗೌಡ್ರ ಇವರಿಗೆ ಸಾದಾ ಸ್ವರೂಪದ ಗಾಯಪಡಿಸಿದ್ದಲ್ಲದೇ  ಗಾಯಾಳುವಿನ ಉಪಚಾರಕ್ಕೆ ಸಹಕರಿಸದೇ ಓಡಿ ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 07-07-2017 ರಂದು ಬೆಳಿಗ್ಗೆ 07-30 ಗಂಟೆ ಸುಮಾರಕ್ಕೆ ಬುಡರಸಿಂಗಿ ಗ್ರಾಮದ ಇದರಲ್ಲಿಯ ಪಿರ್ಯಾದಿ ಶ್ರೀಮತಿ ಚನ್ನಮ್ಮ ಕೋಂ ಮನೋಹರ ರಾಣೋಜಿ ಇವರ ಮನೆಯ ಮುಂದೆ ರಸ್ತೆಯ ಮೇಲೆ ಇದರಲ್ಲಿಯ ಆರೋಪಿತನಾದ ಸಿದ್ದಪ್ಪ ಯಲ್ಲಪ್ಪ ಹಟ್ಟೆಣ್ಣವರ@ಯಲಿವಾಳ ಸಾ. ಬುಡರಸಿಂಗಿ ಇತನು ಪಿರ್ಯಾದಿಯೊಂದಿಗೆ ವಿನಾ ಕಾರಣ ತನಗೆ ಮನೆಯನ್ನು ಕೊಡು ಅಂತಾ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಯಿಂದ ಕಪಾಳಕ್ಕೆ ಹೊಡೆದು, ತಂಟೆ ಬಿಡಿಸಲು ಹೋದ ಪಿರ್ಯಾದಿ ಗಂಡ ಮನೋಹರ ಭೀಮಪ್ಪ ರಾಣೋಜಿ ಸಾ. ಬುಡರಸಿಂಗಿ ಇವರಿಗೂ ಕೈಯಿಂದ ಕಪಾಳಕ್ಕೆ ಹೊಡೆದು, ಪಿರ್ಯಾದಿ ಮತ್ತು ಸಾಕ್ಷಿದಾರರಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ.