ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, July 14, 2017

CRIME INCIDENTS 14-07-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 14/07/2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಯರೇಬೂದಿಹಾಳ ಗ್ರಾಮದ  ಭಾಷಾಸಾಬ ತಂದೆ ಮಹ್ಮದಸಾಬ ಬನ್ನೂರ. ವಯಾಃ35 ಜಾಃ ಮುಸ್ಲೀಂ ಸಾಃ ಗುದ್ನ್ಯಾಳ ಓಣಿ, ಯರೇಬೂದಿಹಾಳ. ತಾಃ ಕುಂದಗೋಳ ಸುಮಾರಿಗೆ ತಮ್ಮ ಮನೆಯಿಂದ ಯಾರಿಗೂ ಹೇಳದೇ, ಕೇಳದೇ, ಎಲ್ಲಿಗೋ ಹೋದವರು ಮರಳಿ ಬಂದಿರುವುದಿಲ್ಲಾ  ಅಂತಾ  ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 49/2017 ಕಲಂ ಮನುಷ್ಯಕಾಣೆ ಪ್ರರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ-ಅಳ್ನಾವರ ರಸ್ತೆಯ ಮಧ್ಯದ ಅರವಟಿಗೆ ಗ್ರಾಮದ ತಿರುವಿನಲ್ಲಿ  ಕಾರ್ ನಂ ಲಕೆ,ಎ 35 ಎನ್ 3838 ಸ್ವೀಪ್ಟ ಡಿಸೈರ ನೇದ್ದರ ಚಾಲಕನಾದ  ಮಹ್ಮದಪಿರೋಜ ತಂದೆ ಮೊಹಮ್ಮದ ಹನೀಪ ರವರು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀ ವೇಗವಾಗಿ ನಡೆಸಿ ವಾಹನದ ನಿಯಂತ್ರಣವನ್ನು ಮಾಡಲಾಗದೇ ಕಾರನ್ನು ರಸ್ತೆಯ ಬಲ ಬದಿಯಲ್ಲಿ ಇರುವ ತಗ್ಗಿನಲ್ಲಿ ಪಲ್ಟಿ ಮಾಡಿ ಅಪಘಾತಪಡಿಸಿ, ಕಾರನ್ನು ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ  ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದ ಹರ್ಷಾ ಎಂಟರಟೇನ್ ಮೆಂಟ್ ಆಫಿಸದಲ್ಲಿ ಆರೋಪಿತರತರಾದ 1] ಸತ್ಯಭೊಧ @ ಹರ್ಷಾ ತಂದೆ ಶ್ರಿನಿವಾಸ ಖಾಸ್ನಿಸ್ & ಇವನ ಸಹೋದರರಾದ 2] ಸಂಜೀವ ಶ್ರಿನಿವಾಸ ಖಾಸ್ನಿಸ್ 3]ಶ್ರಿಕಾಂತ ತಂದೆ ಶ್ರಿನಿವಾಸ ಖಾಸ್ನಿಸ್ 4]ರಾಮಚಂದ್ರ ತಂದೆ ಪಾಂಡಪ್ಪ ಡವಳೆ 5]ವಾದಿರಾಜ ತಂದೆ ಕೃಷ್ಣಾ ಬೇಗೂರ ಎಲ್ಲರೂ ಸಾ..ಕಲಘಟಗಿ ಹಾಗು 6]ಮಹೇಶ ತಂದೆ ಸೋಮಪ್ಪ ಕಮ್ಮಾರ ಸಾ..ಸೋಮನಕೊಪ್ಪ ಇವರು ಸಾರ್ವಜನಿಕರಿಗೆ ಹಣವನ್ನು ದ್ವಿಗುಣ ಮಾಡಿಕೊಡುತ್ತೆವೆ ಅಂತಾ ಹೇಳಿ ಜನರಿಗೆ ನಂಬಿಸಿ ಸ್ವಲ್ಪ ಭಾಗಶಃ ಹಣವನ್ನು ನೀಡಿ ಬಹಳಷ್ಟು ಹಣ ಸಂಗ್ರಹವಾದ ನಂತರ ಜನರಿಗೆ ತಾನು ಮಾತು ಕೊಟ್ಟಂತೆ ಹಣ ನೀಡದೆ ಸಾರ್ವಜನಿಕರು ಕೊಟ್ಟ ಹಣವನ್ನು ದುರುಪಯೊಪಡಿಸಿಕೊಂಡು ನಂಬಿಕೆ ದ್ರೊಹ ಮಾಡಿ ಪಿರ್ಯಾದಿ ಹಾಗು ಅವನ ಸಂಭಂದಿಕರು ಇಟ್ಟ ಸುಮಾರು 36,36,000/- ರೂ ಹಣವನ್ನು ಮೋಸ ಮಾಡಿದ್ದು, ಇದಲ್ಲದೆ ಇನ್ನು ಅನೇಕ ನೂರಾರು ಜನರಿಂದ ಕೋಟ್ಯಾಂತರ ಹಣವನ್ನು ಇಸಿದುಕೊಂಡು ಮೋಸ ಮಾಡಿ, ಕಲಘಟಗಿ ವಿವಧೋದ್ದೆಶ ಸೌಹಾರ್ದ ಸಹಕಾರಿ ನಿಯಮಿತ ಕಲಘಟಗಿಯ ಅದ್ಯಕ್ಷನಾದ ಕಿರಣ ತಂದೆ ಕಾಳಿದಾಸ ದೈವೇಜ್ಞ & ಉಪಾದ್ಯಕ್ಷನಾದ ಶಂಬುಲಿಂಗ ತಂದೆ ರೇವಣಸಿದ್ದಪ್ಪ ಬಳಿಗೇರ ಇಬ್ಬರೂ ಸಾ..ಕಲಘಟಗಿ ಹಾಗು ಸದರ ಬ್ಯಾಂಕಿನ ನಿರ್ದೇಶಕರು ಇವರು ಸಹಾ ಹಣ ಪಡೆದು ವಿತ್ಡ್ರಾ ಸ್ಲಿಪ್ ಗಳ ಮೂಲಕ ಮೇಲ್ಕಾಣಿಸಿದ ಆರೋಪಿತರೊಂದಿಗೆ ಒಳಸಂಚು ಮಾಡಿ ಮೋಸ ಮಾಡಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 243/2017 ಕಲಂ IPC 1860 (U/s-120B,406,408,420); KARNATAKA PROTECTION OF INTEREST DEPOSITORS EXORBITANT ACT 2004 (U/s-9)

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಕೇರಿ ಗ್ರಾಮದ ಜನತಾ ಪ್ಲಾಟದಲ್ಲಿರುವ ಸಾರ್ವಜನಿಕ ರಸ್ತೆ ಮೇಲೆ ಆರೋಪಿತಳಾದ ಕಸ್ತೂರಿ ಪರದಣಟ್ಟಿ ಇವಳು  ಒಟ್ಟು 48 ಹೈವಡ್ಸ ಚೀಯರ್ಸ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ: 1351 ನೇದವುಗಳನ್ನು ಒಂದು ಪ್ಲಾಸ್ಟಿಕ ಗೊಬ್ಬರ ಚೀಲದಲ್ಲಿ ಹಾಕಿ ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ತನ್ನ ಸ್ವಂತ ಸ್ವಂತ ಪಾಯ್ದೆಗೋಸ್ಕರ  ಯಾವದೇ ಪಾಸು ವ ಪರ್ಮಿಟ ಇಲ್ಲದೇ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/2017 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಗ್ರಾಮದ  ಫಕ್ಕೀರಪ್ಪ ತಂದೆ ಮಾಂತಪ್ಪ ಮಳ್ಳಿ. ವಯಾಃ 57. ಜಾಃ ಹಿಂದು ಗಾಣಿಗ. ಉಃ ಶೇತ್ಕಿ. ಸಾಃ ಕುರ್ತಕೋಟಿ ರಸ್ತೇ, ಪ್ಲಾಟ್, ಹರ್ತಿ.  ಇವರ ಮಗಳಾದ ರಾಜೇಶ್ವರಿ ಹೊಸಮನಿ ಸಂಕ್ಲೀಪುರ ಗ್ರಾಮದಲ್ಲಿರುವ ತನ್ನ ಗಂಡನ ಮನೆಯಿಂದ ಯಾರಿಗೂ ಹೇಳದೇ, ಕೇಳದೇ, ಎಲ್ಲಿಗೋ ಹೋದವಳು ಮರಳಿ ಬಂದಿರುವುದಿಲ್ಲಾ  ಈ ಕುರಿತು ಗುಡಗೇರಿ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 50/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.