ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, August 9, 2017

CRIME INCIDENTS 09-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09/08/2017 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 09-08-2017 ರಂದು 15-30 ಗಂಟೆಗೆ ಹಳ್ಯಾಳ ಗ್ರಾಮದ ಬಸ್ಸಸ್ಟ್ಯಾಂಡ್ ಹತ್ತಿರ ಆರೋಪಿ ಈಶ್ವರ ವೀರಪ್ಪ ಪತ್ತಾರ ವಯಾ 55 ವರ್ಷ ಸಾ!! ಹಳ್ಯಾಳ ಇತನು ತನ್ನ ಪಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಓ.ಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ ಸದರಿಯವನ ತಾಬಾದಲ್ಲಿಂದ ಒಟ್ಟು ರೋಖ ರಕ್ಕಂ 1050 ರೂಪಾಯಿ, ಒಂದು ಓಸಿ ಅಂಕಿ ಸಂಖ್ಯೆ ಬರೆದ ಬಿಳಿ ಹಾಳೆ, ಒಂದು ಬಾಲ್ ಪೆನ್ ಸಹಿತ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 185-2017 ಕಲಂ 78(3) ಕೆ.ಪಿ. ಅ್ಯಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಗ್ರಾಮದ  ಮೃತ ನೀಲವ್ವ ಕೋಂ ರಾಮಪ್ಪ ಶೆಟ್ಟೆಣ್ಣವರ ಸಾ; ಕಾಮದೇನು ಇವಳು ತಮ್ಮ ಸಂಬಂಧಿಕರು ಮೃತಪಟ್ಟಿದ್ದರಿಂದ ಮಾತನಾಡಿಸಲು ಹೋದಾಗ ಮನಗುಂಡಿಯಿಂದ ತನ್ನ ಅಳಿಯ ಬಸವರಾಜ ನ ಬೈಕದಲ್ಲಿ ಬರುವಾಗ ಮದ್ಯಾಹ್ನ 03.30 ಗಂಟೆಯ ಸುಮಾರು ಜೋಡಳ್ಳಿ ಸಮೀಪ ಕಾಲು ಮಡಿಯಲು ಬೈಕ್ ನಿಲ್ಲಿಸಿ ಕಾಲು ಮಡಿದು ಬಂದು ನಿಲ್ಲಿಸಿದ ಮೋಟರ್ ಸೈಕಲ್ ಮೇಲೆ ಹತ್ತುವಾಗ ಆಕಸ್ಮಾತ್ ಜೋಲಿ ಹೋಗಿ ಹಿಂದಲೆ ಹಚ್ಚಿಬಿದ್ದು ಗಾಯ ಹೊಂದಿ ಉಪಚಾರಕ್ಕೆ ಅಂತ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲು ಆದವಳು ಉಪಚಾರ ಹೊಂದುತ್ತಾ ಉಪಚಾರದಿಂದ ಗುಣವಾಗದೇ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಅಳಿಯ ಬಸವರಾಜನ ಮೇಲಾಗಲಿ ಬೇರೆ ಯಾರ ಮೇಲೆಯಾಗಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತ ಮೃತಳ ಮೈದುನನ ಮಗ ವೆಂಕಪ್ಪಾ ಶೆಟ್ಟೇಣ್ಣವರ ಫಿಯಾಱಧಿ ನೀಡಿದ್ದು ಈ  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 44/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.