ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, August 4, 2017

CRIME INCIDENTS 03-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 03-08-2017 ರಂದು ವರದಿಯಾದ ಪ್ರಕರಣಗಳು

1)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:15-07-2017 ರಂದು ಕಲಘಟಗಿ ತಾಲೂಕ ಬೋಗೆನಾಗರಕೊಪ್ಪ ಗ್ರಾಮದಿಂದ ಪಿರ್ಯಾದಿ ವಯಾ 17 ವರ್ಷ ಇವಳಿಗೆ  ಆರೋಪಿ ಮಾದೇವಪ್ಪ ತಂದೆ ಯಲ್ಲಪ್ಪ ಗಂಜಿಗಟ್ಟಿ ಸಾ: ಬೋಗೇನಾಗರಕೊಪ್ಪ ಇತನು ಆರಾಮ ಇಲ್ಲ ಅಂತಾ ಪುಸಲಾಯಿಸಿಕೊಂಡು ತನ್ನ ಟಾಟಾ ಎಸ್ ವಾಹನದಲ್ಲಿ ಕರೆದುಕೊಂಡು ಚಳಮಟ್ಟಿ ಗ್ರಾಮಕ್ಕೆ ಹೋಗಿ ಅಲ್ಲಿ ಅವನ ಅಕ್ಕ ನೀಲವ್ವ ಮತ್ತು ಅವಳ ಗಂಡ ಚನ್ನಪ್ಪ ಶೆರೆವಾಡ ಇವರೆಲ್ಲರೂ ಕೂಡಿ ಪಿರ್ಯಾದಿಗೆ ಹೊಡಿಬಡಿ ಮಾಡಿ ಅಕ್ರಮ ಬಂದನದಲ್ಲಿಟ್ಟುಕೊಂಡು ಅವಳಿಗೆ ನಿದ್ರೆ ಮಾತ್ರೆ ಹಾಕಿ ರಾತ್ರಿ ಹೊತ್ತಿನಲ್ಲಿ ಅವಳು ಅಪ್ರಾಪ್ತಳು ಅಂತಾ ಗೊತ್ತಿದ್ದು ಅವಳ ಮೇಲೆ  ಅತ್ಯಾಚಾರ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 03-08-2017 ರಂದು ಮುಂಜಾನೆ 11-00 ಗಂಟೆ ಸುಮಾರಕ್ಕೆ ಕುಸುಗಲ್ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆಫೀಸದಲ್ಲಿ ಇದರಲ್ಲಿಯ ಪಿರ್ಯಾಧಿ ರಾಮಪ್ಪ ದೇವಪ್ಪ ಹೆಬ್ಬಾಳ @ ತಳವಾರ ಸಾ!!ಕುಸುಗಲ್ಲ ಇವರು ಶಾಲಾ ಮುಖ್ಯೋಪಾದ್ಯಾಯರಿಗೆ ಸರಕಾರದಿಂದ ಮಂಜೂರಾದ ಸೈಕಲ್ ಗಳನ್ನು ಶಾಲಾ ಮಕ್ಕಳಿಗೆ ವಿತರಿಸುವ ಬಗ್ಗೆ ಕೇಳುತ್ತಿದ್ದಾಗ ಇದರಲ್ಲಿ ಆರೋಪಿತರಾದ 1) ಕಲ್ಲನಗೌಡ ಹನಮಂತಗೌಡ ಕೌಜಗೇರಿ 2) ವೀರನಗೌಡ ಹನಮಂತಗೌಡ ಕೌಜಗೇರಿ ಇಬ್ಬರೂ ಸಾ!! ಕುಸುಗಲ್ಲ ಇವರುಗಳು ಸದರಿ ಪಿರ್ಯಾಧಿಗೆ ಅದನೇನ ಕೇಳತಿಲೇ ವಾಲ್ಮೀಕಿ ಸೂಳೆ ಮಗನ ಅಂತಾ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಯಿಂದ ಹೊಡಿ ಬಡಿ ಮಾಡಿ ಉಗುರಿನಿಂದ ಚೂರಿ  ಕಾಲಿನಿಂದ ಒದ್ದು  ಗಾಯಗೊಳಿಸಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

3 ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಕೋಟೂರ ಗ್ರಾಮದಲ್ಲಿರುವ ವರದಿಗಾರನ ಸೋಮಪ್ಪ ನಿಂಗಪ್ಪ ಕೊಟಬಾಗಿ ಮನೆಯ ಕೋಣೆಯಲ್ಲಿ ದಿನಾಂಕಃ 02-08-2017 ರಂದು ರಾತ್ರಿ 11-00 ಗಂಟೆಯಿಂದಾ ದಿನಾಂಕಃ 03-08-2017 ರ ಮುಂಜಾನೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಮಗಾ ಚಂದ್ರು @ ಚನ್ನಪ್ಪಾ ತಂದೆ ಸೋಮಪ್ಪಾ ಕೋಟಬಾಗಿ. ವಯಾಃ 28 ವರ್ಷ. ಸಾಃ ಕೋಟೂರ ಇತನು ತನ್ನ ತಂದೆ [ವರದಿಗಾರ] ಮಕ್ಕಳ ಮದುವೆಗೆ ಸಾಲ ಮಾಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ಜನರು ಮಲಗಿದ ಸಮಯದಲ್ಲಿ ತನ್ನಷ್ಟಕ್ಕೆ ತಾನೆ ಜೀವನದಲ್ಲಿ ಜೀಗುಪ್ಸೆಗೊಂಡು ಮನೆಯ ಕೋಣೆಯ ಹಂಚಿನ ಬೆಲಗಕ್ಕೆ ಹಗ್ಗದಿಂದಾ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ವರದಿಗಾರನ ವರದಿಯಿಂದಾ ತಿಳಿದು ಬಂದಿದ್ದುಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


4) ಗರಗ ಪೊಲೀಸ ಠಾಣೆ ಹದ್ದಿ ಪೈಕಿ ಮೃತ ಮಡಿವಾಳಪ್ಪ ತಂದೆ ಬಸಪ್ಪ ತಳವಾರ ವಯಾ 27 ವರ್ಷ ಸಾಃ ಮುಳಮುತ್ತಲ ಇತನು ಸುಮಾರು 4 ತಿಂಗಳಿಂದಾ ಸರಾಯಿ ಕುಡಿಯುವ ಚಟ್ಟಕ್ಕೆ ಅಂಟಿಕೊಂಡಿದ್ದು ದುಡಿಯಲಾರದೆ ತಿರುಗಾಡತ್ತಿದ್ದು ಸರಾಯಿ ಕುಡಿಯುವದನ್ನು ಬಿಡು ಅಂತಾ ಹೇಳಿದಕ್ಕೆ ಮಾನಸಿಕ ಮಾಡಿಕೊಂಡು ಈ ದಿವಸ ದಿನಾಂಕ 3-8-2017 ರಂದು ಮುಂಜಾನೆ 8-00 ಗಂಟೆಗೆ ಸುಮಾರಿಗೆ ಮುಳಮುತ್ತಲ ಗ್ರಾಮದ ಕೆರೆಯ ಒಂಡೆಯ ಮೇಲೆ ಯಾವದೋ ವಿಷಕಾರಕ ಎಣ್ಣಿಯನ್ನು ಸೇವಿಸಿ ಅಸ್ವಸ್ಥನಾಗಿದ್ದು ಅವನಿಗೆ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಧಾರವಾಡ ಸಮೀಪ್ ಪತ್ರೇಶ್ವರ ಮಠದ ಹತ್ತಿರ ಮಾರ್ಗ ಮದ್ಯದಲ್ಲಿಯೇ ಮೃತಪಟ್ಟಿದು ಅದೆ, ಅಂತಾ ಮೃತನ ಹೆಂಡತಿ ತನ್ನ ವರದಿಯನ್ನು ಕೂಟ್ಟಿದ್ದು ಅದನು ಧಾಖಲಿಸಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.