ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, August 31, 2017

CRIME INCIDENTS 31-08-2017

ದಿನಾಂಕ 30-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ಆರೋಪಿತನಾದ ಬಸಪ್ಪ.ತಂದೆ ಈಶ್ವರಪ್ಪ.ಕಲಭಾವಿ. ವಯಾ-40 ವರ್ಷ. ಜ್ಯಾತಿ-ಹಿಂದೂ-ಲಿಂಗಾಯತ. ಉದ್ಯೋಗ-ಕೂಲಿ.ಸಾಃನಾಗಲಾವಿ. ತಾಃಧಾರವಾಡ ಇತನು ತಾರಿಖು 31-08-2017 ರಂದು 05.00 ಗಂಟೆಗೆ ಬೇಲೂರ ಕೈಗಾರಿಕಾ ಪ್ರದೇಶದ ಗೊಕಾವಿ ರವರ ಕಾಂಪ್ಲೇಕ್ಸ ಹತ್ತೀರ ಕಾಗ್ನೇಜೆಬಲ  ಗುನ್ನೆ ಮಾಡುವ ಇರಾದೆಯಿಂದ ಇದ್ದಾಗ ಸಿಕ್ಕಿದ್ದು ಸದರಿಯವನ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 138/2017  ಕಲಂ.109 ಸಿ,ಆರ.ಪಿ.ಸಿ.ರಿತ್ಯ ಕ್ರಮ ಜರುಗಿಸಿ ಮುಂದಿನ ಕ್ರಮ ಕೈಗೊಂಡಿದ್ದು ಇರುತ್ತದೆ .

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬಸೂರ ಗ್ರಾಮದ ಜನತಾ ಪ್ಲಾಟ್ ದಲ್ಲಿರುವ ಖುಲ್ಲಾ ಜಾಗೆಯಲ್ಲಿ ಇದರಲ್ಲಿ ಆರೋಪಿರಾದ 1.ಮಂಜುನಾಥ ರಾಥೋಡ ಇನ್ನೂ 11 ಜನರು ಕೊಡಿಕೊಂಡು ತಮ್ಮ ಫಾಯ್ದೆಗೋಸ್ಕರ, ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ, ಅಂದರ ಬಾಹರ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ, ಸಿಕ್ಕಿದ್ದು ಅವರಿಂದ ರೂ 6970/- ರೂ. ವಶಪಡಿಸಿಕೊಂಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 203/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಮಾಚಾಪೂರ ರಸ್ತೆಯ ಮೇಲೆ ಮಾಚಾಪೂರ ಕರೆಯ ಹತ್ತೀರ ಮೋಟಾರ್ ಸೈಕಲ್ ನಂ KA-31-W-2238 ನೇದ್ದರ ಚಾಲಕನು ಕಲಘಟಗಿ ಕಡೆಯಿಂದಾ ಮಾಚಾಪೂರ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದೆ ಹೊರಟ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಹೋಗಿ ರಸ್ತೆಯ ಸೈಡಿನಲ್ಲಿ ಹೊಲದಿಂದ ಮನೆಗೆ ನೆಡೆದುಕೊಂಡು ಹೊರಟ ಪಿರ್ಯಾದಿಯ ಮಾವ ಕಲ್ಲಪ್ಪ ಸಿದ್ದಪ್ಪ ಬ್ಯಾಹಟ್ಟಿ ವಯಾ 60 ವರ್ಷ ಸಾ..ಮಾಚಾಪೂರ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ಮೋಟಾರ್ ಸೈಕಲ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್  ಠಾಣೆಯಲ್ಲಿ  ಗುನ್ನಾನಂ 307/2017 ಕಲಂ 279.338 ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Wednesday, August 30, 2017

CRIME INCIDENTS 30-08-2017ದಿನಾಂಕ 30-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಿಶ್ರಿಕೋಟಿ ಗ್ರಾಮದ ಶ್ರೀ ಸಣ್ಣಹಾಜಿಸಾಬ ತಂದೆ ಹಾಜಿಸಾಬ ನದಾಫ, ಸಾ: ಮಿಶ್ರೀಕೋಟಿ ಇವರು ಠಾಣೆಗೆ ಬಂದು ತಮ್ಮ ಅರ್ಜಿ ಕೊಟ್ಟಿದ್ದರಲ್ಲಿ ಮಿಶ್ರಿಕೋಟಿ ರಿ.ಸ.ನಂ. 852/ಎ/1153 ನೇದ್ದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ದಿವಾಣಿ ನ್ಯಾಯಾಲಯ, ಕಲಘಟಗಿಯಲ್ಲಿ ಅಸಲ ದಾಬಾ ನಂ. 212/2014 ನೇದ್ದು ಈಗಾಗಲೇ ದಿ:01-09-2015 ರಂದು ತಮ್ಮಂತೆ ಆದೇಶವಾಗಿದ್ದು ಇರುತ್ತದೆ. ಸದರಿ ಆದೇಶದ ಪ್ರಕಾರ ರುಸ್ತುಂಸಾಬ ಫಕೃಸಾಬ ನದಾಫ @ ಏರಿಮನಿ ವಿರುದ್ದ ಆದೇಶವಾಗಿದ್ದರೂ ಸಹಿತ ಅರ್ಜಿದಾರರಿಗೆ ಯಾವುದೇ ರೀತಿಯ ತೊಂದರೆ ಹಾಗೂ ಕಬ್ಜಾವಹಿವಾಟಿಗೆ ಅಡೆತಡೆ ಮಾಡಬಾರದು ಅಂತಾ ಖಾಯಂ ತಡೆಯಾಜ್ಞೆ ಇದ್ದರು ಸಹಿತ1] ಅಲ್ಲಾಸಾಬ ಸಣ್ಣಹಾಜಿಸಾಬ ನದಾಫ 2] ಮಾಬುಸುಬಾನ ರಾಯೇಸಾಬ ಹೆಬ್ಬಳ್ಳಿ 3] ರುಸ್ತುಂಸಾಬ ಫಕೃಸಾಬ ಏರಿಮನಿ 4] ಸೈಯದಸಾಬ ಇಮಾಮಸಾಬ ಕೋಟ್ರಿ ಎಲ್ಲರೂ ಮಿಶ್ರಿಕೋಟಿ ಇವರು ತಮ್ಮ ಕಬ್ಜಾವಹಿವಾಟಿಗೆ ತೊಂದರೆ ಕೊಡುತ್ತಿದ್ದಾರೆ ಕೇಳಿದರೆ ತಮಗೆ ಹೊಡೆಯಲು ಬಡಿಯಲು ಬರುತ್ತಾರೆ ಸದರಿಯವರಿಗೆ ಕರೆಯಿಸಿ ಯೋಗ್ಯ ಚವಕಾಶಿ ಮಾಡುವಂತೆ ಕೊಟ್ಟ ಅರ್ಜಿಯನ್ನು ಎಲ್.ಪಿ.ಟಿ ನಂ 364/2017 ನೇದ್ದಕ್ಕೆ ದಾಖಲ್ಮಾಡಿಕೊಂಡು ವಿಚಾರಣೆ ಮಾಡಿ ಸದರಿ ಎದುರುಗಾರರಿಗೆ ಮಾನ್ಯ ನ್ಯಾಯಾಲಯ ಆದೇಶದಂತೆ ನಡೆದುಕೊಳ್ಳುವಂತೆ ಸೂಚಿಸಿದ್ದಲ್ಲದೇ ಸದರಿ ಎದುರುಗಾರರು ಈ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ದಿವಾಣಿ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದು ಇರುತ್ತದೆ. ಸದರಿಯವರು ಗ್ರಾಮದಲ್ಲಿ ಯಾರ ಮಾತಿಗೂ ಬೆಲೆ ಕೊಡದ ಸ್ವಭಾವದವರಿರುವುದಾಗಿ ತಿಳಿದು ಬರುತ್ತದೆ. ಆದಾಗ್ಯೂ ಸಹಿತ ಸದರಿಯವರಿಗೆ ಹಾಗೇ ಬಿಟ್ಟಲ್ಲಿ ಇದೇ ನೆಪ ಮುಂದೆ ಮಾಡಿಕೊಂಡು ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗಳಿಗೆ ದಕ್ಕೆವುಂಟು ಮಾಡಿಕೊಂಡು ಗ್ರಾಮದಲ್ಲಿ ಸಾರ್ವಜನಿಕ ಶಾಂತತಾ ಭಂಗಪಡಿಸುವುದಲ್ಲದೇ ಇನ್ನೂ ಹೆಚ್ಚಿನ ಘೋರ ಅಪರಾಧ  ಎಸಗುವ ಸಂಭವ ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 306/2017 ಕಲಂ ಮುಂಜಾಗ್ರತಾ ಕ್ರಮವಾಗಿ 107 ಸಿ.ಆರ್.ಪಿ.ಸಿ ರೀತ್ಯಾ ಕ್ರಮ ಕೈಗೊಂಡಿದ್ದು ಇರುತ್ತದೆ

2 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದುಬ್ಬದ ಮರಡಿ ಕ್ರಾಸ ಹತ್ತಿರ  ಮೋಟಾರ ಸೈಕಲ ನಂ. KA/17/EK/9554 ನೇದ್ದನ್ನುನೇದ್ದರ ಚಾಲಕ  ಮೃತಃ ವೀರಭದ್ರ @ ವೀರಭದ್ರಪ್ಪ ತಂದೆ ಯಲ್ಲಪ್ಪ ದೊಡ್ಡಮನಿ. ವಃ 30 ವರ್ಷ. ಸಾಃ ಬುಡರಕಟ್ಟಿ ಇವನು ತನ್ನ ಮುಮ್ಮಿಗಟ್ಟಿ ಕಡೆಯಿಂದ ಬೈಲಹೊಂಗಲ ಕಡೆಗೆ ನಡೆಸಿಕೊಂಡು ಬರುತ್ತಿರುವಾಗ  ಗರಗ ಸಮೀಪ ದುಬ್ಬದಮರಡಿ ಕ್ರಾಸ್  ಹತ್ತಿರ ಅಲ್ಲಿರುವ ತಿರುವಿನಲ್ಲಿ ತಡಕೋಡ ಕಡೆಯಿಂದ ಗರಗ ಕಡೆಗೆ  ಲಾರಿ ನಂಬರಃ KA01/AF/2877 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗ ವ ನಿಸ್ಕಾಳಜಿತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟಾರ ಸೈಕಲ ಸವಾರನಿಗೆ ಸ್ಥಳದಲ್ಲಿಯೇ ಮೃತ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2017 ಕಲಂ 279.304(ಎ) ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಗುಪ್ಪಿ-ಚಿಕ್ಕನರ್ತಿ ರಸ್ತೆ ಮೇಲೆ ಪಾದಗಟ್ಟಿ ಹತ್ತಿರ ಆರೋಪಿತನಾದ ಮಲ್ಲಿಕಾರ್ಜುನ ಯಲ್ಲಪ್ಪ ಶಾನವಾಡ. ಸಾ: ಚಿಕ್ಕನರ್ತಿ, ತಾ: ಕುಂದಗೋಳ ಈತನು ಮೋಟಾರ ಸೈಕಲ್ ನಂ ಕೆ.ಎ-25/ಕ್ಯೂ-3741 ನೇದ್ದನ್ನು ಯರಗುಪ್ಪಿ ಕಡೆಯಿಂದ ಚಿಕ್ಕನರ್ತಿ ಕಡೆಗೆ ಅತೀ ವೇಗೆ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಎಡಸೈಡಿನಲ್ಲಿ ನಡೆಯುತ್ತಾ ಚಿಕ್ಕನರ್ತಿ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯ ಅಣ್ಣ ಈರಣ್ಣ ವೀರುಪಾಕ್ಷಪ್ಪ ಜಾಲಿಬಡ್ಡಿ. ಸಾ: ಚಿಕ್ಕನರ್ತಿ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಸಾದಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Tuesday, August 29, 2017

CRIME INCIDENTS 29-08-2017ದಿನಾಂಕ 29-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ಆರೋಪಿರಾದ 1.ವಿಠ್ಠಲ ಕಟ್ಟಗಿ 2.ಶ್ರೀ ಶೈಲ್ ತಾರಿಹಾಳ 3.ದಾದಾಪೀರ ಬೇಟಗೇರಿ ಸಾ:ತಡಕೊಡ ಇವರೆಲ್ಲರೂ ತಮ್ಮ ತಮ್ಮ ಪಾಯ್ದೇಗೊಸ್ಕರ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹಾರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1820-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶೆಲವಡಿ ಗ್ರಾಮದ ಗುಡಿಸಾಗರ ಕ್ರಾಸ ಹತ್ತಿರ  ಆರೋಪಿತನು ತಾನು ಚಲಾಯಿಸಿತ್ತಿದ್ದ ಬುಲೆರೋ ವಾಹನ ಸಂಖ್ಯೆ ಕೆಎ-25/ಎಎ-8527 ನೇದ್ದನ್ನು ಶೆಲವಡಿ ಕಡೆಯಿಂದ ನವಲಗುಂದ ಕಡೆಗೆ ಅತಿ ಜೋರಿನಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನವಲಗುಂದ ಕಡೆಗೆ  ಹೊರಟಿದ್ದ  ಟಾಟಾ ಏಸ್ ಗೋಡ್ಸ್ ವಾಹನ ಸಂಖ್ಯೆ ಕೆಎ-20/ಸಿ-730 ನೇದ್ದಕ್ಕೆ ಹಿಂದಿನಿಂದ ಅಪಘಾತಪಡಿಸಿ ಬಾರಿ ವ ಸಾದಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕೋಳಿವಾಡ  ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-42/ಎಫ್-863 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ತನ್ನ ಬಲಸೈಡಿಗೆ ಬಂದು ಹುಬ್ಬಳ್ಳಿ ಕಡೆಯಿಂದ ಅಣ್ಣಿಗೇರಿ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಟಾಟಾ ಸುಮೋ ಗೋಲ್ಡ ವಾಹನ ಸಂಖ್ಯೆ ಕೆಎ-48/6124 ನೇದಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಟಾಟಾ ಸುಮಜೋದಲ್ಲಿದ್ದ ಗಿರೀಶ್ ಪಂಪಣ್ಣವರ ಇವರಿಗೆ ಹಣೆಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 119/2017  ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, August 28, 2017

CRIME INCIDENTS 28-08-2017ದಿನಾಂಕ. 28-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪಕ್ಕಿರಪ್ಪ ಮಾಂತೇಶ ದುಂಡಪ್ಪನವರ   ಇತನ ತಂದೆಯಾದ ಮಹಾಂತೇಶ ಯಲ್ಲಪ್ಪ ದುಂಡಪ್ಪನವರ  ಅವರು ಗುಡಗೇರಿಯ ಯುನಿಯನ್ ಬ್ಯಾಂಕ್ ನಲ್ಲಿ ಈ ವರೆಗೆ ಸುಮಾರು 02 ಲಕ್ಷ ರೂಗಳು ಹಾಗೂ ಲಕ್ಷ್ಮೇಶ್ವರದ ಲಾರ್ಸನ್ ಮತ್ತು ಟೂರ್ಬೋ ಫೈನಾನ್ಸ್ ದಲ್ಲಿ 25 ಸಾವಿರ ಹಾಗೂ ಅಲ್ಲಲ್ಲಿ ಕೈಗಡ ಸಾಲ ಅಂತಾ ಸುಮಾರು 02 ಲಕ್ಷ ರೂಗಳ ಸಾಲವನ್ನು ಮಾಡಿದ್ದಲ್ಲದೇ ಈಗ ಸುಮಾರು 01 ವರ್ಷದಿಂದ ತಮ್ಮ ಜಮೀನಿನಲ್ಲಿದ್ದ ಬೋರು ಬತ್ತಿ ಹೋಗಿದ್ದರಿಂದ ಅಲ್ಲದೇ ತಮ್ಮ ಜಮೀನಿನಲ್ಲಿದ್ದ ಪೀಕು ಮಳೆಯ ಅಭಾವದಿಂದ ಹಾಳಾಗಿದ್ದರಿಂದ ಮಾನಸೀಕ ಮಾಡಿಕೊಂಡು ಈ ದಿವಸ ದಿನಾಂಕಃ28/08/2017 ರಂದು ಮುಂಜಾನೆ 0900 ಗಂಟೆಯಿಂದ ಮದ್ಯಾಹ್ನ 2-30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮಷ್ಟಕ್ಕೆ ತಾವೇ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮ ವಾಸದ ಮನೆಯಲ್ಲಿ ಒಂದು ಹಗ್ಗದಿಂದ ತಮ್ಮ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ಅಂತಾ ಮಗನ ಪಿ್ರ್ಯಾಧಿ ಇರುವುದರಿಂದ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

2)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಕುರುಬಗೇರಿ ಓಣಿಯಲ್ಲಿ ಮೃತನಾದ ಶಂಕ್ರಪ್ಪ ದೇವಪ್ಪ ನರ್ತಿ @ ಸುಳ್ಳದ ವಯಾ 35 ವರ್ಷ ಜಾತಿಃ ಹಿಂದೂ ಕುರುಬ ಉದ್ಯೊಃ ಒಕ್ಕಲುತನ ಸಾಃ ಅಣ್ಣಿಗೇರಿ ಕುರುಬಗೇರಿ ಓಣಿ ಈತನು ತನ್ನ ಜಮೀನದ ಮೇಲೆ ಅಣ್ಣಿಗೇರಿಯ ಯುನಿಯನ್ ಬ್ಯಾಂಕಿನಲ್ಲಿ ಐವತ್ತು ಸಾವಿರ ರೂಪಾಯಿಗಳನ್ನು ಬೆಳೆ ಸಾಲ ಅಂತಾ ಮಾಡಿದ್ದು ಇರುತ್ತದೆ ಅಲ್ಲದೇ ಜಮೀನದ ಸಾಗುವಳಿ ಸಲುವಾಗಿ ಕೈಗಡ, ಮಹಿಳಾ ಸಂಘಗಳಲ್ಲಿ ಸಹಿತ ಸಾಲವನ್ನು ಪಡೆದಿದ್ದು ಇರುತ್ತದೆ ಮೃತನು ಬೇರೆಯವರ ಜಮೀನನ್ನು ಲಾವಣಿ ತರಿಖ ಸಾಗುವಳಿ ಮಾಡಿದ್ದು ಮಳೆ ಸರಿಯಾಗಿ ಆಗದ ಕಾರಣ ಜಮೀನುಗಳಲ್ಲಿ ಬೆಳೆ ಬರದೇ ಇರುವುದಕ್ಕೆ ಮೃತನು ತಾನು ಮಾಡಿರುವ ಸಾಲವನ್ನು ಪುನಃ ಹೇಗೆ ತೀರಿಸಬೇಕು ಅಂತಾ ಮಾನಸೀಕ ಮಾಡಿಕೊಂಡು ದಿನಾಂಕ 28-08-2017 ರಂದು ಮುಂಜಾನೆ 10-30 ಘಂಟೆಗೆ ತಾನು ಲಾವಣಿ ಮಾಡಿದ್ದ  ಧರ್ಮಣ್ಣ ನೀಲಗುಂದ ರವರ ಜಮೀನದಲ್ಲಿ ಭಾದೆಪಡುತ್ತಾ ಇದ್ದಾಗ ಸದರೀಯವನನ್ನು ಉಪಚಾರಕ್ಕೆ ಅಂತಾ ಕರೆದುಕೊಂಡು ಬರುವಾಗ ಉಪಚಾರ ಹೊಂದದೇ ಮರಣ ಹೊಂದಿದ್ದು ಸದರೀಯವನು ಸಾಲದ ಭಾದೆಯಿಂದ ವಿಷ ಸೇವನೆ ಮಾಡಿ ಅಥವಾ ಬೇರೆ ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮೂದ ಇರುವಂತೆ ಕ್ರಮಕೈಗೊಂಡು ತನಿಖೆ ಮುಂದುವರದಿರುತ್ತದೆ. ಈ ಕುರಿತು ಻ಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Saturday, August 26, 2017

CRIME INCIDENTS 26-08-2017

ದಿನಾಂಕ 26-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲಿಸ್ ಠಾಣಾ ವ್ಯಾಪ್ತಿಯ: ಕುಂದಗೋಳ-ದೇವನೂರ ರಸ್ತೆಯ ಮೇಲೆ ಕುಂದಗೋಳದಿಂದ 3 ಕಿ.ಮೀ ಅಂತರದಲ್ಲಿ ಆರೋಪಿ ನಂ 1-ಬಾಬು ತಂದೆ ಈಶ್ವರ ಮುಳಗುಂದ. ಸಾ: ಸೆಟ್ಲಮೆಂಟ ಹುಬ್ಬಳ್ಳಿ ಈತನು ಟಿ.ವ್ಹಿ.ಎಸ್ ಸ್ಟಾರ ಸಿಟಿ ಮೋಟಾರ ಸೈಕಲ್ ನಂ ಕೆ.ಎ-23/ಇ.ಎಲ್-2679 ನೇದ್ದರಲ್ಲಿ ಸಾಕ್ಷಿದಾರ ಸೇನಾಪತಿ ಅಣ್ಣಿಗೇರಿ ಈತನಿಗೆ ಹತ್ತಿಸಿಕೊಂಡು ದೇವನೂರ ಕಡೆಯಿಂದ ಕುಂದಗೋಳ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು, ಆರೋಪಿ ನಂ 2- ನಾಸೀರಅಹ್ಮದ ಅಬ್ದುಲಖಾದರ ಖತೀಬ. ಸಾ: ದೇವನೂರ ಈತನು ಮೋಟಾರ ಸೈಕಲ್ ನಂ ಕೆ.ಎ-25/ಇ.ವಾಯ್-4794 ನೇದ್ದರಲ್ಲಿ ಪಿರ್ಯಾದಿ ಮತ್ತು ಅವನ ಮಗ ನಿಂಗರಾಜ ಬಸಪ್ಪ ಹಲವಾಗಲಿ ಇವರಿಗೆ ಹತ್ತಿಸಿಕೊಂಡು ಕುಂದಗೋಳ ಕಡೆಯಿಂದ ದೇವನೂರ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿ, ಸದರಿ ಆರೋಪಿತರಿಬ್ಬರು ಎದುರು ಬದುರಾಗಿ ಪರಸ್ಪರ ತಮ್ಮ ಮೋಟಾರ ಸೈಕಲ್ ಗಳನ್ನು ಡಿಕ್ಕಿ ಮಾಡಿ ಅಪಘಾತಪಡಿಸಿ ತಮಗೆ ಹಾಗೂ ಬಸಪ್ಪಾ ಹಲವಗಿ ಇವರಿಗೆ ಸಾದಾ ವ ಭಾರಿ ಗಾಯಪೆಟ್ಟುಗಳಾಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 129/207 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ. 

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ಆರೋಪಿರಾದ 1ಪುಡಂಲಿಕ ಚಿಕ್ಕುಂಬಿ 2.ಸಲೀಂ ಮುಲ್ಲಾ 3.ಈಶ್ವರ ಪೂಜಾರ ಇವರೆಲ್ಲರೂ ತಮ್ಮ ತಮ್ಮ ಪಾಯ್ದೇಗೊಸ್ಕರ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹಾರ ಅಂಬುವ ನಸೀಬದ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1620-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುನಾ ಬೆಂಗಳೂರ ರಸ್ತೆ ಮೇಲೆ ಛಬ್ಬಿ ಕ್ರಾಸ್ ದಲ್ಲಿ ಆರೋಪಿನಾದ ಫಕ್ಕೀರಪ್ಪ ಯಲ್ಲಪ್ಪ ಬಸರಿಕೊಪ್ಪ ಸಾ!! ದುಮ್ಮವಾಡ ತಾ!! ಕಲಘಟಗಿ ಇತನು ಟಿಪ್ಪರ ಲಾರಿ ನಂಬರ ಕೆಎ-22/5825 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಒಮ್ಮೇಲೆ ಯೂಟರ್ನದಲ್ಲಿ ಯಾವುದೇ ಮೂನ್ಸೂಚನೆ ತೋರಿಸದೇ ರಸ್ತೆಯ ಬಲಗಡೆ ತಿರುಗಿಸಿ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದ ಕ್ಯಾಂಟರ್ ಗೂಡ್ಸ್ ಗಾಡಿ ನಂಬರ ಕೆಎ-16/ಸಿ-2013 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಗಾಡಿಯಲ್ಲಿದ್ದ ಕ್ಲೀನರ್ ಅಕ್ರಮಖಾನ ತಂದೆ ವಾಜೀದಖಾನ ಸಾ!! ಚಿತ್ರದುರ್ಗ ಅನ್ನುವವನಿಗೆ ಭಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಬಿಟ್ಟು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 201/2017 ಕಲಂ 279.338 ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗೆನಾಗರಕೊಪ್ಪ ಗ್ರಾಮದ ಪೂಜಾ ಕಿಲ್ಲಿಕ್ಯಾತರ  ಇವರು ವಾಸಿಸುವ ಮನೆಯ ಮುಂದೆ ರಸ್ತೆಯ ಮೇಲೆ ಆರೋಪಿತರು ಪಿರ್ಯಾದಿ ಹಾಗು ಅವರ ಮನೆಯ ಜನರೊಡನೆ ಹಿಂದಿನಿಂದಲೂ ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ತಂಟೆ ತಕರಾರು ಮಾಡುತ್ತಾ ಬಮದಿದ್ದು ಅದೆ ತಂಟೆಯ ದ್ವೇಷದಿಂದ ಆರೋಪಿತರಾದ 1.ರಮೇಶ ಕಿಲ್ಲಿಕ್ಯಾತರ ಹಾಗೂ ಇನ್ನೂ 2 ಜನರು ಕೂಡಿಕೊಂಡು ಬಂದು ಮನೆಯ ಜನರಿಗೆ ಅವಾಚ್ಯ ಬೈದಾಡಿ ಮೈದುನ ಸಿದ್ದಪ್ಪ ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಯ ಅತ್ತೆ ಸರಸ್ವತಿ ಇವಳಿಗೆ ಕೈಯಿಂದಾ ಹೊಡಿಬಡಿ ಮಾಡಿ ಕಾಲಿನಿಂದಾ ಒದ್ದು ಒಳನೋವುಪಡಿಸಿ, ಪಿರ್ಯಾಧಿಯ ಗಂಡನಿಗೂ ಸಹಾ ಕೈಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 301/2017 ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:  ಮುಮ್ಮಿಗಟ್ಟಿ ಗ್ರಾಮದ ಮೃತ ಕರಿಯಪ್ಪ.ಫಕ್ಕೀರಪ್ಪ.ತಳವಾರ ವಯಾ-46 ವರ್ಷ. ಸಾ/ಅಮ್ಮಿನಬಾವ. ಹಾಲಿ ಮುಮ್ಮಿಗಟ್ಟಿ ಈತನು ಸುಮಾರು -5-6 ವರ್ಷಗಳಿಂದಾ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಪ್ರತಿ ದಿವಸ ವಿಪರೀತ ಕುಡಿದು ತೀರುಗಾಡುತ್ತಿದ್ದನು. ವಿಪರೀತ ಸರಾಯಿ ಕುಡಿದು ಗುಡ್ಡದ ದಾರಿಯಲ್ಲಿ ತಂದೆಯ ಹೊಲದಲ್ಲಿಯ ದಡ್ಡಿಯಲ್ಲಿ ಮಲಗಿಕೊಂಡಾಗ ವಿಪರೀತ ಸರಾಯಿ ಕುಡಿದಿದ್ದಕ್ಕೆ ತರಾಸ ಆಗಿ ಹೊಲದಲ್ಲಿಯೇ ಮೃತ ಪಟ್ಟಿದ್ದು ಅದೆ ವಿನಹ ಸದರಿಯವನ ಮರಣದಲ್ಲಿ ಬೇರೆ ಏನು ಮತ್ತು ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾಂತಾ ವರದಿಗಾರಳ  ಅಂತಾ ರೇಣುಕಾ ತಳವಾರ ಫಿಯಾಱಧಿ  ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.