ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, July 28, 2017

CRIME INCIDENTS 28-07-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28/07/2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ: ಫಿರ್ಯಾದಿ ನಿಂಗಬಸವ್ವಾ ಬಸವರಾಜ ರಾಯಣ್ಣವರ ಇವಳ ತವರು ಮನೆ ಗುಡಿಸಾಗರ ಗ್ರಾಮವಿದ್ದು ಅಲ್ಲಿ ಪಕ್ಕದ ಮನೆಯವರು ಈ ಹಿಂದೆ ಫಿರ್ಯಾದಿದಾರಳ ತಾಯಿಯ ಸಂಗಡ ಬೈದಾಡಿ ಸಣ್ಣ ಪುಟ್ಟ ತಂಟೆಯಾಗಿದ್ದು ಇರುತ್ತದೆ. ಈಗ ಒಂದು ತಿಂಗಳು ಸುನ್ನೆ ತಿಂಗಳು ಇದ್ದುದರಿಂದ ಮತ್ತು ಫಿರ್ಯಾದಿದಾರಳು 6 ತಿಂಗಳು ಗರ್ಭಿಣಿ ಇದ್ದುದರಿಂದ ತನ್ನ ತವರು ಮನೆ ಗುಡಿಸಾಗರ ಗ್ರಾಮಕ್ಕೆ ಹೋಗಿದ್ದಳು ದಿನಾಂಕ 25-07-2017 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ತವರು ಮನೆ ಗುಡಿಸಾಗರದಲ್ಲಿ ಮನೆಯ ಮುಂದೆ ನಿಂತಾಗ ಪಕ್ಕದ ಮನೆಯ ಜನರಾದ 1) ಶಾಂತವ್ವಾ ಕೋಂ ಗುರಪ್ಪ ಗುಡಿಯಣ್ಣವರ 2) ಪ್ರವೀಣ ಗುರಪ್ಪ ಗುಡಿಯಣ್ಣವರ 3)ಸುದೀಪ ಗುರಪ್ಪ ಗುಡಿಯಣ್ಣವರ ಸಾ:ಎಲ್ಲರೂ ಗುಡಿಸಾಗರ ಇವರೆಲ್ಲರೂ ಕೂಡಿಕೊಂಡು ಬಂದವರೆ ಹಿಂದಿನ ತಂಟೆಯ ದ್ವೇಶ ಇಟ್ಟುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಒದ್ದು ಹೊಡಿ ಬಡಿ ಮಾಡಿರುತ್ತಾರೆ. 1) ಶಾಂತವ್ವಾ ಗುರುಪ್ಪ ಗುಡಿಯಣ್ಣವರ ಈಕೆಯು ಫಿರ್ಯದಿಯ ಡುಬ್ಬಕ್ಕೆ ಕೈಯಿಂದ ಹೊಡೆದಿರುತ್ತಾಳೆ 2)ಪ್ರವೀಣ ಗುರಪ್ಪ ಗುಡಿಯಣ್ಣವರ ಈತನು ಫಿರ್ಯಾದಿಯ ಹೊಟ್ಟೆಗೆ ಒದ್ದು ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ. 3)ಸುದೀಪ ಈತನು ಫಿರ್ಯಾದಿಯ ಬೆನ್ನಿಗೆ ಕೈಯಿಂದ ಹೊಡಿ ಬಡಿ ಮಾಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 95/2017 ಕಲಂ IPC 1860 (U/s-323,325,354,504,34) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ:  ದಿನಾಂಕ 19-07-2017 ರಂದು ಮದ್ಯಾಹ್ನ 13-00 ಘಂಟೆಗೆ ಪಿರ್ಯಾದಿದಾರ ಮಂಜುನಾಥ ದುಗಱಪ್ಪ ವಾಲೀಕಾರ ಇತನು ತಮ್ಮ ಅತ್ತೆಯ ಮನೆಗೆ ಪಂಚಮಿ ಹಬ್ಬಕ್ಕೆ ಎಳ್ಳು ಮತ್ತು ಉಂಡೆಗಳನ್ನು ಕೊಡಲು ಅಂತಾ ಹೋದಾಗ ಆರೋಪಿತರಾದ ಅಮ್ರತಪ್ಪ ನವಲಗುಂದ, ಶಾಂತವ್ವಾ ನವಲಗುಂದ, ಮಂಜುನಾಥ ನವಲಗುಂದ, ಶೋಭಾ ನವಲಗುಂದ ಮತ್ತು ಪ್ರಶಾಂತ ಪೂಜಾರ ಇವರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರನು ಪರಿಶಿಷ್ಟ ಜಾತಿಗೆ ಸೇರಿದವನು ಅಂತಾ ತಿಳಿದೂ ನೀವು ಹೊಲೆ ಮಾದಿಗರು ನಮ್ಮ ಮನೆತನದ ಗೌರವವನ್ನು ಹಾಳು ಮಾಡಿದಿರಿ ನಿಮ್ಮಿಂದ ನಮ್ಮ ಮನೆತನಕ್ಕೆ ಕಳಂಕ ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದಾಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 108/2017 ಕಲಂ IPC 1860 (U/s-504,34); Scheduled Castes and Scheduled Tribes (Prevention of Atrocities) Amendment Ordinance 2014 (U/s-3(1) (s)) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.