ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, October 7, 2017

CRIME INCIDENTS 07-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 07-10-2017 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರೋಡ ಮೇಲೆ ಹಾರೂ ಬೆಳವಡಿ ಹತ್ತಿರ ರಸ್ತೆಯ ಮೇಲೆ ಕೆ ಎಸ್ ಆರ್ ಟಿ ಸಿ ಬಸ್ಸ ನಂಬರ ಕೆಎ 42 ಎಪ್ 1568 ನೆದ್ದನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿ ಜೋರಿನಿಂದ ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದೆ ಹೊರಟ ಕೆ ಎಸ್ ಆರ್ ಟಿ ಸಿ ಬಸ ನಂಬರ ಕೆಎ 25 ಎಪ್ 2982 ನೆದ್ದಕ್ಕೆ ಹಿಂದೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಬಸ್ಸನಲ್ಲಿದ್ದ ಪ್ಯಾಸೆಂಜರ ಜನರಿಗೆ ಸಾದ ವ ಭಾರಿ  ರಕ್ತ ಘಾಯ ಪೆಟ್ಟುಗಳು ಆಗುವಂತೆ ಮಾಡಿ ತನಗೂ ಘಾಯಪಡಿಸಿಕೊಂಡಿದ್ದಲ್ಲದೆ ಎರಡು ಬಸ್ಸಗಳಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 233/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತ ಮಲ್ಲಪ್ಪ ತಂದೆ ಭೀಮಪ್ಪ ತೆಂಬದ  ವಯಾ:55 ವರ್ಷ ಸಾ:ಗುಮ್ಮಗೋಳ ಈತನು ಜಮೀನ ಸಾಗುವಳಿಗಾಗಿ ಮೊರಬ ವಿಜಯಾ ಬ್ಯಾಂಕಿನಲ್ಲಿ 2 ಲಕ್ಷದ 40 ಸಾವಿರ ರೂಪಾಯಿ ಸಾಲ ಮಾಡಿದ್ದು ಮತ್ತು ಮಕ್ಕಳ ಮದುವೆಗಾಗಿ ಊರಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿದ್ದು ಈ ವರ್ಷ ಸರಿಯಾಗಿ ಮಳೆಬೆಳೆ  ಆಗದ್ದರಿಂದ ಮಾಡಿದ ಸಾಲ ಹೇಗೆ ತೀರಿಸುವುದು ಅಂತಾ ಮಾನಸಿಕ ಮಾಡಿಕೊಂಡು ದಿ:05/10/2017 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಅಸ್ವವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಕಲಿಸಿದಾಗ ಅಲ್ಲಿ ಉಪಚಾರ ಫಲಿಸದೇ ಈ ದಿವಸ ದಿ:07/10/2017 ರಂದು ಬೆಳಗಿನ 3-10 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅದೆ ವಿನಹ ಬೇರೆ ಯಾರ ಮೇಲೂ ಸಂಶಯ ವಿರುವುದಿಲ್ಲ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 33/2017 ಕಲಂ 147 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ  ಮೃತ ದ್ಯಾಮಣ್ಣ.ತಂದೆ ಯಲ್ಲಪ್ಪ.ವಾಲಿಕಾರ.ವಯಾ-30 ವರ್ಷ.ಜ್ಯಾತಿ-ಹಿಂದೂ.ಕುರುಬ.ಸಾಃಕಲ್ಲೇ.ತಾಃಧಾರವಾಡ ಇತನು ಕಳೇದ 2 ವರ್ಷಗಳಿಂದಾ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ದಿ:3-10-2017 ರಂದು ಮೃತನು ವಿಪ್ರೀತ ಸರಾಯಿ ಕುಡಿದು ಮನೆಗೆ ಬಂದಾಗ ಸರಾಯಿ ಕುಡಿಯುವದನ್ನುಬೀಡ ಅಂತಾ ಮೃತನ ಹೆಂಡತಿ [ವರದಿಗಾರಳು]ಯು ಮೃತ ತನ್ನ ಗಂಡನಿಗೆ ಬುದ್ದಿ ಹೇಳಿದಕ್ಕೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿದ್ದ ಹತ್ತಿಗೆ ಹೊಡೆಯುವ ಎಣ್ಣೆಯನ್ನು ತನ್ನಷ್ಟಕ್ಕೆ ತಾನೇ ಕುಡಿದಿದ್ದು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ದಿ:7-10-2017 ರಂದು ಬೆಳಗಿನ-3-30 ಗಂಟೆಗೆ ಮೃತ ಪಟ್ಟಿದ್ದು ಈ  ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 44/2017  ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.