ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, July 31, 2017

CRIME INCIDENTS 31-07-2017

ದಿನಾಂಕ.31-07-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಅಣ್ಣಿಗೇರಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ದಿನಾಂಕ 30-07-2017 ರಂದು ಸಾಯಂಕಾಲ 18-30 ಘಂಟೆಗೆ ಆರೋಪಿತ ಸೈಯದಲಿ ಮಲೀಕಸಾಬ ದಾರುಬಾಯಿ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ್ KA-25/EV 2731 ನೆದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಗದಗ ಹುಬ್ಬಳ್ಳಿ ರಾಷ್ಟ್ರಿ ಹೆದ್ದಾರಿ 63 ರ ನಲವಡಿ ಗ್ರಾಮದ ಸಮೀಪ ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಎದುರಿಗೆ ಹೊರಟ ವಾಹನವನ್ನು ಓವರ್ಟೇಫ್ ಮಾಡಿಕೊಂರು ರಸ್ತೆಯ ಬಲಸೈಡಿನಲ್ಲಿ ಮೋಟರ್ ಸೈಕಲ್ ಚಲಾಯಿಸಿ ವೇಗವನ್ನು ನಿಯಂತ್ರಣ ಮಾಡದೇ ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ತನ್ನ ಸೈಡಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿ ರಾಜಶೇಖರ ಪೂಜಾರ ಬಾಬತ್ ಇಂಡಿಕಾ ವಿ2 ಕಾರ್ ನಂಬರ್ KA-37/A 7164 ನೇದ್ದಕ್ಕೆ ತನ್ನ ಮೋಟರ್ ಸೈಕಲನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ಹಾಗು ತನ್ನ ಹಿಂಬದಿಯ ಮೋಟರ್ ಸೈಕಲ್ ಸವಾರನಿಗೆ ಸಾದಾ ಹಾಗು ಭಾರೀ ಸ್ವರೂಪದ ಗಾಯ ಪೆಟ್ಟು ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

2)ಅಣ್ಣಿಗೇರಿ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಆರೋಫಿತನು ಮಲ್ಲೇಶ ಕರಿಯಪ್ಪ ಕೊಳೇಕರ್ ಇವನು ಪಿರ್ಯಾದಿ ಶೋಭಾ ಕೋಳೇಕರ್  ಹೆಂಡತಿಯೊಂದಿಗೆ ಸರಿಯಾಗಿ ಜೀವನ ಮಾಡದೇ ತಂಟೆ ತಕರಾರು ಮಾಡುತ್ತಾ ಬಂದಿದ್ದು ಇರುತ್ತದೆ ದಿನಾಂಕ 29-07-2017 ರಂದು ಸಾಯಂಕಾಲ 19-00 ಘಂಟೆಗೆ ಮಣಕವಾಡ ಗ್ರಾಮದ ಪಿರ್ಯಾದಿ ತವರು ಮನೆಗೆ ಬಂದು ಮನೆಯಲ್ಲಿ ಇದ್ದ ಪಿರ್ಯಾದಿ ತಾಯಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಗಾಯ ಪಡಿಸಿದ್ದು ಅಲ್ಲದೇ ಪಿರ್ಯಾದಿ ತಾಯಿಯನ್ನು ಎಳೆದು ಹೊರಗಡೆ ತಂದು ಜನರ ಮುಂದೆ ಅವಳ ಸೀರೆಯನ್ನು ಹಿಡಿದು ಎಳೆದಾಡಿ ಮಾನಭಂಗ ಪಡಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

3)ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿಃ 28-07-2017 ರಂದು ಮದ್ಯಾಹ್ನ್ 01.15  ಗಂಟೆ ಸುಮಾರಿಗೆ  ಅಮೀನಸಾಬ ಬುಡ್ಡೆಸಾಬ ಶೀರೂರ ಸಾಃ ಕೋಟೂರ ಇವನು ತನ್ನ ಮೋಟಾರ್ ಸೈಕಲ್  ನಂಬರಃ KA/26/Q/4358 ನೇದ್ದನ್ನು ಬೇಲೂರ ಕೈಗಾರಿಕಾ ಪ್ರದೇಶದ ಎಲ್.ಎನ್. ಆಯಿಲ್ ಕಂಪನಿ ಕಡೆಯಿಂದ ಕೋಟೂರ ಕಡೆಗೆ ರಸ್ತೆಯ ಮೇಲೆ ಅತೀವೇಗದಿಂದ ವ ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಸದರ್ನ ಪೆರೋ ಕಂಪನಿಯ ಹತ್ತಿರ ತನ್ನಷ್ಟಕ್ಕೆ ತಾನೆ ತನ್ನ ಮೋಟಾರ ಸೈಕಲನ್ನು ಸ್ಕೀಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ತನ್ನ ತಲೆಗೆ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

4)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 31-07-2017 ರಂದು ಬೆಳಗಿನ 05-30 ಗಂಟೆಗೆ ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ಲ ಹದ್ದಿಯ ಇಂಗಳಹಳ್ಳಿ ಕ್ರಾಸ್ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತರಾದ 1) ಯಲ್ಲಪ್ಪ ಉಡಚಪ್ಪ ಇಂಗಳಹಳ್ಳಿ ಸಾ!! ಇಂಗಳಹಳ್ಳಿ 2) ಹನಮಂತಪ್ಪ ನಿಂಗಪ್ಪ ತಿರ್ಲಾಪೂರ ಸಾ!! ಇಂಗಳಹಳ್ಳಿ 3) ಕುಮಾರ ತಿಮ್ಮಣ್ಣ ವಡ್ಡರ ಸಾ!! ಹುಬ್ಬಳ್ಳಿ 4) ಸಾಗರ ಉಡಚಪ್ಪ ಇಂಗಳಹಳ್ಳಿ ಸಾ!! ಹುಬ್ಬಳ್ಳಿ 5) ರವಿ ಅರ್ಜುನ ಅಳ್ನಾವರ ಸಾ!! ಹುಬ್ಬಳ್ಳಿ 6) ಸುನೀಲ ಸುರೇಶ ಧಾರವಾಡ ಸಾ!! ಹುಬ್ಬಳ್ಳಿ ಇವರುಗಳು ಹುಬ್ಬಳ್ಳಿ ಕಡೆಗೆ ಹಾಗೂ ನವಲಗುಂದ ಕಡೆಗೆ ಹೋಗುವ ವಾಹನಗಳನ್ನು ನಿಲ್ಲಿಸಿ ವಾಹನ ಚಾಲಕರುಗಳನ್ನು ಹೊಡೆದು ಹಣವನ್ನು ಕಸಿದುಕೊಂಡು ಡಕಾಯಿತಿ ಮಾಡುವ ಉದ್ದೇಶದಿಂದ ಕೈಯಲ್ಲಿ ಕಬ್ಬಿಣದ ಮಚ್ಚುಗಳನ್ನು ಹಾಗೂ ಚಾಕೂ, ಖಾರದ ಪುಡಿ ಹಿಡಿದುಕೊಂಡು ನಿಂತಾಗ, ಮೋಟರ್ ಸೈಕಲ್ ನಂ. ಕೆಎ-63-ಇ-1211 ಮತ್ತು ಮೋಟರ ಸೈಕಲ್ ನಂ. ಕೆಎ-25-ಇ.ಎನ್-8801 ಚಾಸ್ಸಿ ನಂ. MBLHA10DHA13757  ನೇದ್ದವುಗಳ ಸಮೇತ ಆರೋಪಿ ಸೇಜ್ ನಂ. 1 ರಿಂದ 4ನೇದವರು ಸಿಕ್ಕಿದ್ದು, ಆರೋಪಿ ಸೇಜ್ ನಂ. 5 & 6ನೇದವರು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದು ಇರುತ್ತದೆ.

5)ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ-31-07-2017 ರಂದು ರೇಣುಕಾ ಕೋಂ ಮಂಜುನಾಥ ಮುದ್ಲಿಂಗನ್ನವರ ಸಾ..ಸುರಶೇಟ್ಟಿಕೊಪ್ಪ ಇವರು ಠಾಣೆಗೆ ಹಾಜರಾಗಿ ತಮ್ಮ ವರದಿ ನೀಡಿದ್ದರಲ್ಲಿ ದಿನಾಂಕ-18-04-2017 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ತನ್ನ ಗಂಡನಾದ ಮಂಜುನಾಥ ತಂದೆ ಚೆನ್ನವೀರಪ್ಪ ಮುದ್ಲಿಂಗನ್ನವರ 26 ವರ್ಷ ಸಾ..ಸೂರಶೆಟ್ಟಿಕೊಪ್ಪ ಇವನು ಮನೆಯಿಂದಾ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋದವನು ಈವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವನಿಗೆ ಪತ್ತೆ ಮಾಡಿಕೊಡಬೇಕು ಅಂತಾ ಕೊಟ್ಟ ಪಿರ್ಯಾದಿಯನ್ನು ಸ್ವೀಕರಿಸಿಕೊಂಡು ಕಲಘಟಗಿ ಪಿಎಸ್ ಗುನ್ನಾ ನಂ 250/2017 ಕಲಂ ಮನುಷ್ಯ ಕಾಣೆ ನೇದ್ದಕ್ಕೆ ದಾಖಲಿಸಿಕೊಂಡಿದ್ದು ಇರುತ್ತದೆ.