ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, October 3, 2017

CRIME INCIDENTS 03-10-2017


ದಿನಾಂಕ. 03-10-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 27-09-2017 ರಂದು 2350 ಗಂಟೆಗೆ ಹುಬ್ಬಳ್ಳಿ-ಬೆಂಗಳೂರ ಎನ್.ಎಚ್-4 ಹೈವೆ ರಸ್ತೆಯ ಮೇಲೆ ಬೆಳ್ಳಿಗಟ್ಟಿ ಗ್ರಾಮದ ಹತ್ತಿರ ಇದರಲ್ಲಿ ಆರೋಪಿ ಸಲೀಂ ಅಹ್ಮದ ಸಾಹೇಬ ಸಾ: ಮೈಸೂರ ಇತನು ತನ್ನ ಲಾರಿ ನಂ ಕೆ.ಎ-06/ಸಿ-1349 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಬೆಳ್ಳಿಗಟ್ಟಿ ಗ್ರಾಮದ ಕಡೆಗೆ ಅತೀ ಜೋರಿನಿಂದ ವ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ಯಾವುದೇ ಇಂಡಿಕೇಟರ ಲೈಟಗಳನ್ನು ಹಚ್ಚದೇ ಹೈವೆ ರಸ್ತೆ ಮೇಲೆ ನಿಲ್ಲಿಸಿದ ಲಾರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತನಗೆ ಹಾಗೂ ಅಮೀರ ಅಬ್ದುಲ್ ಮುಜೀಬ ಸಾ: ಮಂಡ್ಯಾ ಗೆ ಸಾದಾ ವ ಭಾರಿಗಾಯಪೆಟ್ಟುಗಳು ಆಗುವಂತೆ ಮಾಡಿದ್ದಲ್ಲದೇ ಲಾರಿಗೆ ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 02-10-2017 ರಂದು ರಾತ್ರಿ 2300 ಗಂಟೆ ಸುಮಾರಿಗೆ  ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಇಟ್ಟಗಟ್ಟಿ ಗ್ರಾಮದ ದುಖಾನದವರ ಹೊಲದ ಹತ್ತಿರ ಯಾವುದೋ  ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆ ಎಡಸೈಡಿನಲ್ಲಿ ಹೊಗುತಿದ್ದ ಸುಮಾರು 45-50 ವಯಸ್ಸಿನ  ಅನಾಮದೇಯ ಗಂಡಸ್ಸು ವ್ಯಕ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತ ಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿದ್ದು ಇರುತ್ತದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.