ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, August 4, 2017

CRIME INCIDENTS 04-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 04-08-2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಲಿಹಾಳ ಗ್ರಾಮದ ಕಾಣೆಯಾದ ಹುಡುಗಿ ರುಜುವಾನ ತಂದೆ ರಾಜೇಸಾಬ ಮುಲ್ಲಾನವರ ವಯಾ:18 ವರ್ಷ ಸಾ:ಬ್ಯಾಲ್ಯಾಳ ಈತಳು  ದಿನಾಂಕ :02/08/2017 ರಂದು ಮಧ್ಯಾಹ್ನ 13-30 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಕಾಣೆಯಾಗಿದ್ದು ಇರುತ್ತದೆ.  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬಂಡಿವಾಡ ಗ್ರಾಮದಲ್ಲಿರುವ ಚನ್ನವ್ವ ಮೆಣಸಿನಕಾಯಿ  ಮಗಳಾದ ಶ್ರೀಮತಿ ಅಶ್ವಿನಿ ಕೋಂ ಅಣ್ಣಪ್ಪ ತೋಟಪ್ಪನವರ ವಯಾ. 23 ವರ್ಷ ಇವಳು ಹುಬ್ಬಳ್ಳಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಇಲ್ಲಿಯವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 180/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಸರಂಬಿ ಗ್ರಾಮದ  ಸುಂದರವ್ವ ಮಾಗಿಣೆ ಇವರ ವಾಸದ ಮನೆಯಿಂದ ಮಗ ಸಂಬಾಜಿ ತಂದೆ ಹನಮಂತಪ್ಪ  ಮೆಗಾಣಿ 22 ವರ್ಷ ಸಾ; ಹಸರಂಬಿ ಇತನು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋದವನು ಇಲ್ಲಿಯವರೆಗೂ ಮೆನೆಗೆ ಮರಳಿ ಬಂದಿರುವುದಿಲ್ಲಾ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 257/2017  ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ ಗೌರವ್ವ ವಾಲಕೇರಿ ಇವರ ಗಂಡನಾದ ಮಂಜುನಾಥ ವಾಲಕೇರಿ ಇವರನ್ನು  ಇರಲಿಲ್ಲ ಹಿತ್ತಲ ಕಡೆಗೆ ಆಗಲಿ ಅಥವಾ ಅಕ್ಕ ಪಕ್ಕದ ಮನೆಗಳಿಗೆ ಹೋಗಿರಬಹುದು ಅಂತಾ ತಿಳಿದು  ಮುಂದೆ ನಾನು  ಸಾಯಂಕಾಲ 18-00 ಗಂಟೆಯ ಸುಮಾರಿಗೆ ಕೂಲಿ ಕೆಲಸದಿಂದ ಮರಳಿ ಮನೆಗೆ ಬಂದಿದ್ದು ಆಗಲೂ ಸಹ ಮನೆಯಲ್ಲಿ ನನ್ನ ಗಂಡ ಕಾಣಿಸಲಿಲ್ಲ ಹುಡುಕಾಡಿದರೂ ಸಿಕ್ಕಿರುವದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 95/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

5. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಗ್ರಾಮದ  ಮೃತ ಲೋಕೇಶ ತಂದೆ ಅರ್ಜುನ ಕಲಾಲ ವಯಾ: 30 ವರ್ಷ ಸಾ: ಅಂಬೇಡ್ಕರ ನಗರ ಕುಂದಗೋಳ ಇವನು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯಲು ದುಡ್ಡು ಸಿಗದಿದ್ದಾಗ ಅದನ್ನೆ ಮಾನಸಿಕ ಮಾಡಿಕೊಂಡು ನಿನ್ನೆ ದಿವಸ ದಿನಾಂಕ: 03-08-2017 ರಂದು ರಾತ್ರಿ 10:30 ಗಂಟೆಯಿಂದ ಈ ದಿವಸ ದಿನಾಂಕ: 04-08-2017 ರ ಮುಂಜಾನೆ 8:00 ಗಂಟೆಯ ನಡುವಿನ ಅವಧಿಯಲ್ಲಿ ತಾನು ಮಲಗುವ ಕೋಣೆಯಲ್ಲಿ ತನ್ನಷ್ಟಕ್ಕೆ ತಾನೇ ಆರ್.ಸಿ.ಸಿ ಮೇಲ್ಛಾವಣಿಗೆ ಹೊಂದಿಕೊಂಡಿರುವ ಕಬ್ಬಿಣದ ಹುಕ್ಕಿಗೆ ಕಾತಿ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇದರ ಹೊರತಾಗಿ ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 22/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.