ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, July 23, 2017

CRIME INCIDENTS 23-07-2017

ದಿನಾಂಕ. 23-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯ ಕೇರಿಓಣಿಯಲ್ಲಿ ದಿನಾಂಕ. 23-07-2017 ರಂದು ಪಿರ್ಯಾದಿ ಶೋಭಾ ನವಲಗುಂದ    ಇವಳ ಮಾವ ಗಾಯಾಳು ಅಮೃತಪ್ಪ ಇವರ ಹಾಗು ಆರೋಪಿತ ಕಮಲವ್ವ ನಿಂಗಪ್ಪ ನವಲಗುಂದ, ಗೀರಿಶ ನಿಂಗಪ್ಪ ನವಲಗುಂದ, ರಾಘವೇಂದ್ರ ನಿಂಗಪ್ಪ ನವಲಗುಂದ  ಇವರ ನಡುವೆ ಜಮೀನ ಪಾಲ ವಾಟ್ನಿಯ ಸಂಬಂದ ತಂಟೆ ತಕರಾರು ಇದ್ದು ಅಲ್ಲದೇ ಪಿರ್ಯಾದಿ ಮಾವನು ಆರೋಪಿತರಿಗೆ ಓಣಿಯಲ್ಲಿ ದೈನಂದಿನ ಬಾಳ್ವೆ ಮಾಡುವ ಬಗ್ಗೆ ಬುದ್ದಿ ಮಾತು ಹೇಳಿದ್ದಕ್ಕೆ ಆರೋಪಿತರು ಪಿಯಾದಿಯ ಮೇಲೆ ದ್ವೆ ಇಟ್ಟುಕೊಂಡು ಅದೇ ಉದ್ದೆದಿಂದ ದಿನಾಂಕ 22-07-20117 ರಂದು ಮದ್ಯಾಹ್ನ 14-00 ಘಂಟೆಗೆ ಆರೋಪಿತರು ಪಿರ್ಯಾದಿ ಮಾವನೊಂದಿಗೆ ತಂಟೆ ತೆಗೆದು ಅವನನ್ನು ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಪಿರ್ಯಾದಿ ಅತ್ತೆಗೆ ಆರೋಫಿತರು ಕೈಯಿಂದ ಹೊಡೆದು ಅವಳ ಸೀರೆಯನ್ನು ನಡು ರಸ್ತೆಯಲ್ಲಿ ಹಿಡಿದು ಎಳೆದಾಡಿ ಮಾನಂಬಂಗ ಪಡಿಸಿ ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 103/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲಿಸ್ ಠಾಣಾವ್ಯಾಪ್ತಿಯಲ್ಲಿ ಈಗ ಸುಮಾರು 05-06 ವರ್ಷಗಳಿಂದ ಪಿರ್ಯಾದಿದಾರಳು ಯಲ್ಲವ್ವ ಅಲ್ಲಿಗೇರಿ ಇವಳ ಗಂಡ ಆರೋಪಿತ ಹನುಂತಪ್ಪ  ಅಲ್ಲಿಗೇರಿ ಪಿರ್ಯಾದಿಯ ಮೇಲೆ ವಿನಾ ಕಾರಣ ಸಂಶಯ ಮಾಡುತ್ತಾ ಅವಾಚ್ಯವಾಗಿ ಬೈಯ್ದಾಡಿ ಮನೆಯಲ್ಲಿದ್ದ ಊದುಗೊಳ್ಳಿ ತೆಗೆದುಕೊಂಡು ಹೊಡಿ ಬಡಿ ಮಾಡುತ್ತಿರುವಾಗ ಜಗಳ ಬಿಡಿಸಲು ಬಂದ ಪಿರ್ಯಾದಿಯ ಮಗ ಬಸವರಾಜನಿಗೆ ಮನೆಯ ಮುಂದೆ ಇದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ಭಾರೀ ರಕ್ತ ಗಾಯ ಮಾಡಿ ಇಬ್ಬರನ್ನು ಮನೆಯಿಂದ ಹೊರಗೆ ಹಾಕಿ ಮನೆಗೆ ಬಂದರೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 151/2017 ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಜಾವೂರ ಗ್ರಾಮದಲ್ಲಿ ಸುಧಾ ಶಿವಾನಂದ ಅಮ್ಮಿನಬಾವಿ  ಇವಳು ತನಗೆ ಬರುತ್ತಿದ್ದ ಮುಟ್ಟಿನ ನೋವಿನ ತ್ರಾಸಿನಿಂದ  ನೋವು ತಡೆಯಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು   ದಿನಾಂಕ 21-07-2017 ರಂದು ರಾತ್ರಿ  10-00 ಗಂಟೆಯಿಂದ  ದಿನಾಂಕ 22-07-2017 ರಂದು ಬೇಳಿಗ್ಗೆ 06-00 ಗಂಟೆಯ ಯ ನಡುವಿನ ಅವಧಿಯಲ್ಲಿ  ತನಗೆ ಇದ್ದ ಮುಟ್ಟು ಬಂದಾಗ ಆಗುವ  ಹೊಟ್ಟೆ ನೋವು ತಾಳಲಾರದೆ ತನ್ನಷ್ಟಕ್ಕೆ ತಾನೇ ದನಕ್ಕೆ ಹಚ್ಚುವ ಉಣ್ಣೆ ನಿವಾರಕ ಎಣ್ಣೆಯನ್ನು ಸೆವನೆ ಮಾಡಿದ್ದು ಉಪಚಾರಕ್ಕೆಂದು ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಉಪಚಾರ ಫಲೀಸದೆ ದಿನಾಂಕ 22-07-2017 ರಂದು ಸಾಯಂಕಾಲ 04-40 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅದೆ. ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ವರದಿಗಾರನು ವರದಿಯಲ್ಲಿ ನಮೂದಿಸಿದ್ದು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಇರುತ್ತದೆ.