ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, August 2, 2017

CRIME INCIDENTS 02-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 02/08/2017 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 63 ರಸ್ತೆಯ ಅಣ್ಣಿಗೇರಿ ಸಮೀಪದ ದೇಶಪಾಂಡೆ ರವರ ಹೊಲದ ಹತ್ತಿರ ಆರೋಪಿತ ಬೊಲೆರೋ ವಾಹನ ನಂಬರ್ KA-25/MA 7563 ನೆದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅಣ್ಣಿಗೇರಿ ಕಡೆಯಿಂದ ಗದಗ ಕಡೆಗೆ ಅತೀ  ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದೆ ಹೊರಟ ಡಸ್ಟರ್ ಕಾರ್ ನಂಬರ್ KA-36/N 2418 ನೇದ್ದಕ್ಕೆ ಎಡ ಬದಿಗೆ ತನ್ನ ಬೊಲೆರೋ ವಾಹನವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದಲ್ಲದೇ ಸದರ ಕಾರಿನ ಮುಂದೆ ರಸ್ತೆಯ ಬದಿಗೆ ಇದ್ದ ಪಿರ್ಯಾದಿ ಚಿಕ್ಕಪ್ಪನು ಹೊಡೆದುಕೊಂಡು ಹೊರಟ ಟ್ರ್ಯಾಲಿ ಚಕ್ಕಡಿಗೆ ಸಹಿತ ಬೊಲೆರೋ ವಾಹನವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಚಕ್ಕಡಿ ಜಖಂ ಆಗುವಂತೆ ಮಾಡಿ ಚಕ್ಕಡಿಯಲ್ಲಿದ್ದ ಪಿರ್ಯಾದಿ ಚಿಕ್ಕಪ್ಪಿನಿಗೆ ಸಾದಾ ಗಾಯ ಪೆಟ್ಟು ಪಡಿಸಿದ್ದಲ್ಲದೇ ಚಕ್ಕಡಿಗೆ ಕಟ್ಟಿದ ಎರಡು ಎತ್ತುಗಳಿಗೂ ಸಹಿತ ಗಾಯ ಪೆಟ್ಟು ಮಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 112/2017 ಕಲಂ 279.337.338. ನೇದ್ದರಲ್ಇ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಯಾದವಾಡ    ರಸ್ತೆ ದಾಸನಕೊಪ್ಪ ಗ್ರಾಮದ ಹತ್ತಿರ  ಧಾರವಾಡ ದಿಂದ ಯಾದವಾಡ ಕಡೆಗೆ ಮೋಟರಸೈಕಲ ನಂ KA 25 ED 6928  ನೇದ್ದರ ಚಾಲಕನಾದ ಮಹೇಶ ಶೇದೆಪ್ಪ ಗೊಲನ್ನವರ ಸಾಃಮನಗುಂಡಿ ಇವನು ತನ್ನ ತಾಯಿ ನೀಲವ್ವಳಿಗೆ ಹಿಂದೆ ಕುಡ್ರಿಸಿ ಕೊಂಡು    ಅತೀ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರೋಡ ಹಂಸನ್ನು ಜಿಗಿಸಿ ಅಪಘಾತ ಪಡಿಸಿ ಅಪಘಾತದಲ್ಲಿ ನೀಲವ್ವ ಕೋಂ ಶೇದೆಪ್ಪ ಗೊಲನ್ನವರ ವಯಾಃ58ವರ್ಷ ಇವಳಿಗೆ ಬಾರಿ ಗಾಯ ಪಡಿಸಿ ಕೀಮ್ಸ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ಸಾಯಂಕಾಲ 07-30 ಗಂಟೆಗೆ ನೀಲವ್ವ ಕೋಂ ಶೇದೆಪ್ಪ ಗೊಲನ್ನವರ ವಯಾಃ58ವರ್ಷ ಸಾಃಮನಗುಂಡಿ ಇವಳಿಗೆ ಮರಣ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 160/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಶೆಟ್ಟಿ ಲಂಚ್ ಹೋಮ ಹತ್ತೀರ ಗೂಡ್ಸ ಲಾರಿ ನಂ AP-16-TC-2259 ನೇದ್ದರ ಚಾಲಕನು ರಸ್ತೆಯಲ್ಲಿ ಯಾವುದೆ ಮುನ್ಸೂಚನೆ ನೀಡದೆ ಹಾಗು ಯಾವುದೆ ಇಂಡಿಕೇಟರ್ ಹಾಕದೆ ನಿಷ್ಕಾಳಜಿತನದಿಂದ ರಸ್ತೆಯಲ್ಲಿ ಲಾರಿಯನ್ನು ನಿಲ್ಲಿಸಿದ್ದರಿಂದ ಮೋಟಾರ್ ಸೈಕಲ್ ನಂ KA-25-EP-4111 ನೇದ್ದರ ಚಾಲಕನಾದ ಅಶೋಕ ಲೋಕಪ್ಪ ಲಮಾಣಿ 26 ವರ್ಷ ಸಾ..ಜುಂಜನಬೈಲ್ ತಾಂಡಾ ತಾ..ಕಲಘಟಗಿ ಇವನು ಜುಂಜನಬೈಲ್ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನೆಡೆಸಿಕೊಂಡು ಬಂದು ರಸ್ತೆಯಲ್ಲಿ ನಿಂತ ಗೂಡ್ಸ ಲಾರಿಯನ್ನು ಗಮನಿಸಿದೆ ಅದರ  ಹಿಂಬದಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತೆಲೆಗೆ ಎಡಗೈಗೆ ಗಂಭೀರ ಗಾಯಪಡಿಸಿಕೊಂಡು ಉಪಚಾರಕ್ಕೆ ಅಂತಾ ಕಲಘಟಗಿ ಸರಕಾರಿ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದಾ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸಿದೆ ಇಂದು ದಿ..02-08-2017 ರಂದು ಬೆಳಗಿನ 01-15 ಗಂಟೆಯ ಸುಮಾರಿಗೆ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 251/2017 ಕಲಂ 279.280.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಕಾರವಾರ  ತಡಸ್  ರಸ್ತೆಯ ಮೇಲೆ ತಡಸ್ ಕ್ರಾಸ್ ಸಮೀಪ  ಇದರಲ್ಲಿ  ಆರೋಪಿತನಾದ  ಭಾಷಾಸಾಬ ತಂದೆ ಖಾದರಸಾಬ ದೊಡಮನಿ ಸಾ: ದುಂಡಸಿ ಇವನು ತಾನು ನಡೆಸುತ್ತಿದ 407 ಟಿಪ್ಪರ ನಂ ಕೆ 27 /ಬಿ 896 ನೇದ್ದನ್ನು ಕಾರವಾರ ರಸ್ತೆ ಕಡೆಯಿಂದ ತಡಸ್ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಹುಬ್ಬಳ್ಳಿ ರಸ್ತೆ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಬರುತ್ತಿದ್ದ ಪಿರ್ಯಾದಿ ಮೋಟರ್ ಸೈಕಲ್ ನಂಬರ ಕೆ.ಎ 26/ ಎಸ್. 4470 ನೇದ್ದಕ್ಕೆ  ಡಿಕ್ಕಿ ಮಾಡಿ ಮೋಟರ್ ಸೈಕಲ್ ಸವಾರನಿಗೆ ಬಾರಿ ಗಾಯಪಡಿಸಿ ಮೋಟರ್ ಸೈಕಲ್ ಹಿಂದೆ ಕುಳಿತ ಪಿರ್ಯಾದಿಗೆ ಸಾದಾ ಗಾಯಪಡಿಸಿದಲ್ಲದೇ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೇ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ  ಈ ಕುರಿತು ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 252/2017 ಕಲಂ ವಾಹನ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.