ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 8, 2017

CRIME INCIDENTS 08-07-2017

 ದಿನಾಂಕ 08-07-2017 ರಂದು  ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-08-07-2017 ರಂದು 10-50 ಗಂಟೆಯ ಸುಮಾರಿಗೆ ಚಳಮಟ್ಟಿ ಕ್ರಾಸ್ ಹತ್ತೀರ ಹಳ್ಳಿ ದಾಬಾ ಎದುರಿಗೆ ಆರೋಪಿತನಾಧ ಮಂಜುನಾಥ @ ಯಲ್ಲಪ್ಪ ತಂದೆ ಹನಮಂತಪ್ಪ ಕುರುಬರ ಸಾ..ಉಗ್ಗಿನಕೇರಿ ಇವನು ತನ್ನ ಬಳಿ ಯಾವುದೆ ಪಾಸು ವ ಪರ್ಮೀಟ ಇಲ್ಲದೆ ಅಕ್ರಮವಾಗಿ ಒಂದು ರಟ್ಟಿನ ಬಾಕ್ಸದಲ್ಲಿ 1] Bagpiper wiskey 180 ML 25 tetra pockets 2]  8 PM wiskey 180 ML 05 Tetra pockets 3]Original choice wiskey 90 ML 24 Tetra pockets 4]Mc Dowell's Rum 180 ML 06 Tetra pockets 5]Old tavren wiskey 180 ML 19 Tetra pockets ಒಟ್ಟು ಅ..ಕಿ..4887/- ರೂ ಕಿಮ್ಮತ್ತಿನವುಗಳನ್ನು ಇಟ್ಟುಕೊಂಡು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಾಗ ಸಿಕ್ಕದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ.

ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 04-07-2017 ರಂದು ಬೆಳಗಿನ 02-15 ಗಂಟೆಗೆ ಕುಂದಗೋಳ ಶಹರದ ದೇಶಪಾಂಡೆ ಓಣಿಯ ಪಿರ್ಯಾದಿ ಮಲಿಕಸಾಬ ಮೋದಿನಸಾಬ ಶಿರೂರ ಮನೆಯಲ್ಲಿಂದ  ಕಾಣೆಯಾದ ಹೈದರಸಾಬ ಮೋದಿನಸಾಬ ಶಿರೂರ. ವಯಾ: 32 ವರ್ಷ, ಸಾ: ದೇಶಪಾಂಡೆ ಓಣಿ ಕುಂದಗೋಳ ಈತನು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿದ್ದು ಅವನು ಇದೂವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲವೆಂದು ದಿನಾಂಕ. 04-07-2017 ರಂದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಧಾರವಾಡ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-07-2017 ರಂದು 2200 ಗಂಟೆಗೆ ಧಾರವಾಡ ಸವದತ್ತಿ ರಸ್ತೆ ಮರೇವಾಡ ಗ್ರಾಮದ ಹಾದಿ ಬಸವಣ್ಣನ ಗುಡಿ ಹತ್ತಿರ ರಸ್ತೆ ಮೇಲೆ ಯಾವುದೋ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿವೇಗದಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಯಾವುದೇ ಮುನ್ಸೂಚನೆಗಳನ್ನು ಕೊಡದೇ ಒಮ್ಮೇಲೇ ರಸ್ತೆ ಮೇಲೆ ಲಾರಿಯನ್ನು ನಿಲ್ಲಿಸಿದ್ದರಿಂದ ಲಾರಿಯ ಹಿಂದೆ ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಬರುತ್ತಿದ್ದ ಪಿರ್ಯಾದಿಯ ತಂದೆಯ ಮೋಟರ್ ಸೈಕಲ್ ನಂ ಕೆಎ-25-ಈಡಬ್ಲ್ಯೂ-0211 ನೇದ್ದು ಲಾರಿ ಹಿಂದಿನ ಬಂಪರಗೆ ಬಡೆದು ಮೋಟರ್ ಸೈಕಲ ಸವಾರನಾದ  ಪಿರ್ಯಾದಿಯ ತಂದೆ ಮಲ್ಲೇಶಪ್ಪ ಚಿನ್ನಪ್ಪ ಕರಡಿಗುಡ್ಡ ಇವರ ತಲೆಗೆ ಲಾರಿ ಬಡೆದು ಬಾರೀ ಸ್ವರೂಪದ ಗಾಯಗಳಾಗಿದ್ದಲ್ಲದೇ ಲಾರಿ ಚಾಲಕನು ತನ್ನ ಲಾರಿ ಸಮೇತ  ಪರಾರಿಯಾಗಿ ಹೋಗಿದ್ದು ಈ ಕುರಿತು ದಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನದಿನಾಂಕ: 06-07-2017 ರಂದು ಬೆಳಗಿನ 04-30 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆ ಮೇಲೆ ಚಬ್ಬಿ ಕ್ರಾಸ್ ಸಮೀಪದ ಹೊರಟ್ಟಿಯವರ ಹೊಲದ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿ ಮೂಲದಾನರತ್ನು ತಂದೆ ಹಿಂಗಲಾಜದಾನ ರತ್ನು ಸಾ!! ಬಾದಲಿಯಾ ತಾ!! ಲೂನಿ ರಾಜ್ಯ ರಾಜಸ್ಥಾನ ಇತನು ಖಾಸಗಿ ಬಸ್ಸ ನಂಬರ RJ-19/PB-3336 ನೇದ್ದನ್ನು ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ಪಲ್ಟಿ ಮಾಡಿ ಕೆಡವಿ ಅಪಗಾತಪಡಿಸಿ ಬಸ್ಸಿನಲ್ಲಿದ್ದ ಪಿರ್ಯಾಧಿ ಅನಿತೇತ ದತ್ತಾತ್ರೇಯ ಗೋವರಕರ ಸಾ!! ಪುಸೆಗಾಂವ ರಾಜ್ಯ ಮಹಾರಾಷ್ಟ್ರ ಹಾಗೂ ಪ್ರಯಾಣಿಕರಾದ 1) ಸುನೀಲ ವಿಠ್ಠಲಭಾಯಿ ಕಟೆಸಿಯಾ ಸಾ!! ಜಾಮನಗರ ರಾಜ್ಯ ಗುಜರಾತ 2) ಜನಕ ವಿಠ್ಠಲಬಾಯಿ ಕಟೆಸಿಯಾ ಸಾ!! ಜಾಮನಗರ ರಾಜ್ಯ ಗುಜರಾತ 3) ಭಾವು ಸಾಹೇಬ ಜಂಜಿರೆ ಸಾ!! ಪುಣೆ ಇವರುಗಳಿಗೆ ಸಾಧಾ ವ ಬಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ.

ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 05-07-2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಕ್ಕೆ ಮಾವನೂರ ಗ್ರಾಮದ ಇದರಲ್ಲಿಯ ಪಿರ್ಯಾಧಿ ಮಗನಾದ ಶಿವಲಿಂಗಯ್ಯಾ ಅಂದಾನಯ್ಯಾ ಹಿರೇಮಠ ವಯಾ 26 ವರ್ಷ ಇತನು ಮನೆಯಿಂದ ಶಾಲೆಯ ಕಡೆಗೆ ಹೋದವನು ಪರ್ತ ಮನೆಗೆ ಬರದೇ ಎಲ್ಲಿಯೋ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ.

ಧಾರವಾಡ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಮೃತ ಆನಂದ ವಯಾ-20 ವರ್ಷ ಇವನಿಗೆ ಸುಮಾರು 10 ವರ್ಷಗಳಿಂದ ಹೊಟ್ಟೆ ನೋವಿನ ಖಾಯಿಲೆ ಹಾಗೂ  ಪೀಡ್ಸ ಕಾಯಿಲೆ ಇದ್ದು ಇದರಿಂದ ಸದರಿಯವನು ಮಾನಸಿಕವಾಗಿ ಅಸ್ಥಿತಿಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ: 07-07-2017 ರಂದು ರಾತ್ರಿ 1000 ಗಂಟೆಯಿಂದ ದಿನಾಂಕ 08-07-2017 ರ ಬೆಳಗಿನ 0900 ಗಂಟೆಯ ನಡುವಿನ ಅವದಿಯಲ್ಲಿ ಮರೇವಾಡ ಗ್ರಾಮದ  ಪುರ್ತಯ್ಯಾ ರುದ್ರಯ್ಯಾ ಹಿರೇಮಠ ಇವರ ಜಮೀನದಲ್ಲಿಯ ಗಿಡಕ್ಕೆ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆ ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಧಾರವಾಡ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಮೃತನ ಹನಮಂತಪ್ಪನ ಹೆಸರಿನಲ್ಲಿ  ಗೊಂಗಡಿಕೊಪ್ಪ ಗ್ರಾಮದ ಹದ್ದಿಯಲ್ಲಿ  ಸರ್ವೇ ನಂ 87 ಕ್ಷೇತ್ರ 4 ಎಕರೆ 13 ಗುಂಟೆ ಜಮೀನು ಇರುತ್ತದೆ ಈಗ 2-3 ವರ್ಷಗಳಿಂದ ಮಳೆ ಸರಿಯಾಗಿ ಆಗದೇ ಬೆಳೆ ಬಾರದ್ದರಿಂದ ಊರಲ್ಲಿ ಕೈಗಡ ಸಾಲ ಮಾಡಿ ಕೈಗಡ ಸಾಲವನ್ನು ಹೇಗೆ ತೀರಿಸುವದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ಸೋಮಾಪೂರ ಗ್ರಾಮದ ತನ್ನ ಮನೆಯಲ್ಲಿ ದಿನಾಂಕ: 08-07-2017 ರಂದು 1000 ಗಂಟೆಯಿಂದ 1200 ಗಂಟೆಯ ನಡುವಿನ ಅವದಿಯಲ್ಲಿ ಯಾವುದೋ ವಿಷಕಾರಿ ಎಣ್ಣೆಯನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಕಿಮ್ಸ್ ಅಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ 1500 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ  ಅಂತಾ ಮೃತನ ಮಗ ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ