ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, October 4, 2017

CRIME INCIDENTS 04-10-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-10-2017 ರಂದು ವರದಿಯಾದ ಪ್ರಕರಣಳು

1 ಅಳ್ನವಾರ ಪೊಲೀಸ್ ಠಾಣಾ ವ್ಯಾಪ್ತಿಯ: ಅರವಟಗಿ ಗ್ರಾಮದ ಕ್ರಾಸ್ ಕಂಬಾರಗಣವಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಇರುವ ಬೀದಿ ಲೈಟಿನ ಬೆಳಕಿನಲ್ಲಿ ಆರೋಪಿತರಾದ 1] ಮೀರಾಸಾಬ ಕಾಶೀಮಸಾಬ ನಂದಗಡ ಸಾ ಃ ಕುಂಬಾರಕೊಪ್ಪ 2] ಮೂಗಯ್ಯ ಶಿವಪುತ್ರಯ್ಯ ಚಿಕಮಠ ಸಾ ಃ ಅರವಟಗಿ 3] ಶಿವು ಗಂಗಪ್ಪಾ ಸಿದ್ಲೇರ ಸಾ ಃ ಅರವಟಗಿ 4] ಬಾಬಾಜಾನ ಹೊಸೂರ ಸಾ ಃ ಅರವಟಗಿ 5] ಅಶೋಕ ಕಾಂಬಳೆ ಸಾ ಃ ಅರವಟಗಿ 6] ಲಾಲಸಾಬ ಹನೀಪಸಾಬ ನಿಚ್ಚಣಕಿ ಸಾ ಃ ಕುಂಬಾರಕೊಪ್ಪ ಇವರು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ರಸ್ತೆ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ 1] ಮೀರಾಸಾಬ ಕಾಶೀಮಸಾಬ ನಂದಗಡ ಸಾ ಃ ಕುಂಬಾರಕೊಪ್ಪ ಇವನು ದಾಳಿ ಕಾಲಕ್ಕೆ ಸಿಕ್ಕಿದ್ದು ಇನ್ನೂಳಿದವರು ಓಡಿ ಹೋಗಿದ್ದು ಇರುತ್ತದೆ. ಅವರಿಂದ ರೂ 1420/- ಹಾಗೂ 52 ಇಸ್ಪೇಟ್ ಎಲೆಗಳು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಅಳ್ನವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 115/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ  ದೇವೇಂದ್ರವಪ್ಪ ಕುಮ್ಮನವರ ಇವರ ಮನೆಯಿಂದ ಕಾಣೆಯಾದ ಲಕ್ಷ್ಮವ್ವ ಕೋಂ ದೇವಪ್ಪ ಕುಮ್ಮಣ್ಣವರ. ವಯಾ: 49 ವರ್ಷ, ಸಾ: ಸಂಶಿ, ತಾ: ಕುಂದಗೋಳ ಇವಳು ಕಳೆದ 18 ವರ್ಷಗಳಿಂದ ಮಾನಸೀಕ ಅಸ್ವಸ್ಥಳಿದ್ದು ಅವಳು ಮನೆಯಿಂದ ಊರಲ್ಲಿ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 161/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಬ್ಬೂರ ಗ್ರಾಮದ  ಮೃತ ಗೌಡಪ್ಪಗೌಡ ತಂದೆ ಶಂಕರಗೌಡ ಕಬ್ಬೂರ ವಯಾ 46 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಕರಡಿಗುಡ್ಡ ಇತನು ಕರಡಿಗುಡ್ಡ ಹದ್ದಿಯ ಪೈಕಿ ಗಂಗನಗೌಡ ಕಬ್ಬೂರ ಇವರ ಜಮೀನುದಲ್ಲಿನ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಆಕಸ್ಮೀಕ ಕಾಲು ಜ್ಯಾರಿ ನೀರಿನಲ್ಲಿ ಮುಳಗಿ ಮೃತ ಪಟ್ಟಿದ್ದು ಇರುತ್ತದೆ, ವಿನಃ ಮೃತನ ಸಾವಿನಲ್ಲಿ ಯಾವುದೆ ಸಂಶಯ ವಗೈರಿ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಯುಡಿ  ನಂ 50/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಗಾಂಧಿನಗರ ಗ್ರಾಮದ  ಮೃತ ಸುಮಿತ್ರಾ ಗಂಡ ಬಸಯ್ಯ ಚಿಕ್ಕಮಠ ವಯಾ 68 ವರ್ಷ, ಸಾ: ಗಾಂಧಿನಗರ ಕಲಘಟಗಿ ಇವಳು ಅಜಮಾಸ್ 10 ವರ್ಷಗಳಿಂದ ಬಿ.ಪಿ ಖಾಯಿಲೆಯಿಂದ ಬಳಲುತ್ತಿದ್ದು ಅದೇ ಬಾಧೆಯಿಂದ ಹಾಗೂ ಮನೆ ನಡೆಸಲು ಅಲ್ಲಿ ಇಲ್ಲಿ ಕೈಗಡ ಸಾಲ ಮಾಡಿ ಆ ಸಾಲವನ್ನು ತೀರಿಸಲು ಚಿಂತೆ ಮಾಡುತ್ತ ಿದ್ದವಳು ತನ್ನ ಜೀವನದಲ್ಲಿ ಬೇಸರಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಿ.ಪಿ ಖಾಯಿಲೆಗೆ ಉಪಯೋಗಿಸುವ 20 ಬಿ.ಪಿ ಖಾಯಿಲೆ ಗುಳಿಗೆಗಳನ್ನು ಸೇವನೆ ಮಾಡಿ ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತ ಕಲಘಟಗಿ ಸರಕಾರಿ ದವಾಖಾನೆಗೆ ತೋರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದವಳು ಉಪಚಾರದಿಂದ ಗುಣಹೊಂದದೇ ದಿನಾಂಕ; 03/10/2017 ರಂದು ರಾತ್ರಿ 9.45 ಗಂಟೆಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಬೇರೆಯಾವ ಸಂಶಯ ಇರುವುದಿಲ್ಲಾ ಅಂತ ಮೃತಳ ಮಗ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 60/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭುನಗರ ಹೊನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಸಾರ್ವಜನಿಕ ಆರೋಪಿತನಾದ ಮಲ್ಲೇಶ ಕುಂದಗೋಳ  ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಹಣ ತೆಗೆದುಕೊಳ್ಳುವಾಗ  ಬಾಂಬೆ ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಿಕ್ಕದ್ದು ಈ ಕುರಿತು ಧಾರವಾಡ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 225/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.