ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, August 12, 2017

CRIME INCIDENTS 12-08-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 12-08-2017 ರಂದು ವರದಿಯಾದ ಪ್ರಕರಣಗಳು

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 12-08-2017 ರಂದು 13-50 ಗಂಟೆ ಸುಮಾರಕ್ಕೆ ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ ಸಮೀಪದ ಪೂಲ್ ಸಮೀಪ ಇದರಲ್ಲಿಯ ಆರೋಪಿತನಾದ ಮೌಲಾಸಾಬ ದಸ್ತಗೀರಸಾಬ ಶಿರೂರ ಸಾ!! ಅದರಗುಂಚಿ ತಾ!! ಹುಬ್ಬಳ್ಳಿ ಇತನು ಟಾಟಾ ಸುಪರ್ ಎಸ ಗೂಡ್ಸ್ ವಾಹನ ನಂಬರ ಕೆಎ-18/ಬಿ-4288 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡ ಮಗ್ಗಲಿಗೆ ಪಲ್ಟಿ ಮಾಡಿ ಕೆಡವಿ ಅಪಘಾತಪಡಿಸಿ ಗಾಡಿಯಲ್ಲಿದ್ದ ಪಿರ್ಯಾದಿ ಹುಸೇನಸಾಬ ಮೌಲಾಸಾಬ ನದಾಫ್ ಹಾಗೂ ಹಮಾಲ ಶಬ್ಬೀರ ಮಹ್ಮದಸಾಬ ಕಿಲ್ಲೇದಾರ ಸಾ!! ಅದರಗುಂಚಿ ಇವರಿಗೆ ಸಾಧಾ ಗಾಯಪಡಿಸಿದ್ದಲ್ಲದೇ, ತಾನೂ ಸಹಾ ಸಾಧಾ ಗಾಯಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.