ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, August 8, 2017

CRIME INCIDENTS 08-08-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 08/08/2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 08-08-2017 ರಂದು 1305 ಗಂಟೆಗೆ ಬಿ ಗುಡಿಹಾಳ ಕ್ರಾಸ್ ಹತ್ತಿರ ಇದರಲ್ಲಿ ಆರೋಪಿ ಕಲ್ಲಪ್ಪ ಬಸವರಾಜ ಗುಡಿಹಾಳ, 20 ವರ್ಷ ಸಾ: ಬಿ ಗುಡಿಹಾಳ ಇತನು ತನ್ನ ಸ್ವಂತ ಪಾಯ್ದೇಗೋಸ್ಕರ ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ 1] ಬ್ಯಾಗ್ ಪೇಪರ್ ವಿಸ್ಕಿ 180 ಎಂ.ಎಲ್ ದ ಒಟ್ಟು 22 ಟೇಟ್ರಾ ಪಾಕೇಟಗಳು 2] ಓರಿಜಿನಲ್ ಚಾಯ್ಸ 90 ಎಂ.ಎಲ್ ದ ಒಟ್ಟು 22 ಟೇಟ್ರಾ ಪಾಕೇಟಗಳು 3] ಓಲ್ಡ ಟಾವರ್ನ  180 ಎಂ.ಎಲ್ ದ ಒಟ್ಟು 8 ಟೇಟ್ರಾ ಪಾಕೇಟಗಳು 4] ಒಂದು ಗೊಬ್ಬರ ಚೀಲಒಳಗೊಂಡಂತೆ ಅ.ಕಿ  ಒಟ್ಟು 2788-00 ಗಳಷ್ಟು  ಇವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಕಾನೂನಿನ ಮಿತಿಗಿಂತ ಹೆಚ್ಚಿಗೆ ಇಟ್ಟುಕೊಂಡಾಗ ಸಿಕ್ಕಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಠಾಣಾವ್ಯಾಪ್ತಿಯಲ್ಲಿ ನದಿನಾಂಕ: 23-03-2017 ರಂದು ಸಾಯಂಕಾಲ 4-00 ಗಂಟೆಗೆ ಬೂ. ಅರಳಿಕಟ್ಟಿ ಗ್ರಾಮದ ಪಿರ್ಯಾದಿ  ಬಸವೆಣ್ಣಪ್ಪ ಮರಕಟ್ಟಿ ಸಾ: ಅರಳಿಕಟ್ಟಿ ಇತನ ಮನೆಯಿಂದ ಮಗನಾದ ಗುರುಶಾಂತಪ್ಪ ಬಸವಣ್ಣೆಪ್ಪ ಮರಕಟ್ಟಿ ವಯಾ. 28 ವರ್ಷ ಸಾ. ಅರಳಿಕಟ್ಟಿ ಇವನು ಮನೆಯಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವನು, ಇಲ್ಲಿಯವರೆಗೆ ಮನೆಗೆ ಬಾರದೇ, ಎಲ್ಲ ಕಡೆ ಹುಡುಕಾಡಿದರು ಸಿಗದೇ ಕಾಣೆಯಾಗಿರುತ್ತಾನೆ ಅಂತ ಪಿರ್ಯಾದಿ ಕೊಟ್ಟಿದ್ದರನ್ವಯ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಿಶ್ರಿಕೋಟಿ ಗ್ರಾಮದ ಜಾಮೀಯಾ ಮಜೀದನಲ್ಲಿ  ಫಿಮಹಾಸಾಬೂಬ ಕುಸುಗಲ್ಲ ರ್ಯಾದಿ ಮತ್ತು ಹುಸೇನಸಾಬ ಕರಂಸಾಬ ರಾಗಿಮುಲ್ಲಾ ಇವರಿಗೆ  ನಮಾಜ ಮಾಡಲು ಹೋದಾಗ ಆರೋಪಿ ಸೆ.ನಂ. 1 ರಿಂದ 36 ನೇದವರು ಸಂಗನಮತ ಮಾಡಿಕೊಂಡು ಬಂದು ಜೀವದ ಧಮಕಿ ಹಾಕಿದ್ದು, ಆಸೆನಂ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ  ಹೊಡೆಯಲು ಪ್ರೋತ್ಸಾಹಿಸಿದ್ದ ಅಪರಾಧ  ಈ ಕುರಿತು ಕಲಘಟಗಿ ಪೊಲೀಸ್  ಠಾಣಿಯಲ್ಲಿ ಗುನ್ನಾನಂ 260/2017ನೇದ್ದರ ನೇದ್ದರಲ್ಲಿ  ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.

4 .ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ವರೂರ ಸೂರಶೆಟ್ಟಿಕೊಪ್ಪ ರಸ್ತೆಯ ಮೇಲೆ ನಾಗನೂರ ಕ್ರಾಸ್ ಸಮೀಪ ಟಾಟಾ ಏಸ್ ನಂಬರ ಕೆ.ಎ 25/ ಬಿ 9421 ನೇದ್ದನ್ನು ಅದರ ಚಾಲಕ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ತನ್ನ ಮುಂದೆ ಹೊರಟ ಮೋಟರ್ ಸೈಕಲ್ ನಂಬರ ಕೆ.ಎ 25/ ಇ.ಜೆ 0368 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟರ್  ಸೈಕಲ್ ಹಿಂದೆ ಕುಳಿತ ಪಿರ್ಯಾದಿ ತಾಯಿ ವಾರ್ವತ್ತೆವ್ವ  ಕೊಂ ಭಸವಣ್ಣೆಯ್ಯ ಹಿರೇಮಠ 65 ವರ್ಷ ಸಾ; ಅಗಡಿ ತಾ: ಹುಬ್ಬಳ್ಳಿ ಇವಳಿಗೆ  ಮೈ ಕೈಗಳಿಗೆ ಗಂಭೀರ ಗಾಯಪಡಿಸಿ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಶಂಕುತಲಾ ಆಸ್ಪತ್ರೆಗೆ ಧಾಖಲಿಸಿದಾಗ  ಉಪಚಾರ  ಹೊಂದುವ ಕಾಲಕ್ಕೆ ಉಪಚಾರ ಪಲಸದೇ. ದಿನಾಂಕ 07-08-2017 ರಂದು 21-00 ಗಂಟೆಗೆ ಮರಣ ಹೊಂದುವಂತೆ  ಮಾಡಿ ಮೋಟರ್ ಸೈಕಲ್ ಸವಾರನಾದ ಪಿರ್ಯಾದಿ ಅಣ್ಣ ರಾಮಲಿಂಗಯ್ಯ ತಂದೆ ಬಸವಣ್ಣೆಯ್ಯಾ ಹಿರೇಮಠ ಸಾ: ಅಗಡಿ ಇವನಿಗೂ ಸಹಿತ ಸಣ್ಣ ಪುಟ್ಟ ಗಾಯಪಡಿಸಿ ಗಾಯಾಳು ಜನರಿಗೆ ಉಪಚಾರಕ್ಕೆ ಧಾಖಲು ಮಾಡದೇ  ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ  ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಿಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 261/2017 ಕಲಂ. 279.337.304(ಎ)ವಾಹನ ಕಾಯ್ದೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸದ್ದು ಇರುತ್ತದೆ.

5. ಕುಂದಗೋಳ ಪೊಲೀಸ್ ಠಾಣಾ ವ್ಯಾಫ್ತಿಯ: ಯರಿನಾರಾಯಣಪೂರ ಗ್ರಾಮದ ಮೃತನ ಹೊಲದಲ್ಲಿ ಇದರಲ್ಲಿಯ ಮೃತ ಲಕ್ಷ್ಮಪ್ಪ ಕಲ್ಲಪ್ಪ ಕಲ್ಲಣ್ಣವರ. ವಯಾ: 75 ವರ್ಷ, ಈತನು ಈ ವರ್ಷ ಮಳೆಯಾಗದೇ ಹೊಲದಲ್ಲಿ ಯಾವುದೇ ಪೀಕುಗಳನ್ನು ಬೆಳೆಯದ ಕಾರಣ ಹೊಲದ ಮೇಲೆ ಯರಗುಪ್ಪಿ ಕೆ.ವ್ಹಿ.ಜಿ ಬ್ಯಾಂಕಿನಲ್ಲಿ ಮಾಡಿದ 45,000/- ರೂಪಾಯಿ ಬೆಳೆಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಬೇವಿನ ಗಿಡದ ಟೊಂಗಿಗೆ ವಾಯರ ಹಗ್ಗವನ್ನು ಕಟ್ಟಿ ತನ್ನಷ್ಟಕ್ಕೆ ತಾನೇ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣಯಲ್ಲಿ ಗುನ್ನಾನಂ 23/07/201 ಕಲಂ 174 ಸಿ.ಆರ್.ಪಿ ನೇದ್ರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .