ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, August 1, 2017

CRIME INCIDENTS 01-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 01/08/2017 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ ಗ್ರಾಮದ  ಎನ್.ಎಚ್-4 ಬೆಳಗಾವಿ-ಧಾರವಾಡ ಪಿ.ಬಿ.ರಸ್ತೆಯ ಮೇಲೆ ಮುಮ್ಮಿಗಟ್ಟಿ ಜೈನ ಬಸ್ತಿ 3 ಜನ ಸುಲಿಗೆಕೋರರು ಒಂದು ಹೊಸ ಕೆಂಪು ಬಣ್ಣದ ಪಲ್ಸರ್ ಮೋಟಾರ ಸೈಕಲ ನಂಬರಃ ಕೆಎಃ25/ಟಿಆರ್/ಬಿ/2520 ನೇದ್ದರ ಮೇಲೆ ಬಂದು ರಸ್ತೆ ಬದಿಗೆ ಟ್ಯಾಕ್ಟರ ಅಟ್ವೇಟೈಜಮೇಂಟ ಮಿನಿ ಲಾರಿ ನಂಬರಃ ಎಮ್ಎಚ್/12/ಎಫ್ಡಿ/7508 ನೇದ್ದರ ಹಿಂದೆ ಮಲಗಿದ್ದ ಕಮಲೇಶ ಕುಮಾರ ಎಬ್ಬಿಸಿ ಕೈಯಿಂದಾ ಹೊಡೆದು ಪೈಸಾ ನಿಖಾಲ ರಾಂಡಕೇ ಅಂತಾ ಬೈದಾಡಿ ಚಾಕುದಿಂದಾ ಹೊಡೆದು ಗಾಯಪಡಿಸಿ ಕಿಸೆಯಲ್ಲಿಯ 500/-ರೂ ರೋಖ ರಕಂ ಸುಲಿಗೆ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ .107/2017 ಕಲಂ 397.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಗ್ರಾಮದ ಮೃತ ಪ್ರೇಮಾ ಕೋಂ ಅಶೋಕ ಮಾರಿಹಾಳ 52 ವರ್ಷ ಇವಳು ಅದರಗುಂಚಿಯ ತಮ್ಮ ಹೋಲದಲ್ಲಿ ಗೊಬ್ಬರ ಹಾಕಿಸುತ್ತಿರುವಾಗ ಆಕಸ್ಮಾತ ಹಾವು ಕಚ್ಚಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸಗೆ ತರುತ್ತಿರುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದು ಸದರಿಯವಳ ಮರಣದಲ್ಲಿ ಬೇರೆ ಯಾವುದೆ ಸಂಶಯ ಇರುವದಿಲ್ಲ ಅಂತಾ  ಅಶೋಕ ಫಿಯಾಱಧಿ ನೀಡಿದ್ದು  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 32/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.