ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, August 11, 2017

CRIME INCIDENTS 11-08-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 11-08-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕರಡಿಗುಡ್ಡ ಗ್ರಾಮದ  ಅಜ್ಜನ ಹೆಸರಿಗೆ ಸರಕಾರದಿಂದ 45*30 ಪೂಟ ಅಳತೆಯ ಪ್ಲಾಟ ಬಂದಿದ್ದು ಇದರಲ್ಲಿ ಆರೋಪಿತರು ಪಾಯಖಾನೆ ಕಟ್ಟಿಸಲು ತಗ್ಗನ್ನು ತೋಡಿದ್ದರಿಂದ ಪಿರ್ಯಾದಿದಾರರು  ತಕರಾರು ಮಾಡಿದ್ದರಿಂದ ಸಿಟ್ಟಾದ ಆರೋಪಿತರು  ದಿನಾಂಕ 11-08-2017 ರಂದು 0800 ಗಂಟೆಗೆ ಕರಡಿಗುಡ್ಡ ಗ್ರಾಮದ ಮನೆಯ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಸದರ ಜಾಗೆಗೆ ಸಂಬಂದಿಸಿದಂತೆ ತಂಟೆ ತೆಗೆದು  ಮೈಲಾರಿ ಮೇಟಿ ಕಲ್ಲಿನಿಂದ ಪಿರ್ಯಾದಿಯ ತಂದೆಗೆ ಬಡಿಗೆಯಿಂದ ಹೊಡಿ ಬಡಿ ಮಾಡಿ ಅವಾಚ್ಯವಾಗಿ ಬೈಯ್ದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 167/2017 ಕಲಂ 506.34.324.504 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆಯ ಮೇಲೆ ಭಾರತ ಧಾಬಾ ಸಮೀಪ ಆರೋಪಿತನಾದ  ಮಹೇಶ ಮಾಹಾದೇವಪ್ಪ ಧಾರವಾಡ ಇವನು ತಾನು ನಡೆಸುತ್ತಿದ್ದ ಕಾರ ನಂಬರ ಕೆ.ಎ 01 / ಎಮ್.ಹೆಚ್ 6454 ನೇದ್ದನ್ನು ಹುಬ್ಬಳ್ಳಿ ರಸ್ತೆ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು  ರಾಂಗ್ ಸೈಡ್ ನಡೆಸಿಕೊಂಡು ಬಂದು ಕಾರವಾರ ರಸ್ತೆ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಬರುತ್ತಿದ ವಿರಯ್ಯ ಹಿರೇಮಠ ಇವರ  ಕ್ಯಾಂಟರ್ ಲಾರಿ ನಂಬರ ಕೆ.ಎ 25/ ಎಎ 0672 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ  ವೀರಪ್ಪ ಧಾರವಾಡ  ಇವರಿಗೆ ಸಾದಾ ವ ಬಾರಿ ಗಾಯ ಪಡಿಸಿದ ಅಪರಾಧ. ಈ ಕುರಿತು