ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, October 5, 2017

CRIME INCIDENTS 05-10-2017

ದಿನಾಂಕ.05-10-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 05-10-2017 ರಂದು 0630 ಗಂಟೆ ಸುಮಾರಿಗೆ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಮನಸೂರ ಮದರಸಾ ಹತ್ತಿರ ರಸ್ತೆ ಮೇಲೆ ನಮೂದು ಮಾಡಿದ ಲಾರಿ ನಂ AP-07-TF-8487 ನೇದ್ದರ ಚಾಲಕನು ತನ್ನ ಲಾರಿಯನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳೀ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಮುಂದೆ ಹೋಗುತ್ತಿದ್ದ ವಾಹನವನ್ನು ಓವರಟೇಕ ಮಾಡಲು ಅಂತಾ ಒಮ್ಮೇಲೆ ರಾಂಗ ಸೈಡಿಗೆ ಕಟ್ ಮಾಡಿಕೊಂಡು ಲಾರಿಯ ಚಾಲನೆ ನಿಯಂತ್ರಣ ಮಾಡಲಾಗದೇ  ಹುಬ್ಬಳ್ಳಿ ಕಡೆಯಿಂದ ಬೆಳಗಾಂವ ಕಡೆಗೆ ರಸ್ತೆ ಎಡಸೈಡಿನಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಬಾಬತ ಕ್ರೂಸರ ನಂ KA-25-D-7441 ಹಾಗೂ ಕ್ರೂಸರ ಹಿಂದೆ ಇದ್ದ ಲಾರಿ ನಂ KA-22-C-3403  ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಪಿರ್ಯಾದಿಗೆ ಸಾದಾ ಗಾಯಪಡಿಸಿದ್ದಲ್ಲದೇ ಕ್ರೂಸರ ಚಾಲಕ ಸುನೀಲ ದೇವೆಂದ್ರಪ್ಪ ನಾತಾನವರ ಇವನ ತಲೆಗೆ ಬಾರೀ ಗಾಯಪಡಿಸಿ ಜಿಲ್ಲಾ ಆಸ್ಪತ್ರೆಯಿಂದ ಎಸ್.ಡಿ.ಎಂ ಆಸ್ಪತ್ರೆಗೆ ಹೆಚ್ಚಿನ ಉಪಚಾರಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿಯೇ ಮೃತಪಡುವಂತೆ ಮಾಡಿದ್ದು ಈ ಕುರಿತು ಧಾರವಾಡ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:05-10-2017 ರಂದು ಮುಂಜಾನೆ 0830 ಗಂಟೆ ಸುಮಾರಿಗೆ ಕಲಘಟಗಿ ಶಹರದ ಹನ್ನೆರಡು ಎತ್ತಿನ ಮಠದ ಹತ್ತಿರ  ಎದುರುಗಾರರು ಸಂಶಯಾಸ್ಪದವಾಗಿ ತಿರುಗಾಡುತ್ತಾ ತಮ್ಮ ಇರುವಿಕೆಯನ್ನು ಮರೆಮಾಚುವ  ಸಂಜ್ಞೆಯ ಅಪರಾಧವನ್ನು ಮಾಡಿ ತಲೆಮರೆಸಿಕೊಂಡು ಯಾರಿಗೂ ಗೊತ್ತಾಗದ ಹಾಗೇ ಹೋಗುವ ಸಾಧ್ಯತೆ ಇರುವುದರಿಂದ ನಾವು ಸಂಶಯಗೊಂಡು ಸದರಿ ಎದುರುಗಾರರ ಮೇಲೆ ನಾವು ನಿಗಾವಹಿಸಿ ಅವರಿಗೆ ವಿಚಾರಿಸಲು  1] ಗಫಾರಸಾಬ ತಂದೆ ಅಲ್ಲಾಸಾಬ ಪೀರಸಾಬನವರ,  26 ವರ್ಷ ಜಾತಿ  ಮುಸ್ಲಿಂ ಉದ್ಯೊ ಗೌಂಡಿ ಕೆಲಸ  ಸಾ: ತಂಬೂರ ತಾ:ಕಲಘಟಗಿ  2] ನವೀನ ತಂದೆ ಪರಶುರಾಮ ಉಗ್ನಿಕೇರಿ 20 ವರ್ಷ ಜಾತಿ  ಹಿಂದೂ  ಮರಾಠ, ಉದ್ಯೊ ಗೌಂಡಿ ಕೆಲಸ ಸಾ: ತಂಬೂರ ತಾ:ಕಲಘಟಗಿ ಅಂತಾ ಹೇಳಿದ್ದು ಸದರಿಯವರು ಸಂಜ್ಞೆಯ ಅಪರಾಧವೆಸಗಿ ಯಾರಿಗೂ ಹಾಜರಿಗೆ ಸಿಗದೆ ತಲೆಮರೆಸಿಕೊಂಡು ಹೋಗುವ ಸಾಧ್ಯತೆ ಹಾಗೂ ತಮ್ಮ ತಮ್ಮ ಇರುವಿಕೆಯನ್ನು ಯಾರಿಗೂ ಗೊತ್ತಾಗದಂತೆ ಮರೆಮಾಚಿಕೊಳ್ಳುವ ಸಾಧ್ಯತೆ ನಂಬಲರ್ಹವಾಗಿರುವುದರಿಂದ ಸದರಿ ಎದುರುಗಾರರ ಮೇಲೆ ಮುಂಜಾಗೃತಾ ಕ್ರಮ ಕುರಿತು ಕಲಂ 109 ಸಿಆರ್.ಪಿಸಿ ರೀತ್ಯ ಕ್ರಮ ಕೈಕೊಂಡಿದ್ದು ಇರುತ್ತದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ಈರಪ್ಪ ತಂದೆ ಮಾದೇವಪ್ಪ ಪುರದನ್ನವರ ವಯಾ 42 ವರ್ಷ ಸಾ: ಭೋಗೇನಾಗರಕೊಪ್ಪ ಈತನು ಸುಮಾರು 10-12 ವರ್ಷಗಳಿಂದ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ಮನೆಯ ಜನರು ಓಣಿಯ ಹಿರಿಯರು ಬುದ್ದಿಹೇಳಿದರೂ ಕುಡಿಯುವದನ್ನು ಬಿಡದೇ ದುಡಿದ ಹಣ ಹಾಳು ಮಾಡಿ ಅಲ್ಲಿ ಇಲ್ಲಿ ಕೈಗಡ ಸಾಲ ಮಾಡಿಕೊಂಡಿದ್ದು ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ: 04/10/2017 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ: 05/10/2017 ರ ಮುಂಜಾನೆ 06.00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳಯಲ್ಲಿ ಮನೆಯ ಹಿಂದಿನ ಕೋಣೆಯಲ್ಲಿ ಜಂತಿಗೆ ಪತ್ತಲದ ಸಹಾಯದಿಂದ ತಾನಾಗಿಯೇ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ. ಅಂತಾ ಮೃತನ ಹೆಂಡತಿ ವರದಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಮೃತ ನಾರಾಯಣ ನಿಂಗಪ್ಪ ಸಿಂಧೆ @ ಪುಂಜೋಜಿ ವಯಾ 52 ವರ್ಷ, ಗಳಗಿ ಹುಲಕೊಪ್ಪ, ಈತನು ಸುಮಾರು ವರ್ಷಗಳಿಂದ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದವನು ಈ ದಿನ ದಿನಾಂಕ: 05/10/2017 ರಂದು ಮದ್ಯಾಹ್ನ 12.30 ಗಂಟೆಗೆ ಶೀಗಿಹುಣ್ಣಿವೆ ಇರುವುದರಿಂದ ತಮ್ಮ ಜಮೀನಕ್ಕೆ ಚರಗಾ ಚಲ್ಲಲು ಅಂತ ಮನೆಯ ಜನರು ಕೂಡಿಕೊಂಡು ಹೊಲಕ್ಕೆ ಹೋದಾಗ ಹೊಲದಲ್ಲಿ ಟ್ರ್ಯಾಕ್ಟರ್ ಮಡ್ ಗಾರ್ಡ್ ಮೇಲೆ ಕುಳಿತವನು ಅವನಿಗಿದ್ದ ಫಿಟ್ಸ್ ಖಾಯಿಲೆ ಆಕಸ್ಮಾತ್ ಬಂದು ತಲೆ ಹಚ್ಚಿ ನೆಲಕ್ಕೆ ಬಿದ್ದು ಒಳಪೆಟ್ಟು ಹಚ್ಚಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದು