ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, October 8, 2017

CRIME INCIDENTS 08-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 08-10-2017 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 8-10-2017 ರಂದು ಬೆಳಿಗ್ಗೆ 05-15-00 ಗಂಟೆಗೆ ಹನಸಿ ಗ್ರಾಮದ ಹದ್ದಿಯ ಪೈಕಿ ಶಿರಕೋಳ-ಹನಸಿ ರಸ್ತೆಯ ಮೇಲೆ ತುಪ್ಪರಿ ಹಳ್ಳದ ಬ್ರಿಡ್ಜ ಹತ್ತಿರ ಸದರಿ ಆರೋಪಿ ಮಹಾಂತೇಶ ಗುಜ್ಜಲ್ ಇತನು ತನ್ನ ಸ್ವಂತ ಫಾಯಿದೆಗೋಸ್ಕರ ಪಾಸು ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ 49 ಹೈವರ್ಡ್ಸ ವಿಸ್ಕಿ ತುಂಬಿದ 90 ಎಂ.ಎಲ್.ದ ಟೆಟ್ರಾ ಪ್ಯಾಕೇಟುಗಳನ್ನು ತನ್ನ ಮೋಟಾರು ಸೈಕಲ್ ನಂ.ಕೆಎ-26/ಎಚ-8607 ನೇದ್ದರ ಮೇಲೆ ಇಟ್ಟುಕೊಂಡು ಮಾರಾಟ ಮಾಡಲು ಹೋಗುತ್ತಿದ್ದಾಗ ಸಿಕ್ಕ ಅಪರಾಧ. ಇವುಗಳ ಒಟ್ಟು ಕ್ಕಿಮ್ಮತ್ತು 11,421-00 ರೂ. ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 122/2017 ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

 2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಬಸಯ್ಯ ತಂದೆ ಕೊಟ್ರಯ್ಯ ಹಿರೇಮಠ ವಯಾ:48 ವರ್ಷ ಸಾ:ಗುಮ್ಮಗೋಳ ಈತನು ಕುಡಿತದ ಚಟದವನಾಗಿದ್ದು ಕುಡಿತದ ಅಮಲಿನಲ್ಲಿ ತನ್ನಷ್ಟಕ್ಕೆ ತಾನೇ ದಿ:05-10-2017 ರಂದು ಮನೆಯ ಮುಂದಿನ ಚಾವಣಿಯಲ್ಲಿ ರಾತ್ರಿ 11-00 ಗಂಟೆಯ ಸುಮಾರಿಗೆ ಮಧ್ಯಸೇವಿಸಿ ಅದೇ ಮತ್ತಿನಲ್ಲಿ ಯಾವುದೋ ವಿಷಕಾರಕ ಎಣ್ಣೆ ಸೇವಿಸಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಉಪಚಾರ ಪಲಿಸದೇ ಈ ದಿವಸ ದಿ:08-10-2017 ರಂದು ಬೆಳಿಗ್ಗೆ 07-40 ಗಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಅದೆ ವಿನಹ ನನ್ನ ಗಂಡನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯವಿರುವುದಿಲ್ಲ ಅಂತಾ ವರದಿಗಾರಳು ತನ್ನ ವರದಿಯಲ್ಲಿ ನಮೂದಿಸಿದ್ದು ಅದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 34/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.