ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 24, 2017

CRIME INCIDENTS 24-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 24/07/2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ ಗದದ ರಸ್ತೆಯ ಬಂಢಿವಾಡ ಕ್ರಾಸ್ ಹತ್ತಿರ ಆರೋಪಿನಾದ ಯಲ್ಲಪ್ಪಾ ಬನ್ನಿಗಿಡದ ಇತನು  ಕಳವು ಮಾಡುವ ಇರಾಧೆಯಿಂದ ರಸ್ತೆಗೆ ಹೊಂದಿಕೊಂಡಿರುವ ಅಂಗಡಿಯ ಸಂಧಿಯಲ್ಲಿ ಅವಿತು ಕುಳಿತಿಕೊಂಡಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 175/2017 ಕಲಂ 109 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ ಗ್ರಾಮದ  ಮೃತ ಮಹಾಂತೇಶ ಭೀಮರಾವ ಕೊರ್ವಿ ವಯಾಃ 35 ವರ್ಷ ಸಾಃ ಕರೋಷಿ ಹಾಲಿ ಎಕ್ಸಂಬಾ  ಇವನು ತನ್ನ ಹೆಂಡ್ತಿ ಮಕ್ಕಳು ತನನ್ನು ಬಿಟ್ಟು ತವರು ಮನೆಗೆ ಹೋದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೆ ಅಂಚಟಗೇರಿ ಗ್ರಾಮ ಹದ್ದಿ ಅಲ್ತಾಫ ಹಳ್ಳೂರ ಇವರ ಮಾವಿನ ತೋಟದಲ್ಲಿಯ ಮಾವೀನ ಮರಕ್ಕೆ ಉರ್ಲು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವದೆ ಸಂಶಯ ಇರುವದಿಲ್ಲಾ ಅಂತಾ  ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳೀ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2017 u/s 174 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.
 
3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮಾದನಬಾವಿ ಗ್ರಾಮದ ಮೃತಃ ವೀರಭದ್ರಯ್ಯ ತಂದೆ ದೊಡ್ಡಯ್ಯ ಚರಂತಿಮಠ . ವಯಾಃ 38 ವರ್ಷ. ಸಾಃ ಮುರಕಿಭಾವಿ . ತಾಃ ಬೈಲಹೊಂಗಲ. ಹಾಲಿ ಮಾದನಭಾವಿ. ತಾಃ ಧಾರವಾಡ ಇವನು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಅದರಿಂದ ಅವನಿಗೆ ಹೊಟ್ಟೆ ನೋವು ಬರುತ್ತಿದ್ದು, ಈ ದಿವಸ ದಿಃ 24/07/2017 ರಂದು ಬೆಳಗಿನ 08-00 ಗಂಟೆಯಿಂದ 10.00 ಗಂಟೆ ನಡುವಿನ ಅವಧಿಯಲ್ಲಿ ತನಗಿದ್ದ ಹೊಟ್ಟೆ ನೋವಿನ ಬಾದೆಯನ್ನು ತಡೆಯಲಾರದೇ ಮನೆಯಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ತನ್ನಷ್ಟಕ್ಕೆ ತಾನೆ ಅಡಗಿ ಮನೆಯ ಬೆಲಗಿಗೆ ಹಗ್ಗವನ್ನು ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತ ಪಟ್ಟಿದ್ದು ಅದೆ. ಅಂತಾ ಮೃತನ ಹೆಂಡತಿ ನೇತ್ರಾವತಿ  ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 32/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.