ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, September 28, 2017

CRIME INCIDENTS 28-09-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ.28-09-2017 ರಂದು ವರದಿಯಾದ ಪ್ರಕರಣಗಳು

1) ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 28-09-2017 ರಂದು 0935 ಗಂಟೆಗೆ ನರೇಂದ್ರ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತ  ಮಲ್ಲೇಶ ಮುನಗೊಜಿ ಸಾ: ನರೇಂದ್ರ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಗೆ ಹೇಳಿ ಹಣ ಇಸಿದುಕೊಂಡು ಕಲ್ಯಾಣಿ ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದುಅವನಿಂದ ಒಟ್ಟು ರೂ.205.00 ಗಳನ್ನು ಒಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2) ಗುಡಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ವರದಿಗಾರರಾದ ನಿಂಗಪ್ಪ ಬಸಪ್ಪ ಕೋಳಿ ತನ್ನ ತಂದೆಯು ತನ್ನ ಜಮೀನಿನ ಸಾಗುವಳಿಗಾಗಿ ಪಿ,ಎಲ್,ಡಿ ಬ್ಯಾಂಕ್ ಕುಂದಗೋಳದಲ್ಲಿ ಸುಮಾರು 1 ಲಕ್ಷ್ 80 ಸಾವಿರ ಹಾಗೂ ಕೆ,ವ್ಹಿ,ಜಿ ಬ್ಯಾಂಕ್ ಇಂಗಳಗಿಯಲ್ಲಿ ಸುಮಾರು 1 ಲಕ್ಷ್ ರೂಗಳ ಸಾಲ ಹಾಗೂ ಅಲ್ಲಲ್ಲಿ ಕೈಗಡ ಅಂತಾ ಸುಮಾರು 3 ಲಕ್ಷ ರೂಗಳ ಸಾಲವನ್ನು ಮಾಡಿದ್ದು ಅದನ್ನು ಹೇಗೆ ತೀರಿಸಬೇಕು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಈ ದಿವಸ ದಿನಾಂಕಃ 28/09/2017 ರ ಮದ್ಯಾಹ್ನ 1-00 ಗಂಟೆ ಸುಮಾರಿಗೆ ತನ್ನ ಮನೆಯ ಪಡಸಾಲೆಯಲ್ಲಿ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಸಯ ಇರುವುದಿಲ್ಲಾ ಅಂತಾ ಹೇಳಿಕೆ ಇರುವುದರಿಂದ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 

Wednesday, September 27, 2017

CRIME INCIDENTS 27-09-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-09-2017 ರಂದು ವರದಿಯಾದ ಪ್ರಕರಣಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಬಾವಿ ಗ್ರಾಮದ ವಾಟರ ಪಂಪಹೌಸ ಮುಂದೆ ರಸ್ತೆ ಎಡಸೈಡಿನಲ್ಲಿ ನಿಂತಿದ್ದ ಟಾಟಾ ಎಸ್ ಗೂಡ್ಸ ವಾಹನ ನಂ KA-25-C-5178  ನೇದಕ್ಕೆ ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಬರುತ್ತಿದ್ದ ಟ್ಯಾಂಕರ ಲಾರಿ ನಂ KA-25-D-4667 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಲಾರಿಯ ವೇಗ ನಿಯಂತ್ರಣ ಮಾಡಲಾಗದೇ  ಟಾಟಾ ಎಸ್ ಗೂಡ್ಸ ವಾಹನದ ಹಿಂದೆ ಡಿಕ್ಕಿಪಡಿಸಿ ಅಪಘಾತ ಮಾಡಿ ಟಾಟಾ ಏಸ್ ವಾಹನದಲ್ಲಿದ್ದ ಪಿರ್ಯಾದಿ ಹಾಗೂ 11 ಜನರಿಗೆ ಸಾದಾ ವ ಬಾರಿ ಗಾಯಪಡಿಸಿದ್ದಲ್ಲದೇ ಟ್ಯಾಂಕರ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 219/2017 ಕಲಂ 279.337.338. ಹಾಗೂ ವಾಹನ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ರೇವಣಸಿದ್ದೇಶ್ವರ ಪಾರ್ಕದಲ್ಲಿರುವ ಮೈಲಾರ ಹಂಪ್ಪಣವರ  ಇವರ ಮನೆಯ ಮುಂಚಿ ಬಾಗಿಲದ ಕಿಲಿಯನ್ನು ಯಾರೋ ಕಳ್ಳರು ಮೀಟಿ ಮುರಿದು ಮನೆಯೊಳಗೆ ಹೊಕ್ಕು ಮನೆಯಲ್ಲಿಯ ರೇಷ್ಮೆ ಸೀರೆ ಹಾಗೂ ಇತರೆ ಬಟ್ಟೆಗಳನ್ನು ಇಟ್ಟ ಬ್ಯಾಗ ಅ||ಕಿ|| 15000/- ರೂ ಕಿಮ್ಮನವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/2017 ಕಲಂ 454.457.380 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ  ಮೃತ ರಂಗಪ್ಪ ತಂದೆ ಹನುಮಪ್ಪ ಬೀರಸೀನ ವಯಾ:35 ವರ್ಷ ಈತನು ದಿನಾಂಕ 27-09-2017 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಹೊಲದಿಂದ ಮನೆಗೆ ಬರುವಾಗ ಭೀಮಪ್ಪ ದೇಸಾಯಿ ಇವರ ಹೊಲದ ಹತ್ತಿರ ಬರುವಾಗ ಸಿಡಿಲು ಬಡಿದು ಮೃತಪಟ್ಟಿರುತ್ತಾನೆ.ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 30/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, September 26, 2017

CRIME INCIDENTS 26-09-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-09-2017 ರಂದು ವರದಿಯಾದ ಪ್ರಕರಣಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗೋವನಕೊಪ್ಪ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆ ಹತ್ತಿರ ನಿಂಗಪ್ಪಾ ಶಿಂಗ್ಗಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಗೆ ಹೇಳಿ ಹಣ ಇಸಿದುಕೊಂಡು ಕಲ್ಯಾಣಿ ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 430-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 2017/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಬಸಸ್ಟ್ಯಾಂಡ ಹತ್ತಿರ ಇರುವ ಮಾರುತಿ ಗಾಯಕವಾಡ ಇವರ  ಮೋಟಾರ ಸೈಕಲ್ ರಿಪೇರಿ ಮಾಡುವ ಗ್ಯಾರೇಜಿನ ಹಾಗೂ ಗ್ಯಾರೇಜ ಬಾಜು ಇರುವ ಕಿರಾಣಿ ಅಂಗಡಿಯ ಬಾಗಿಲುಗಳಿಗೆ ಹಾಕಿದ ಕೀಲಿಗಳನ್ನು ಯಾರೋ ಕಳ್ಳರು ಮೀಟಿ ಮುರಿದು ಒಳಗೆ ಹೊಕ್ಕು ಗ್ಯಾರೇಜಿನ ಒಳಗೆ ಟ್ರಝರಿಯಲ್ಲಿಟ್ಟ 55,000/- ರೂಗಳನ್ನು ಹಾಗೂ ಗ್ಯಾರೇಜ ಬಾಜು ಕಿರಾಣಿ ಅಂಗಡಿಯಲ್ಲಿಯ 5,000/- ರೂ ಕಿಮ್ಮತ್ತಿನ ಕಿರಾಣಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 150/2017 ಕಲಂ 454.457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, September 25, 2017

CRIME INCIDENTS 25-09-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-09-2017 ರಂದು ವರದಿಯಾದ ಪ್ರಕರಣಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ : ಮತ್ತಿಗಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿತನಾದ ರಾಜಪ್ಪ ವಡ್ಡರ ಇತನು  ಒಟ್ಟು 72 Original Choice ಅಂತಾ ಲೇಬಲ್ ಇದ್ದ 90 ಎಮ್ಎಲ್ ತುಂಬಿದ ಅಃಕಿಃ 2,200/- ರೂಗಳಷ್ಟು ಟೆಟ್ರಾ ಪ್ಯಾಕೇಟಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು ಪರ್ಮಿಟ ಇಲ್ಲದೇ ಮಾರುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2017 ಕಲಂ 32.34 ಅಬಕಾರಿ ಕಾಯ್ದೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಪರಾಸಾಪುರ ಗ್ರಾಮದಲ್ಲಿ ಯಾರೋ ಕಳ್ಳರು ಪರಸಾಪೂರ ಗ್ರಾಮದ ಈರಪ್ಪಾ ಕಡೆಣ್ಣವರ ಇವರು ವಾಸಿಸುವ ಮನೆಯ ಹಿತ್ತಿಲು  ಬಾಗಿಲದ ಕಬ್ಬಿಣದ ಕೊಂಡಿ ಹಾರಿಸಿ ಒಳಹೊಕ್ಕು ಮನೆಯ ಕೋಣೆಯಲ್ಲಿಟ್ಟಿದ್ದ ಟ್ರೇಜರಿಯ ಕೀಲಿ ಹುಡುಕಿ ಟ್ರೇಜರಿಯ ಕೀಲಿ ತೆಗೆದು ಅದರಲ್ಲಿದ್ದ ಬಂಗಾರದ ಆಭರಣಗಳನ್ನು ಅ..ಕಿ..2,18,000/- ರೂ ಕಿಮ್ಮತ್ತಿನವುಗಳು & 8000/- ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗಳನ್ನು   ಹಾಗು 10,000/- ರೂ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ, ಅದೆ ಗ್ರಾಮದ ಲಕ್ಷ್ಮಣ ತಂದೆ ಬಸಪ್ಪ ವಾಲೀಕಾರ ಎಂಬುವರ ಮನೆಯ ಹಿತ್ತಿಲು ಬಾಗಿಲದ ಅಡಾಪ್ಟರ ಸರಿಸಿ ಒಳಹೊಕ್ಕು ಮನೆಯ ಕೋಣೆಯಲ್ಲಿಟ್ಟಿದ್ದ ಟ್ರೇಜರಿ ತೆಗೆದು ಅದರಲ್ಲಿದ್ದ  ಒಟ್ಟು 32,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 329/2017 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಯಾದವಾಡ ಗ್ರಾಮದ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ಆರೋಪಿತರಾದ ರಾಜು ಕದ್ಲಿ 2.ಪ್ರಕಾಶ ಶೆಟ್ಟಿ ಇವರು ತಮ್ಮ  ಫಾಯ್ದೆಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ.ಸಿ. ಅಂಬುವ ಜೂಜಾಟವನ್ನು ಅಡಿಸುತ್ತಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಾ ತಾನು ಬರೆದುಕೊಳ್ಳುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1.540-00 ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, September 24, 2017

CRIME INCIDENTS 24-09-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-09-2017 ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಗಳಗಟ್ಟಿ ಗ್ರಾಮದ ಸಬಾ ಭವನದ ಹತ್ತಿರ ಆರೋಪಿತರಾದ 1.ಮಲ್ಲಿಕಾಜುಱನ ಗಂಟಿ 2.ಫಕ್ರುದೀನ ಮುಲ್ಲಾಇನ್ನೂ 5 ಜನರು ಕೊಡಿಕೊಂಡು ಸಾರ್ವಜನಿಕ ರಸ್ತೆಯ ಮೇಲೆ ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೇಟ ಎಲೆಗಳ ಸಹಾದಿಂದಾ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 4.300-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 152/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಉಮಚಗಿ ನಲವಡಿ ರಸ್ತೆ ಮೇಲೆ ಬಿಳೆಬಾಳ ಹಳ್ಳದ ಹತ್ತಿರ ಒಂದು ಒಮಿನಿ ವಾಹನವನ್ನು ಅದರ ಚಾಲಕನು ನಲವಡಿ ಕಡೆಯಿಂದ ಉಮಚಗಿ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಉಮಚಗಿ ಕಡೆಯಿಂದ ನಲವಡಿ ಕಡೆಗೆ ಹೋಗುತ್ತಿದ್ದ ಟಿ.ವ್ಹಿ.ಎಸ್ ಮೋಟಾರ್ ಸೈಕಲ್ ನಂಬರ ಕೆಎ-25/ಇವೈ-0187 ನೇದ್ದಕ್ಕೆ ಡಿಕ್ಕಿ ಮಾಡಿ ಅಪಗಾತಪಡಿಸಿ ಮೋಟಾರ್ ಸೈಕಲ್ ಸವಾರ ದೇವೆಂದ್ರಪ್ಪ ಶಿವಪ್ಪ ನಾಗರಳ್ಳಿ ವಯಾ 40 ವರ್ಷ ಸಾ!! ಉಮಚಗಿ ಇತನಿಗೆ ಭಾರಿ ಗಾಯಪಡಿಸಿ ಮರಣಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ದೇವೆಂದ್ರಪ್ಪ ರುದ್ರಪ್ಪ ದಿವಟರ ಸಾ!! ಉಮಚಗಿ ಇವರಿಗೆ ಬಾರಿ ಗಾಯಪಡಿಸಿ ಘಟನೆಯ ಸಂಗತಿಯನ್ನು ತಿಳಿಸದೇ ಗಾಡಿಯನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 223/2017ಕಲಂ 279.338.304(ಎ) ಹಾಗೂ ವಾಹನ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಅಪರಾಧ.

Saturday, September 23, 2017

CRIME INCIDENTS 23-09-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-09-2017 ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ-ಅಳ್ನಾವರ ರಸ್ತೆ ಕರೆಮ್ಮಗುಡಿ ಹತ್ತಿರ ರಸ್ತೆ ತಿರುವಿನಲ್ಲಿ ಲಾರಿ ನಂ ಕೆಎ-51-6847 ನೇದ್ದರ ಚಾಲಕನು ತನ್ನ ಲಾರಿಯನ್ನು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆ ತಿರುವಿನಲ್ಲಿ ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಲಾರಿಯನ್ನು ಎಡಸೈಡಿನ ತೆಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಜಖಂಗೊಳಿಸಿದ್ದು ಇರುತ್ತದೆ ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 212/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.