ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, October 30, 2017

CRIME INCIDENTS 30-10-2017


ಧಾರವಾಡ ಜಿಲ್ಲೆಯಲ್ಲಿ ದಿನಾಂಕ 30-10-2017 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಚನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನಾದ ಫಕ್ಕಿರೇಶ ಬಸವಣ್ಣೆಪ್ಪ ಗಾಣಿಗೇರ ವಯಾ. 35 ವರ್ಷ ಸಾ. ಚನ್ನಾಪೂರ ಇವನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ, ಒಟ್ಟು 50 ಓರಿಜಿನಲ್ ಚಾಯ್ಸ್ 90 ಎಂ. ಎಲ್ ದ ವಿಸ್ಕಿ ತುಂಬಿದ ಟೆಟ್ರಾ ಪೌಚಗಳು ಅ.ಕಿ 1400/- ರೂಪಾಯಿ ನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 253/2017 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನುಗ್ಗಿಕೇರಿ ಗ್ರಾಮದ ಪಾಂಡುರಂಗ ನಗರದ ಸಾರ್ವಜನಿಕ ಜಾಗೆಯಲ್ಲಿ ಆರೋಪಿತರಾದ 1.ಮಂಜುನಾಥ ಭೀಮಪ್ಪನವರ 2.ಸಿದ್ದುವಾಲಿಕರ 3.ಸಿದ್ದಪ್ಪಾಬಂಗೇರಿ 4.ಅಕ್ಷಯಸಿಂಧೆ 5.ಮಹೇಂದ್ರಕೊರವರ ಇವರು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅವರಿಂದ ರೂ 1.800-00 ಗಳನ್ನು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 255/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನೀರಸಾಗರ ಕ್ರಾಸ ಸಮೀಪ ರಸ್ತೆ ಮೇಲೆ ಆರೋಪಿತನಾದ ಚಂದ್ರಶೇಖರ ವಾಲ್ಮೀಕಿ ಇತನು ನಡೆಸುತ್ತಿದ್ದ ಮೊಟಾರ ಸೈಕಲ್ಲ ನಂ ಕೆಎ25/ಇಇ 99 ನೇದ್ದನ್ನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರು ಅವಿಚಾರ ತಾತ್ಸಾರತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಮುಂದೆ ಹೊರಟ ಗ್ಯಾಸ್ ಟ್ಯಾಂಕರ ವಾಹನ ನಂ ಕೆಎ01/ ಎಜಿ 1577 ನೇದ್ದಕ್ಕೆ ಹಿಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡು ತಾನೇ ಬಲವಾದ ಗಾಯಗೊಂಡು ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಸಾಗಿಸುವಾಗ ಮಾರ್ಗದಲ್ಲಿ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 339/2017 ಕಲಂ 279.304(ಎ)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, October 29, 2017

CRIME INCIDENTS 29-10-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ 29-10-2017 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ನಿಗದಿ ಗ್ರಾಮದ ವಿಠ್ಠಲ ನಿಂಗಪ್ಪ ದಾಸನಕೊಪ್ಪ ಅವರ ಮನೆಯ ಮುಂದೆ ನಿಲ್ಲಿಸಿದ ಅವರ ಎರಡು ಟ್ರ್ಯಾಕ್ಟರಗಳಲ್ಲಿನ ಸುಮಾರು 8000 /- ರೂ ಕಿಮ್ಮತ್ತಿನ 2 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮನಸೂರ ಗ್ರಾಮದ ಹದ್ದಿಯಲ್ಲಿನ ಶ್ರೀ ಬಾಗ್ಯೆಶ್ರೀ ಸ್ಟೋನ ಕ್ರಸಿಂಗ ಇಂಡಸ್ಟ್ರೀಜನಲ್ಲಿನಿಲ್ಲಿಸಿದ 02 ಟಿಪ್ಪರ ಲಾರಿಯಲ್ಲಿನ  ಸುಮಾರು 48.000/- ರೂ ಕಿಮ್ಮತ್ತಿನ ಒಟ್ಟು 04 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 253/2017 ಕಲಂ 379 ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತ ಆತ್ಮಾನಂದ ತಂದೆ ಸಿದ್ದಪ್ಪ ಪೂಜಾರ ವಯಾ-19 ವರ್ಷ ಸಾ|| ಗೊಬ್ಬರಗುಂಪಿ ಈತನು ಉಳವಪ್ಪ ಸಾಲಿ  ಇವರ ಕೃಷಿ ಹೊಂಡದಲ್ಲಿ  ಕುರಿ ಮೈತೊಳೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳಗಿ ಮೃತಪಟ್ಟಿರುತ್ತಾನೆ ವಿನಃ ಸದರಿಯವನ ಮರಣದಲ್ಲಿ ಬೇರೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಫಿಯಾಱದಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 37/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ ಮೃತ ಹನಮವ್ವ @ ಮಲ್ಲವ್ವ ಕೋಂ ಯಲ್ಲಪ್ಪ ಕಲ್ಲಮ್ಮನವರ ವಯಾ. 35 ವರ್ಷ ಸಾ. ಅಂಚಟಗೇರಿ ಇವರು ತಮ್ಮ ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ, ಮೂರ್ಛೆ ರೋಗ ಬಂದು, ತ್ರಾಸ ಮಾಡಿಕೊಳ್ಳುತ್ತಿದ್ದಾಗ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಚಿಕಿತ್ಸೆ ಕುರಿತು ಸಾಗಿಸುತ್ತಿದ್ದಾಗ, ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ ವಿನಃ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಪಿರ್ಯಾದಿಯ ತಾಯಿ ಗಂಗವ್ವ ಕೋಂ ದ್ಯಾಮಪ್ಪ ಗುಡಿಮನಿ ಇವರು ಬರೆದು ಕೊಟ್ಟೀ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 43/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ


Friday, October 27, 2017

CRIME INCIDENTS 27-10-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ. 27-10-2017 ರಂದು ವರದಿಯಾದ ಪ್ರಕರಣಗಳು

1)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 27/10/2017 ರಂದು ಸಾಯಂಕಾಲ 6-00 ಗಂಟೆಗೆ, ಅಚಗೇರಿಯ ದೇವಸ್ಥಾನ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಇಮಾಮಹುಸೇನ ಸೈಯದಸಾಬ ಮಾಳಗಿಮನಿ 2] ಮಹ್ಮದಸಾಬ ಹಜರೇಸಾಬ ಹಳ್ಳಿಕೇರಿ 3] ಸಂಗಮೇಶ ಬಸವಂತಪ್ಪ ಬೆಳಗಲಿ 4] ರೆಹಮಾನಸಾಬ ಹುಸೇನಸಾಬ ಹಳ್ಳಿಕೇರಿ ನೇದವರು ಕೂಡಿ ಅಂಚಟಗೇರಿ ಗ್ರಾಮದ ದೇವಸ್ಥಾನದ ಹತ್ತಿರ ತಮ್ಮ ತಮ್ಮ ಫಾಯ್ದೇಗೋಸ್ಕರ ಇಸ್ಪೀಟ್ ಎಲೆಗಳ ಸಹಾಯದದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿರುವಾಗ 1] ರೋಖ ರಕಂ 1750/- ರೂ. 2] 52 ಇಸ್ಪೆಟ್ ಎಲೆಗಳು ನೇದ್ದವುಗಳ ಸಮೇತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

2)ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-10-2017 ರಂದು ಸಾಯಂಕಾಲ 7-30 ಗಂಟೆಗೆ, ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆ ಮೇಲೆ ಶೆರೆವಾಡ ಕ್ರಾಸದಿಂದ 2 ಕೀ.ಮಿ ಅಂತರದಲ್ಲಿ, ಹಂಡೆ ಹಳ್ಳದ ಹತ್ತಿರ, ಆರೋಪಿ ಕಾರ ನಂಬರ ಕೆ.ಎ-22-ಎನ್-7798 ನೇದ್ದರ ಚಾಲಕ ತನ್ನ ಕಾರನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ತನ್ನ ಮುಂದೆ ಹೊರಟಿದ್ದ ಸಾಕ್ಷಿದಾರ ಚಂದ್ರಶೇಖರ ಮೂರುಸಾವಿರಪ್ಪ ತಹಶೀಲ್ದಾರ ಇವರ ಚಕ್ಕಡಿಗೆ ಹಿಂದಿನಿಂದ ಡಿಕ್ಕಿ ಮಾಡಿ, ಅಪಘಾತಪಡಿಸಿ ಭಾರಿ ಗಾಯಪಡಿಸಿ, ಚಕ್ಕಡಿಗೆ ಹೂಡಿದ್ದ ಎರಡು ಎತ್ತುಗಳಿಗೆ ಭಾರಿ ಗಾಯಪಡಿಸಿ, ತನ್ನ ಎದುರಿಗೆ ಬರುತ್ತಿದ್ದ, ಪಿರ್ಯಾದಿ ಕಲ್ಲಪ್ಪ ಬಾಳಪ್ಪ ಉಪಾಧ್ಯ ಇವರ ಎನ್.ಡಬ್ಲೂ.ಕೆ.ಆರ್.ಟಿ.ಸಿ ಬಸ್ ನಂ. ಕೆಎ-26-ಎಫ್-1021 ನೇದ್ದಕ್ಕೆ ಬಲಗಡೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಅಪಘಾತದ ವಿಷಯವನ್ನು ತಿಳಿಸದೇ ಪರಾರಿಯಾಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

3)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 17-10-2017 ರಂದು ಬೆಳಗಿನ 0300 ಗಂಟೆಯಿಂದ 0500 ಗಂಟೆಯ ನಡುವಿನ ಅವದಿಯಲ್ಲಿ SEPL ನ RMC ಪ್ಲ್ಯಾಂಟ ಮನಸೂರದಲ್ಲಿ ನಿಲ್ಲಿಸಿದ 02 ಟಿಪ್ಪರ ಲಾರಿಯಲ್ಲಿನ  ಸುಮಾರು 48.000/- ರೂ ಕಿಮ್ಮತ್ತಿನ ಒಟ್ಟು 04 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿಕೊಳ್ಳಲಾಗಿದೆ.

4)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮರೇವಾಡ ಗ್ರಾಮದ ಪಿರ್ಯಾದಿ ಚನ್ನವ್ವ ತನಕಣ್ಣವರ  ಇವಳ ಮನೆ   ಹಿತ್ತಲ ಜಾಗೆ ಸಲುವಾಗಿ ಪಿರ್ಯಾದಿ ಹಾಗೂ ಆರೋಪಿತರ ನಡುವೆ ತಂಟೆ ಇದ್ದು ಈ ಬಗ್ಗೆ ಅನೇಕ ಸಲ ಹಿರಿಯರು ಹಿರೇತನ ಕೂಡಿಸಿದರೂ ಸಮಸ್ಯೆ ಬಗೆಹರಿದಿರುವದಿಲ್ಲ ಇದೇ ಸಿಟ್ಟಿನಿಂದ ದಿನಾಂಕ 26-10-2017 ರಂದು  ಬೆಳಗಿನ 0830 ಗಂಟೆಗೆ ಬಸವ್ವ ತಡಕೋಡ ಹಾಗೂ ಬಸಪ್ಪ ತಡಕೋಡ ಇವರುಗಳು ಹಿತ್ತಲದಲ್ಲಿ ಕಂಟಿ ಹಚ್ಚುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಸದರಿಯವರಿಗೆ ಅವಾಚ್ಯವಾಗಿ ಬೈಯ್ದಾಡುತ್ತಾ  ಜಗಳ ಮಾಡುತ್ತಿರುವಾಗ ಜಗಳ ಬಿಡಿಸಲು ಬಂದ   ನಿರ್ಮಲಾಗೆ ಹಾಗೂ ಬಸವ್ವಳಿಗೆ ಆರೋಪಿ ಮಲ್ಲಪ್ಪ ತಡಕೋಡ ನೇದವನು ಬಡಿಗೆಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಜಗಳ ಬಿಡಿಸಲು ಬಂದ ಮಂಜುಳಾಗೆ  ಆರೋಪಿ ನಂ 02   ಪ್ರಭು ತಡಕೋಡ ಇತನು ಕುಡಗೋಲಿನಿಂದ ಹೊಡಿ ಬಡಿ ಮಾಡಿ ಎಲ್ಲರೂ ಕೂಡಿ  ಕೈಯಿಂದ ಹೊಡೆದು  ಎಳೆದಾಡಿ ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಿದ್ದಲ್ಲದೇ  ಅದೇ ದಿನ ಸಾಯಂಕಾಲ 1800 ಗಂಟೆಗೆ ಪಿರ್ಯಾದಿದಾರಳು ಹಿತ್ತಲ ಜಾಗೆಯಲ್ಲಿ ನಿಂತಾಗ ಕೈಯಿಂದ  ಹೊಡಿ ಬಡಿ ಮಾಡಿ ಜಗಳ ಬಿಡಿಸಲು ಬಂದ ನಿರ್ಮಲಾ ತಡಕೋಡ. ಮಂಜುಳಾ ತಡಕೋಡ. ಬಸವ್ವ ತಡಕೋಡ ಇವರಿಗೂ ಹೊಡೆದು ಜೀವದ ಧಮಕಿ ಹಾಕ್ಕಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿಕೊಳ್ಳಲಾಗಿದೆ.

5)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 19-10-2017 ರಂದು 2300 ಗಂಟೆಯಿಂದ ದಿನಾಂಕ 20-10-2017 ರಂದು 0630 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿರುವ PBI ಕಂಪನಿಯ ಖುಲ್ಲಾ ಜಾಗೆಯಲ್ಲಿ ನಿಲ್ಲಿಸಿದ 02 ಟಿಪ್ಪರ ಲಾರಿಯಲ್ಲಿನ ಸುಮಾರು 45.000/- ರೂ ಕಿಮ್ಮತ್ತಿನ ಒಟ್ಟು 03 ಎಕ್ಸೈಡ್ ಕಂಪನಿಯ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Thursday, October 26, 2017

CRIME INCIDENTS 26-10-2017


ದಿನಾಂಕ.26-10-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿನಾಂಕ: 22-10-2017 ರಂದು ಬೆಳಗಿನ ಜಾವ 1-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಅಂಚಟಗೇರಿ ಗ್ರಾಮದ ಜನತಾ ಪ್ಲಾಟದಲ್ಲಿರುವ ಪಿರ್ಯಾದಿ ಯಾದವಕುಮಾರ್ ಇವರ ಮನೆಯ ಕೀಲಿ ಮುರಿದು ಮನೆಯ ಒಳಗೆ ಹೊಕ್ಕು ಮನೆಯ ಟ್ರೇಜರಿಯಲ್ಲಿಟ್ಟಿದ್ದ 1] ಹಣ 1,17000/- ರೂ. ಮತ್ತು 2] 11 ಗ್ರಾಂ. ತೂಕದ ಒಂದು ಬಂಗಾರದ ಚೈನ ಅ.ಕಿ 28,000/- ರೂ. 3] 10 ಗ್ರಾಂ. ತೂಕದ ಒಂದು ಬಂಗಾರದ ಚೈನ ಅ.ಕಿ 25,000/- ರೂ. 4] 2 ಗ್ರಾಂ. ನ ಒಟ್ಟು ಎರಡು ಕಿವಿಯೊಲೆ ಅ.ಕಿ 8,000/- ರೂ. 5] ಮನೆಯ ಅಡುಗೆ ಮನೆಯಲ್ಲಿದ್ದ ಹಂಡೆ, ಕೊಡ, ಕುಕ್ಕರ, ಬಾಂಡೆ ಸಾಮಾನುಗಳು ಅ.ಕಿ 5,000/- ರೂ. ನೇದ್ದವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಗರಗ ಪೊಲೀಸ್ ಠಾಣಾವ್ಯಾಪ್ತಿಯ ಮಂಗಳಗಟ್ಟಿ ಗ್ರಾಮದಲ್ಲಿ ಮೃತಃ  ನಿಂಗಯ್ಯ ರಾಚಯ್ಯ ಹಿರೇಮಠ ವಯಾಃ 58 ವರ್ಷ. ಸಾಃ ಮಂಗಳಗಟ್ಟಿ. ಇವನು ಮಂಗಳಗಟ್ಟಿ ಹದ್ದಿಯ ಪೈಕಿ ತನ್ನ ಜಮೀನು ರಿ.ಸ.ನಂ. 142/1 ಮತ್ತು 142/2 ನೇ ಹೋಲದಲ್ಲಿ ಬೆಳೆದ ಹತ್ತಿಗೆ  ದಿನಾಂಕಃ 22-10-2017 ರಂದು ಮುಂಜಾನೆ 10.00 ಗಂಟೆಯಿಂದ ಮದ್ಯಾಹ್ನ್ 01.00 ಗಂಟೆಯವರೆಗೆ ತನ್ನ ಮಗನೊಂದಿಗೆ ಸೇರಿ ಕ್ರೀಮಿನಾಶಕ ಎಣ್ಣಿಯನ್ನು  ಹೊಡೆದಿದ್ದರಿಂದ ಮೃತನಿಗೆ ತ್ರಾಸ ಆಗಿ ವಾಂತಿ ಆಗಿ ಅಸ್ವಸ್ಥನಾಗಿದ್ದು ಈ ಕುರಿತು ಅವನು ಎಸ್,ಡಿ.ಎಮ್. ಆಸ್ಪತ್ರೆ ಸತ್ತೂರದಲ್ಲಿ ಉಪಚಾರ ಹೊಂದುತ್ತಿರುವಾಗ, ಇಂದು ದಿಃ 26-10-2017 ರಂದು ಬೆಳಗಿನ 3.20 ರ ಸುಮಾರಿಗೆ ಉಪಚಾರ ಫಲೀಸದೆ ಮೃತ ಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

3)ಗರಗ ಪೊಲೀಸ್ ಠಾಣಾವ್ಯಾಪ್ತಿಯ ವೆಂಕಟಾಪೂರ ಗ್ರಾಮದಲ್ಲಿ ಮೃತ ವಿಶಾಲ.ತಂದೆ ಚಂದ್ರಶೇಖರ.ಡೊಕ್ಕನ್ನವರ. ವಯಾ-3 ವರ್ಷ,ಸಾಃವೆಂಕಟಾಪೂರ.ತಾಃಧಾರವಾಡ ಇತನು ದಿನಾಂಕಃ23-10-2017 ರಂದು ಮುಂಜಾನೆ-10-00 ಗಂಟೆ ಸುಮಾರಿಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ಟಿಪಾಯಿ ಟೇಬಲ್ ಮೇಲೆ ಇಟ್ಟ ಗುಳಿಗೆಗಳನ್ನು ಅವನಿಗೆ ತಿಳುವಳಿಕೆ ಇಲ್ಲದೇ ತಿಂದು ಅಸ್ತವ್ಯಸ್ತನಾಗಿ ವಾಂತಿ ಮಾಡಿಕೊಳ್ಳುತ್ತಿದ್ದಾಗ ಅವನಿಗೆ ಉಪಚಾರಕ್ಕೆ ಅಂತಾ ಎಸ.ಡಿ.ಎಮ್. ಆಸ್ಪತ್ರೆಯಲ್ಲಿ ದಾಖಲ ಮಾಡಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ಈ ದಿವಸ ದಿನಾಂಕ:26-10-2017 ರಂದು ಬೆಳಗಿನ 6-45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, October 25, 2017

CRIME INCIDENTS 25-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 25-10-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದೇವಿಕೋಪ್ಪ ಗ್ರಾಮದ ಮಂಜುನಾಥ ಗದ್ದೆಣವರ ಇವರ ಮನೆಯ ಮುಂದೆ ಆರೋಪಿ ಗುಳಪ್ಪ ಅಂಗಡಿ ಸಾ: ದೇವಿಕೋಪ್ಪ ಇತನು ಪಿರ್ಯಾದಿ ಮಾವನಿದ್ದು  ಸದರಿಯವನು  ಅವರ ತಾಯಿಗೆ ಅವಾಚ್ವವಾಗಿ ಬೈದಾಡುತ್ತಿದ್ದಾಗ ಯಾಕೇ ಬೈದಾಡುತ್ತಿದಿಯಾ ಅಂತಾ ಕೇಳಿದಕ್ಕೆ ಸಿಟ್ಟಾಗಿ ಪಿರ್ಯಾದಿಗೆ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಬಿಡಿಸಲು ಬಂದ ತಾಯಿಗೆ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಅವಳ ಕೈ ಹಿಡಿದು ಎಳೆದಾಡಿ ಅವಳಿಗೆ ಸಾರ್ವಜನಿಕವಾಗಿ ಅವಳ ಮಹಿಳಾ ತನಕ್ಕೆ ಅಪಮಾನ ಪಡಿಸಿದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 338/2017 ಕಲಂ 323.354(ಎ)504.506  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಹರಕುಣಿ ಗ್ರಾಮದ ಹದ್ದಿಯಲ್ಲಿರುವ ಶರತ ಪಾಟೀಲ ಇವರ  ಬಾಬತ್ ಸರ್ವೇ ನಂ: 209/1 ಮತ್ತು 2 ನೇ ಜಮೀನದಲ್ಲಿರುವ 15 ವರ್ಷದ 22 ಗಂಧದ ಗಿಡಿಗಳು ಅ.ಕಿ: 4,00,000/-ರೂ ನೇದವುಗಳನ್ನು  ಆರೋಪಿತರಾದ 1.ವೆಂಕನಗೌಡ ಬಿರಳ್ಳಿ 2.ಗೂವಿಂದಗೌಡ ಬಿರಳ್ಳಿ 3.ಯಲ್ಲಪ್ಪಾ ಗಾಣಗೇರ 3 ಜನ ಆರೋಪಿತರು ಹಾಗೂ ಇತರರು ಕೂಡಿ ಕಳ್ಳತನ ಮಾಡಿಕೊಂಡು ಹೋಗಿದ್ದಲ್ಲದೇ ಈ ಹಿಂದೆಯೂ ಸನ್ 2014-15 ನೇ ಸಾಲಿನಲ್ಲಿ ಹಾಗೂ ಈ ವರ್ಷದ ಮೇ-ಜೂನ್ ತಿಂಗಳಲ್ಲಿ ಘಟಿಸಿದ ಗಂಧದ ಗಿಡಗಳ ಕಳ್ಳತನ ಮಾಡಿದ ಕುಇರತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 165/2017 ಕಲಂ  ಅರಣ್ಯ ಕಾಯ್ದೆ ಪ್ರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ  ಮ್ರತ ತನ್ನ ತಮ್ಮ ಮಂಜುನಾಥ ಬಸಪ್ಪ ಸಿಡ್ಲಪ್ಪನವರ ವಯಾಃ38 ಈತನು ಅಲ್ಲಲ್ಲಿ ಕೈಗಡ ಅಂತಾ ಸುಮಾರು 04 ಲಕ್ಷ ರೂಪಾಯಿಗಳನ್ನು ತನ್ನ ಜಮೀನಿನ ಸಾಗುವಳಿಗೋಸ್ಕರ ಸಾಲಾ ಮಾಡಿದ್ದು ಈ ಸಾರಿ ಪೀಕು ಕೂಡಾ ಸರಿಯಾಗಿ ಬರದೇ ಇದ್ದುದರಿಂದ ಅದನ್ನು ತೀರಿಸುವುದು ಹೇಗೆ ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕಃ23/10/2017 ರ ರಾತ್ರಿ 8-00 ಗಂಟೆ ಸುಮಾರಿಗೆ ನೆಲಗುಡ್ಡ ಗ್ರಾಮದಲ್ಲಿರುವ ತನ್ನ ಹೊಲದಲ್ಲಿ ಹತ್ತೀ ಪೀಕಿಗೆ ಹೊಡೆಯುವ ಎಣ್ಣೆ ಕುಡಿದು ಉಪಚಾರಕ್ಕೆ ಅಂತಾ ಕೆ,ಎಂ,ಸಿ ಹುಬ್ಬಳ್ಳಿಗೆ ದಾಖಲಾಗಿದ್ದು ಅಲ್ಲಿ ಅವನು ಉಪಚಾರ ಫಲಿಸದೇ ಈ ದಿವಸ ದಿನಾಂಕಃ25/10/2017 ರಂದು ಮುಂಜಾನೆ 0800 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 17/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.