ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 25, 2017

CRIME INCIDENTS 25-07-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25/07/2017 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನುಗ್ಗಿಕೇರಿ ಗ್ರಾಮದ ಸಮೀಪ ರಸ್ತೆಯ ಲಾರಿ ನಂ ಕೆಎ-25-ಸಿ-5713 ನೇದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ  ಆನಂದ ಜೋಶಿ ಇವರ ವಿ.ಆರ್.ಎಲ್  ಕಂಪನಿಯ ಲಾರಿ ನಂ ಕೆಎ-25-ಎ-5953 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ತನ್ನ ಲಾರಿಯಲ್ಲಿದ್ದ ದೊಡ್ಡಪ್ಪ ಬಸಪ್ಪ ತೊಲಗಿ ಇವನಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 153/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಅಜಂನಬಾವಿ ಗ್ರಾಮದ  ನೀಲವ್ವ ಪಾಯಣ್ಣವರ ಇವರ ಮನೆ ಮುಂದೆ ಇದರಲ್ಲಿ ಆರೋಪಿತರಾದ 1) ಭರಮವ್ವ ಕೋಂ ರಾಮಣ್ಣ ಅಡಿವೆಪ್ಪನವರ ಸಾ: ಕುಂದಗೋಳ 2) ಮಲ್ಲಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ ವಸ್ತಿ ಲಕ್ಷ್ಮೇಶ್ವರ, 3) ಶಾಂತವ್ವ ಕೋಂ ರಾಮಣ್ಣ ಹುಲಗೂರ. ಸಾ: ಕುಂದಗೋಳ 4) ಸುನಂದವ್ವ ಕೋಂ ಫಕ್ಕೀರಪ್ಪ ಪೂಜಾರ. ಸಾ: ಕುಂದಗೋಳ 5) ಬಸಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 6) ನೀಲವ್ವ ಕೋಂ ಬಸಪ್ಪ ಬಾರಕೇರ. ಸಾ: ಕುಬಿಹಾಳ, ಹಾಲಿ: ನೂಲ್ವಿ 7) ಯಮನಪ್ಪ ಸೋಮಪ್ಪ ಪಾಯಕ್ಕನವರ ಸಾ: ಕುಂದಗೋಳ 8) ಟೋಪಣ್ಣ ರಾಮಣ್ಣ ಹುಲಗೂರ. ಸಾ: ಕುಂದಗೋಳ 9) ರಾಜೇಶ್ವರಿ ಕೋಂ ಯಮನಪ್ಪ ಪಾಯಕ್ಕನವರ ಸಾ: ಕುಂದಗೋಳ 10) ಹನಮಂತಪ್ಪ ಮಹಾದೇವಪ್ಪ ಬಾರಕೇರ. ಸಾ: ಕುಬಿಹಾಳ ಇವರೇಲ್ಲರೂ ಗೈರ ಕಾಯ್ದೇಶಿರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಗಂಡನಿಗೆ ಕೋರ್ಟಿನಲ್ಲಿ ಸಾಕ್ಷಿ ಹೇಳಿದ್ದಕ್ಕೆ ಅವಾಚ್ಯ ಬೈಯ್ದಾಡಿ, ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 116/2017 ಕಲಂ 143.147.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.