ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 10, 2017

CRIME INCIDENTS 10-07-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 10/07/2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಉಮಚಗಿ ಹದ್ದಿಯ ಕೋಳಿವಾಡ ರಸ್ತೆಗೆ ಹೊಂದಿಕೊಂಡಿರುವ ರುಕ್ಕವ್ವ ಪಾಟೀಲ ಅನ್ನುವವರ ಜಮೀನ ಹತ್ತಿರ ಇದರಲ್ಲಿಯ ಪಿರ್ಯಾಧಿ ಶ್ರೀಮತಿ ಉಡಚವ್ವ ಕೊಂ ಯಮನಪ್ಪ ಹರಿಜನ ಸಾ!! ಉಮಚಗಿ ಇವರು ಬರ್ಹಿದೆಸೆಗೆ ಅಂತಾ ಹೋದಾಗ ಆರೋಪಿನಾದ ಶಂಕ್ರಪ್ಪ ಶಿವಪ್ಪ ಮಾಗಡಿ ಇತನು ಎಕಾಎಕಿಯಾಗಿ ಹೋಗಿ ಅವರಿಗೆ ಅಡ್ಡಗಟ್ಟಿ ನಿಲ್ಲಿಸಿ ಸೀರೆ ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿ ಕೈಯಿಂದ ಕುತ್ತಿಗೆಗೆ ಹಿಡಿದು ಎಳೆದಾಡಿದ್ದಲ್ಲದೇ, ಪಿರ್ಯಾಧಿಯ ಗಂಡ ಯಮನಪ್ಪ ಬೂದಪ್ಪ ಹರಿಜನ ಸಾ!! ಉಮಚಗಿ ಇತನು ಕೇಳಲು ಆರೋಪಿತರ  ಶಂಕ್ರಪ್ಪಾ ಮಾಗಡಿ ಇವನು ಮನೆಗೆ ಹೋದಾಗ ನೇದವನು ತಮ್ಮ ಮನೆಯ ಮುಂದೆ ಅವರಿಗೆ ಜಾತಿ ಎತ್ತಿ ಅವಾಚ್ಯ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇನೇ ಮುತ್ತಪ್ಪ ಶಿವಪ್ಪ ಮಾಗಡಿ ಸಾ!! ಉಮಚಗಿ ಇತನು ಬಡಿಗೆಯಿಂದ ಹಾಗೂ ಹನಮಂತಪ್ಪ ಶಿವಪ್ಪ ಮಾಗಡಿ ಸಾ!! ಉಮಚಗಿ ಇತನು ಕಲ್ಲಿನಿಂದ ಹೊಡೆದು ತಲೆಗೆ ಭಾರಿ ಗಾಯಪಡಿಸಿದ್ದಲ್ಲದೇ, ಬಿಡಿಸಲು ಹೋದ ಪಿರ್ಯಾಧಿ ಮಾವ ಬೂದಪ್ಪ ಯಮನಪ್ಪ ಹರಿಜನ ಸಾ!! ಉಮಚಗಿ ಇವರಿಗೆ ಮುತ್ತಪ್ಪ ಶಿವಪ್ಪ ಮಾಗಡಿ ಸಾ!! ಉಮಚಗಿ ಇತನು ಕೈಯಿಂದ ಹೊಡಿ ಬಡಿ ಮಾಡಿ ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ಅವಾಚ್ಯ ಬೈಯ್ದಾಡಿ ಜೀವದ ಬೆಧರಿಕೆ ಹಾಕಿ ಮಾದರ ಜಾತಿಯವರು ಅಂತಾ ಜಾತಿ ಎತ್ತಿ ಬೈಯ್ದಾಡಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 156/2017 ಕಲಂIPC 1860 (U/s-323,324,354(A),341,504,506,34); SC AND THE ST  (PREVENTION OF ATTROCITIES) ACT, 1989 (U/s-3(1)(10)(11),3(1)(w),3(2)(v-a),3(1)(r)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗಂಬ್ಯಾಪೂರ  ಗ್ರಾಮದ ಬಸ್ಸ್ ಸ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇದರಲ್ಲಿ ಆರೋಪಿತನಾದ  ಲಕ್ಷ್ಮಣ ತಂದೆ ಹನಮಂತಪ್ಪ ಅಂಚಟಗೇರಿ ಸಾ: ಗಂಬ್ಯಾಪೂರ ಅನ್ನುವವನು ತನ್ನ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕರಿಂದ 1 ರೂ ಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆಗಳ  ಆಧಾರದ ಮೇಲೆ  ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ  ಸಿಕ್ಕಿದ್ದು ಅವನಿಂದ ರೋಖ ರಕಂ 510 ರೂ ಹಾಗೂ ಒಂದು ಬಾಲ ಪೇನ್ ಒಂದು ಅಂಕಿ ಸಂಖ್ಯೆ ಬರೆದ ಬಿಳಿ ಹಾಳೆ ಸಮೇತ ಸಿಕ್ಕಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 241/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.