ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, July 22, 2017

CRIME INCIDENTS 22-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 22/07/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: : ಹಿರೇಹೊನ್ನಿಹಳ್ಳಿ ಮೃತ ಶಿವಲಿಂಗಪ್ಪ ತಂದೆ ಬಸವಣೆಪ್ಪ ಜಮ್ಮಿಹಾಳ ವಯಾ 52 ವರ್ಷ ಸಾ: ಹಿರೇಹೊನ್ನಿಹಳ್ಳಿ ಇವನು ಕುಡಿವ ಚಟದವನಿದ್ದು ಮತ್ತು ಆಗಾಗ ಹೊಟ್ಟೆ ನೋವಿನ ತೊಂದರೆ ಬಳಲುತ್ತಿದ್ದು ಕಲಘಟಗಿ ಪಾಟೀಲ್ ದವಾಖಾನೆಯಲ್ಲಿ ತೋರಿಸಿದಾಗ ಅವರು ಕುಡಿಯುವದನ್ನು ಬಿಡು ಅದರಿಂದ ತೊಂದರೆ ಇದೆ ಅಂತಾ ಹೇಳಿದರೂ ಕೇಳದೇ ಮೃತನ ಹೆಂಡತಿ ಮಗ ಹಾಗೂ ಮನಯ ಜನರು ಬುದ್ದಿ ಹೇಳಿದರೂ ಕೇಳದೇ ಕುಡಿಯುತ್ತಾ ಇದ್ದವನು ದಿನಾಂಕ: 22/07/2017 ರ ಮುಂಜಾನೆ 00.30 ಗಂಟೆ ಸುಮಾರಿಗೆ ತನಗಿದ್ದ ಹೊಟ್ಟೆ ನೋವಿನ ತೊಂದರೆಯಿಂದ ತನ್ನ ಜೀವನದಲ್ಲಿ ಜುಗುಪ್ಸೆಹೊಂದಿ ತಮ್ಮ ಮನೆಯ ಹಿತ್ತಿಲಿನ ಕೋಣೆಯ ಜಂತಿಗೆ ಹಗ್ಗದ ಸಹಾಯದಿಂದ ತಾನಾಗಿಯೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತನ ಹೆಂಡತಿ  ದ್ಯಾಮವ್ವ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 41/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ :ಮಂಗಳಗಟ್ಟಿ ಗ್ರಾಮದ  ಶ್ರೀಮತಿ ಮಂಗಲಾ ಕೋಂ.ಬಸಯ್ಯ.ಹಿರೇಮಠ ವಯಾ-22 ವರ್ಷ. ಸಾಃಮಂಗಳಗಟ್ಟಿ ಇವಳು ದಿನಾಂಕ:06-06-2017 ರಂದು ಮುಂಜಾನೆ-06-30 ಗಂಟೆಯಿಂದ 07-30 ಗಂಟೆಯ ನಡುವಿನ ಅವಧಿಯಲ್ಲಿ ಮಂಗಳಗಟ್ಟಿ ಗ್ರಾಮದ ತನ್ನ ಮನೆಯಿಂದ ಯಾರಿಗೂ ಹೇಳದೇ ಕೇಳದೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2017 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .

3 .ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ  ಮೃತನಾದ ಹನಮಂತ ತಂದೆ ಸುಂಕಪ್ಪಾ ವಡ್ಡರ, ವಯಾ 40 ವರ್ಷ ಜಾತಿ ಹಿಂದೂ ವಡ್ಡರ ಉದ್ಯೋಗ ಕೂಲಿ ಕೆಲಸ ಸಾ ಃ ಅಳ್ನಾವರ ಮಾನಕಾಪೂರ ತಾ ಃ ಧಾರವಾಡ ಇವನು ಈಗ ಸುಮಾರು 5-6 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಈ ಬಗ್ಗೆ ಸರಾಯಿ ಕುಡಿಯಬೇಡ ಅಂತಾ ಮೇಲಿಂದ ಮೇಲೆ ಹೇಳಿದರೂ ಕೇಳದೇ ಮೃತನು ದಿನಾಂಕಃ 21-07-2017 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕಃ 22-07-2017 ರ ಬೆಳಗಿನ 07-00 ಗಂಟೆಯ ನಡುವಿನ ಅವಧಿಯಲ್ಲಿ ವಿಪರೀತ ಸರಾಯಿ ಕುಡಿದು ಹಳಿಯಾಳ ಅಳ್ನಾವರ ರಸ್ತೆಯ ಪಕ್ಕದಲ್ಲಿ ಅಳ್ನಾವರದ ಪುಂಡಲಿಕ ಮೇಸ್ತ್ರಿ ಗ್ಯಾರೇಜ ಸಮೀಪ ಮರಣ ಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ಪರಶುರಾಮ ವಡ್ಡರ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
4. 1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 168/17 169/2017,170/2017.171/2017  ಮುಂಜಾಗೃತ ಕ್ರಮವಾಗಿ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.