ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, August 7, 2017

CRIME INCIDENTS 07-08-2017

ದಿನಾಂಕ. 07-08-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 03-08-2017 ರಂದು 2330 ಗಂಟೆಗೆ ಎನ್.ಎಚ್-4 ರಸ್ತೆಯ ಮೇಲೆ ಬೆಳ್ಳಿಗಟ್ಟಿ ಗ್ರಾಮದ ಕ್ಯಾರಕಟ್ಟಿ ಫಾರ್ಮಹೌಸ ಹತ್ತಿರ ಇದರಲ್ಲಿ ಆರೋಪಿತನಾದ ಬಸಪ್ಪ ದ್ಯಾಮಪ್ಪ ಮೇಗೂರ. ಸಾ: ಮೆಣಸಗಿ, ತಾ: ರೋಣ, ಜಿ: ಗದಗ ಈತನು ತಾನು ಚಲಾಯಿಸುತ್ತಿದ್ದ ಲಾರಿ ನಂ ಟಿ.ಎನ್-04/ಎ.ಎಮ್-8358 ನೇದ್ದನ್ನು ಶಿಗ್ಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೊರಟಿದ್ದ ಯಾವುದೋ ಲಾರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಾನು ಚಲಾಯಿಸುತ್ತಿದ್ದ ಲಾರಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಕುಂದಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ.

2) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 07-08-2017 ರಂದು 1130 ಗಂಟೆಗೆ ಧಾರವಾಡ ಯಾದವಾಡ ರಸ್ತೆ ಪತ್ರೆಪ್ಪಜ್ಜನ ಮಠದ ಹತ್ತಿರ ರಸ್ತೆ ಮೇಲೆ ಆರೋಪಿತ ಪಕ್ಕಿರಪ್ಪ ಸಾಳೋಂಕಿ ಸಾ: ಉಪ್ಪಿನಬೇಟಗೇರಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ಯಾವುದೇ ಪಾಸು ವ ಪರ್ಮಿಟ ಪಡೆಯದೇ ಒಂದು ಸ್ಟಾರ ಗುಟಕಾ ಕೈ ಚೀಲದಲ್ಲಿ ಒಟ್ಟು 48 ಓರಿಜನಲ್ ಚಾಯ್ಸ  ವಿಸ್ಕಿ ತುಂಬಿದ 180 ಎಂ.ಎಲ್  ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ:2701/- ಹಾಗೂ ಒಟ್ಟು 96 ಬೆಂಗಳೂರ ಮಾಲ್ಟ  ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಸರಾಯಿ ಟೆಟ್ರಾ ಪಾಕೀಟಗಳು ಅ:ಕಿ:2293/- ನೇದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿ: 07-08-2017 ರಂದು 1530 ಗಂಟೆ ಸುಮಾರಿಗೆ  ಹುಲಿಗಿನಕಟ್ಟಿ  ಕಲಘಟಗಿ ರೋಡ ಗುಡ್ ನ್ಯೂಸ್ ಕಾಲೇಜ ಸಮೀಪ ಇದರಲ್ಲಿ ಆರೋಪಿತ ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ. ಕೆಎ-25 ಇ.ವಿ-5889 ನೇದ್ದನ್ನು ಹುಲಿಗಿನಕಟ್ಟಿ ಕಡೆಯಿಂದ ಕಲಘಟಗಿ ಕಡೆಗೆ ಅತೀ ವೇಗ ವ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೊರಟಿದ್ದ ಪಿರ್ಯಾದಿ ಪರಶುರಾಮ ಚಂದ್ರಶೇಖರ ದಾಗೀನದಾರ ಇತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಉಪಚಾರಕ್ಕೆ ಸಹಕರಿಸದೇ ಠಾಣೆಗೆ  ಮಾಹಿತಿ ತಿಳಿಸಿದ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ತನಿಖೆ ಮುಂದುವರೆದಿರುತ್ತದೆ.

4)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ನೀಲಪ್ಪ ತಂದೆ ಹನುಮಂತಪ್ಪ ಹಳ್ಳಿ ಈತನು ದಿ:06/08/2017 ರಂದು ರಾತ್ರಿ 11-00 ರ ಸುಮಾರಿಗೆ ತಾನು ಮಾಡಿದ್ದ  ಸಾಲವನ್ನು ತೀರಿಸಲಾಗದೆ ಸಾರಾಯಿ ಕುಡಿದ ನಿಶೆಯಲ್ಲಿ ನೌಕರಿದಾರನಾಗಿ ಸಾಲ ತೀರಿಸಲಾಗಿಲ್ಲ ಅಂತಾ ತನ್ನ ಮನೆಯಲ್ಲಿ ಮಾತನಾಡುತ್ತ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ  ಜಿಗುಪ್ಸೆಗೊಂಡು ತನ್ನ ಹೆಂಡತಿಯು ಅಡುಗೆ ಮನೆಯಲ್ಲಿ ಉಪ್ಪಿಟ್ಟು ಮಾಡುತ್ತಿದ್ದಾಗ ಮಕ್ಕಳಿಗೆ ಕಟ್ಟಿದ್ದ ಜೋಕಾಲಿಯ ವಾಯರ್ ಹಗ್ಗಕ್ಕೆ ತನ್ನಷ್ಟಕ್ಕೆ ತಾನೇ ಉರುಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ಅದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.