ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, October 6, 2017

CRIME INCIDENTS 06-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-10-2017 ರಂದು ವರದಿಯಾದ ಪ್ರಕರಣಗಳು
1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:  ಅಂಬಿಗೇರ ಕ್ರಾಸ ಹತ್ತಿರ ಆರೋಪಿತರಾದ 1.ಸಂತೋಷ ಭಂಜತ್ರಿ 2.ಮಂಜುನಾಥ ಜಿದ್ದಿಇವರು  ತಮ್ಮ ಫಾಯದೇಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಣ್ಣಿಗೇರಿ ಪಟ್ಟಣದ ಅಂಬಿಗೇರ ಕ್ರಾಸದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಮಟಕಾ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 2410-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 130/2017 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮೊರಬ ಗ್ರಾಮದ ಶಾಲೆಯ ಹತ್ತಿರ ಆರೋಪಿತರಾದ1.ಶಿವಾನಂದ ಚುಳಕಿ ಹಾಗೂ ಇನ್ನೂ 06 ಜನರು ಕೊಡಿಕೊಂಡು  ಆರೋಪಿತರು ತಮ್ಮ ತಮ್ಮ ಫಾಯಿದೆಗೋಸ್ಕರ ಇಸ್ಪೀಟು ಎಲೆಗಳ ಸಹಾಯದಿಂದ ಹಣ ಜೂಜಾಟಕ್ಕೆ ಹಚ್ಚಿ ಅಂದರ್ ಬಾಹರ ಅಂಬುವ ಇಸ್ಪೀಟು ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅದೆ. ಸದರಿಯವರಿಂದ ರೂ. 2860=00 ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 117/2017 ಕಲಂ 87  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:  ನವಲಗಂದದಲ್ಲಿಯ ಮಾಜಿ ಸೈನಿಕ ನಗರದಲ್ಲಿಯ ಮನೆ ಕೀಲಿ ಹಾಕಿಕೊಂಡು ತನ್ನ ಸ್ವಂತ ಊರಿಗೆ ಹೋಗಿ ಈ ದಿವಸ ದಿ:06-10-2017 ರಂದು ವಾಪಾಸ ಮನೆಗೆ ಬಂದಾಗ ತನ್ನ ಮನೆಯ ಬಾಗಿಲು ತೆರೆದಿದ್ದು ಚಿಲಕದಕೊಂಡಿ ಮುರಿದು ಯಾರೋ ಕಳ್ಳರು 05/10/2017 ರಂದು ಮಧ್ಯರಾತ್ರಿಯಿಂದ ದಿ:06-10-2017 ರ ಬೆಳಗಿನ 06-00 ಗಂಟೆಯ ನಡುವಿನ ಅವಧಿಯಲ್ಲಿ  ಮನೆಯೊಳಗೆ ಹೊಕ್ಕು ಮನೆಯ ಅಲಮೆರಾದಲ್ಲಿಟ್ಟ ಬೆಳ್ಳಿಯ ಆರತಿ ಹಾಗೂ ಕಲ್ಗೇಜ್ಜೆ ಅ:ಕಿ: 7500/- ಕಿಮ್ಮ ತ್ತಿನವು  ಹಾಗೂ ನಗದು ಹಣ 42000/- ರೂ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 118/2017 ಕಲಂ 380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದ ಇರುತ್ತದೆ.

4 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:  ವನಶ್ರೀ ಗ್ರಾಮದ ಮೃತಳಾದ ಕಮಲಾ ತಂದೆ ಈಶ್ವರಪ್ಪಾ ನಾಯ್ಕರ, ವಯಾ 48 ಜಾತಿ ಹಿಂದೂ ಕುರುಬರ ಉದ್ಯೋಗ ಪ್ರೌಢ ಶಾಲೆ ಶಿಕ್ಷಕಿ  ಸಾ ಃ ಅಳ್ನಾವರ ವನಶ್ರೀ ರಸ್ತೆ ಇವರು ಸನ್ 2012 ನೇ ಸಾಲಿನಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು  ಈ ಬಗ್ಗೆ ಖಾಸಗಿ ವೈದ್ಯರಲ್ಲಿ ಸಾಕಷ್ಟು ಉಪಚಾರ ಪಡೆದರೂ ಗುಣವಾಗದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕಃ 05-10-2017 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ವರದಿಗಾರರ ಮನೆಯಲ್ಲಿ ತನ್ನಷ್ಟಕ್ಕೆ ತಾನೇ ಮೈ ಮೇಲೆ ಸಿಮೆ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿರುವಾಗ ಅಕ್ಕ ಪಕ್ಕದ ಜನರೊಂದಿಗೆ ವರದಿಗಾರರು 108 ವಾಹನದಲ್ಲೊಇ ಉಪಚಾರಕ್ಕೆ ಜಿಲ್ಲಾ ಆಸ್ಪತ್ರೆಗೆ  ದಾಖಲಿಸಿದಾಗ ಅಲ್ಲಿಯ ವೈದ್ಯರು ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗ ಧಾಖಲಿಸಿದ್ದು ಉಪಚಾರ ಫಲಿಸದೇ ದಿನಾಂಕಃ 05-10-2017 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಮರಣ ಹೊಂದಿದ್ದು ಅವಳ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ವಗೈರ ಕೊಟ್ಟ ಫಿಯಾಱದಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈ ಕೊಂಡಿದ್ದು ಅದೆ.

5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕೋಟುರ ಗ್ರಾಮದ  ಮೃತಃ ನಿಂಗವ್ವ ಕೊಂ ಕಲ್ಲಪ್ಪ ಮಾದರ ವಯಾಃ 62 ವರ್ಷ. ಸಾಃ ಕೊಟೂರ ಇವಳು ತನಗಿದ್ದ ಮಾನಸಿಕ ಅಸ್ವಸ್ಥತೆಯಿಂದ ಮತ್ತು ವಯೋ ಸಹಜ ಕಾಯಿಲೆ ಇದ್ದುದರಿಂದ ದಿಃ 05/10/2017 ರಂದು ರಾತ್ರಿ 10.30 ಗಂಟೆಯಿಂದ ದಿಃ 06/10/2017 ರಂದು 07.00 ಗಂಟೆ ನಡುವಿನ ಅವಧಿಯಲ್ಲಿ ಕೋಟೂರ ಗ್ರಾಮದ ಹೊಲಗಟ್ಟಿ ಕೆರೆಯಲ್ಲಿ ತನ್ನಷ್ಟಕ್ಕೆ ತಾನೆ ಬಿದ್ದು ಮೃತ ಪಟ್ಟಿರುತ್ತಾಳೆ ವಿನಾಃ ಸದರಿಯವಳ ಮರಣದಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತಳ ಮಗ ಫಿಯಾಱಧಿ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 43/2017 ಕಲಂ 43/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.