ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 15, 2017

CRIME INCIDENTS 15-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 15/07/2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಕೋಟುರ ಗ್ರಾಮದ ಖುಲ್ಲಾ ಜಾಗೆಯ ವಹಿವಾಟು ಮಾಡುವ ಸಲುವಾಗಿ ಸಮೀರ ಬಾನು ತಾಸೀದ ತವರು ಮನೆಯ ಜನರೊಂದಿಗೆ ಆರೋಪಿತರಾದ 1.ಶೌಕತಅಲಿ ಅಲಮ್ಮನವರ 2.ತನವೀರ ಅಲಮ್ಮನವರ ತಂಟೆ ಮಾಡುತ್ತಾ ಬಂದು ಮನೆಯ ಮುಂದೆ ನಿಂತು ಈ ಜಾಗೆಯಲ್ಲಿ ನಾವು ಅಡ್ಡಾಡುವವರೇ ಯಾವ ಏನೂ ಮಾಡಿಕೊಳ್ಳುತ್ತಾರೆ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ, ಪಿರ್ಯಧಿಯು ಹಾಗೇಕೆ ಬೈದಾಡುತ್ತಿರಿ ನಮ್ಮ ತಂದೆ ಮನೆಯಲ್ಲಿಲ್ಲ ಅವರು ಬಂದ ಮೇಲೆ ಅವರಿಗೆ ಹೇಳಿರಿ ಅಂತಾ ಅಂದಿದ್ದಕ್ಕೆ ಇದರಲ್ಲಿಯ ಕಲ್ಲಿನಿಂದ ಪಿರ್ಯಾಧಿಗೆ ತಲೆಗೆ ಹೊಡೆದಾಗ ಬಿಡಿಸಿಕೊಳ್ಳಲು ಅಂತಾ ತಂಗಿಗೂ ಸಹ ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದ್ದು  ಅಲ್ಲದೇ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2017 ಕಲಂ 506, 34, 504, 323, 324 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ  ಕ್ರಮವಾಗಿ ಗುನ್ನಾನಂ 86/2017 & 87/2017 ಮುಂಜಾಗೃತ ಕ್ರಮವಾಗಿ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ  ಕ್ರಮವಾಗಿ ಗುನ್ನಾನಂ 148/2017  ಮುಂಜಾಗೃತ ಕ್ರಮವಾಗಿ 107 ನೇದ್ದರಲ್ಲಿ   ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

4. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ  ಮೃತ ಮಿನಾಚಿ.ತಂದೆ ಅಣ್ಣಾಮಲೈ. ವಯಾ-52 ವರ್ಷ.ಸಾ/ನಡುಕೊಂಬೈ ತಾ/ನಡುಕೊಂಬೈ.ಜಿ/ನಾಮಕಲ್. ತಮಿಳುನಾಡು ರಾಜ್ಯ ಇತನು ಮಂಗಳೂರಿನಿಂದ ಲಾರಿಯಲ್ಲಿ ಗ್ಯಾಸ ಲೋಡ ಮಾಡಿಕೊಂಡು ಧಾರವಾಡ ಜಿಲ್ಲೆಯ ಬೆಲೂರ ಕೈಗಾರಿಕಾ ಪ್ರದೇಶದಲ್ಲಿರುವ ಎಚ.ಪಿ.ಗ್ಯಾಸ ಪ್ಲಾಂಟದ ಲಾರಿ ಪಾರ್ಕಿಂಗದಲ್ಲಿ ಲಾರಿಯನ್ನು ನಿಲ್ಲಿಸಿ ಮಲಗಿಕೊಂಡಾಗ ಅಸ್ತವ್ಯಸ್ಥನಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಉಪಚಾರಕ್ಕೆ ಅಂತಾ ದಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮುಂಜಾನೆ-08-50 ಗಂಟೆಗೆ ಮಾರ್ಗ ಮದ್ಯದಲ್ಲಿಯೇ ಮೃತ ಪಟ್ಟಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯು. ಡಿ. ನಂ 30/2017ಕಲಂ 174 ಸಿ.ಆರ್.ಪಿ ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬಸೂರ ಗ್ರಾಮದ ಮೃತ ಲೀಲಾವತಿ ತಂದೆ ಬಸವರಾಜ ಹಡಪದ ವಯಾ. 6 ವರ್ಷ ಇವಳು ಮನೆಯಲ್ಲಿ ಮಲಗಿದ್ದಾಗ, ಬಲಗೈ ಮುಂಗೈಗೆ ಯಾವುದೋ ವಿಷಕಾರಿ ಹಾವು ಕಡಿದು, ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ರಸ್ತೆ ಮಧ್ಯದಲ್ಲಿಯೇ ಮೃತಪಟ್ಟಿದ್ದು ವಿನಃ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವಿದಿಲ್ಲ ಅಂತಾ ಬಸವರಾಜ ಫಿಯಾಱಧಿ ನೀಡಿದ್ದು ಈ ಕುರಿತು ಹುಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ 28/2017 ಕಲಂ 174 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಮೃತನಾದ ಮಂಜುನಾಥ ನಿಂಗಪ್ಪ ಕೊಂಚಿಗೇರಿ ವಯಾ 35 ವರ್ಷ ಜಾತಿಃ ಹಿಂದೂ ಲಿಂಗಾಯತ ಉದ್ಯೋಗಃ ಡ್ರೈವಿಂಗ್/ಕೂಲಿ ಸಾಃ ಕಡಕೋಳ ತಾಃ ಶಿರಹಟ್ಟಿ ಜಿಃ ಗದಗ ಈತನು ಅತಿಯಾಗಿ ಸಾರಾಯಿ ಕುಡಿಯುವವನಾಗಿದ್ದು ಸರಾಯಿ ಕುಡಿದ ನಶೆಯಲ್ಲಿ ಅಣ್ಣಿಗೇರಿಯ ಬಸ್ ನಿಲ್ದಾಣದ ಪಕ್ಕದ ಒಂದು ಮರಕ್ಕೆ ಖಾತಿ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ ಅಂತಾ ಶೇಖವ್ವಾ ಫಿಯಾಱಧಿ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2017 ಕಲಂ 174 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.