ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, August 5, 2017

CRIME INCIDENTS 05-08-2017

               ದಿನಾಂಕ. 05-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೊಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 06-06-2017 ರಂದು ಮುಂಜಾನೆ 8-00 ಗಂಟೆಗೆ ಕುಂದಗೋಳ ಶಹರದ ಕಾಳಿದಾಸ ನಗರದಲ್ಲಿರುವ ಪಿರ್ಯಾದಿ ಮನೆಯಲ್ಲಿಂದ ಇದರಲ್ಲಿ ಕಾಣೆಯಾದ ಶಿವಪ್ಪ ಬಸವಣ್ಣೆಪ್ಪ ಅರಳಿಕಟ್ಟಿ. ವಯಾ: 56 ವರ್ಷ, ಸಾ: ಕಾಳಿದಾಸ ನಗರ ಕುಂದಗೋಳ ಇವನು ಡ್ರೈವರ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು ಇದೂವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಕಾಣೆಯಾದ ನನ್ನ ಗಂಡನನ್ನು ಪತ್ತೆ ಮಾಡಿಕೊಡಲು ವಿನಂತಿ ಅದೆ ಅಂತಾ ಪಿರ್ಯಾದಿಯು ವರದಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಕುಂದಗೊಳ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಾಗಿದ್ದು ಇರುತ್ತದೆ. 2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 03-08-2017 ರಂದು ಮದ್ಯಾಹ್ನ 1-00 ಗಂಟೆಗೆ ವರೂರ ಗ್ರಾಮದ ಹತ್ತಿರ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಶ್ರೀರಾಮ ಕುಮಾವತ ಸಾ: ಮೈಸೂರ   ಇತನ  ಕಾರ ನಂ. ಕೆಎ-55-ಎಂ-7926 ನೇದ್ದರ ಚಾಲಕನು ತನ್ನ ಕಾರನ್ನು ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿ, ರಸ್ತೆ ದಾಟುತ್ತಿದ್ದ  ಪಿರ್ಯಾದಿ ಬಸಪ್ಪ ಚನ್ನಬಸಪ್ಪ ಸಂಗಣ್ಣವರ ಸಾ. ಅಗಡಿ ಇವನಿಗೆ ಡಿಕ್ಕಿ ಮಾಡಿ, ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.