ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, August 6, 2017

CRIME INCIDENTS 06-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06/08/2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮಾಪುರ ಗ್ರಾಮದ ಮೃತ ಶ್ರೀಕಾಂತ ತಂದೆ ನಾಗಪ್ಪ ಮಾನಿ  ಇವನು  ಕೋಟೂರ ವಿಜಯಾ ಬ್ಯಾಂಕಿನಲ್ಲಿ 2,00,000/- ಕೆವಿಜಿ ಬ್ಯಾಂಕ ಮುಗದದಲ್ಲಿ 1,50,000/-   ಬೆಳೆಸಾಲ ಪಡೆದುಕೊಂಡಿದ್ದಲ್ಲದೇ ಹೆಸರಿನಲ್ಲಿ ಎಕ್ಸಸ್ ಬ್ಯಾಂಕ 18,000/- ರೂ ಹಾಗೂ ಮಹಿಳಾ ಸಂಘಗಳಲ್ಲಿ ಸಾಲ ಮಾಡಿ ಮಳೆ ಸರಿಯಾಗಿ ಆಗದೇ ಬೆಳೆ ಬಾರದ್ದರಿಂದ ಮಾಡಿದ ಸಾಲವನ್ನು ತೀರಿಸಲಾಗದೇ ಮಾನಸಿಕವಾಗಿ ಅಸ್ಥತಿಗೊಂಡು ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 05-08-2017 ರಂದು ರಾತ್ರಿ 1100 ಗಂಟೆಯಿಂದ ದಿನಾಂಕ 06-08-2017 ರ ರಾಮಾಪೂರ ಗ್ರಾಮದ ತಮ್ಮ ಜಮೀನಿನ  ಬೇವಿನ ಗಿಡಕ್ಕೆ ತನ್ನಷ್ಟಕ್ಕೆ ತಾನೇ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿ ಕೊಟ್ಟ ವರದಿಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 39/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ 

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ  ಗ್ರಾಮೀಣ ಇದರಲ್ಲಿ ಮೃತ  ಮಾಲತೇಶ ಅಷ್ಟೇಕರ ಇವನಿಗೆ ಕೆಲ ತಿಂಗಳ ಹಿಂದೆ ಮದುವೆ ಪಿಕ್ಸ ಆಗಿ ಅನಾನೂಕೂಲತೆಯಿಂದ ಮದುವೆ ಕ್ಯಾನ್ಸಲ್ ಆಗಿದ್ದು ಇರುತ್ತದೆ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಾಲತೇಶ ಸರಾಯಿ ಕುಡಿಯುವ ಚಟ ಬೆಳಸಿಕೊಂಡು ಮಾನಸಿಕವಾಗಿ ಅಸ್ವಸ್ಥನಾಗಿದ್ದು ಇರುತ್ತದೆ. ಇದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 05-08-2017 ರಂದು ಬೆಳಗಿನ 1000 ಗಂಟೆಯಿಂದ ದಿನಾಂಕ 06-08-2017 ರ ಬೆಳಗಿನ 1000 ಗಂಟೆಯ ನಡುವಿನ ಅವದಿಯಲ್ಲಿ ಮೃತನು ಯರಿಕೊಪ್ಪ ಗ್ರಾಮದ ಸಾರ್ವಜನಿಕ ಗುಡ್ಡದಲ್ಲಿ ಯಾವುದೇ ವಿಷಕಾರಕ ಗುಳಿಗೆಗಳನ್ನು ಸೇವಿಸಿ ಮೃತಪಟ್ಟಿದ್ದು ಇರುತ್ತದೆ  ವಿನಹ ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆ ಫಿಯಾಱಧ ನೀಡಿದ್ದು ಈ ಕುರಿತು ಯುಡಿನಂ 40/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ