ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, October 9, 2017

CRIME INCIDENTS 09-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-10-2017 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ ಗ್ರಾಮದ ಹತ್ತಿರ  ಆರೋಪಿತನಾದ ರಾಜೇಸಾಬ ಶಿರೂರ ಇತನ ಮೋಟರ ಸೈಕಲ ನಂಬರ ಕೆಎ-25/ಈಯು-6614 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ ಸೈಕಲನ್ನು ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಎಡಸೈಡಿನ ಅಂಚಿನಲ್ಲಿ ನೀರಿನ ಗಾಡಿಯನ್ನು ತಳ್ಳಿಕೊಂಡು ಹೊರಟಿದ್ದ ಹನಮಂತಪ್ಪ ತಂದೆ ಬಾಲಪ್ಪ ಮಾದರ ವಯಾ-56 ವರ್ಷ ಸಾ!! ಬಸಾಪುರ ಇವನಿಗೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ತನಗೆ ಹಾಗೂ ಹನಮಂತಪ್ಪ ಬಾಲಪ್ಪ ಮಾದರ ಇವನಿಗೆ ಸಾಧಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 131/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಬೆಂಗಳೂರ ಎನ್.ಎಚ್-4 ರಸ್ತೆಯ ಮೇಲೆ ಜಿಗಳೂರ ಗ್ರಾಮದ ಹತ್ತಿರ ಇದರ 1 ಅಶೋಕ ಯಾದವ ನೇದವನು ತನ್ನ ಲಾರಿ ನಂ ಎಮ್.ಎಚ್-12/ಎಚ್.ಡಿ-5238 ನೇದ್ದನ್ನು ಅತೀ ಜೋರಿನಿಂದ ವ ಅಲಕ್ಷತನದಿಂದ ಚಾಲಯಿಸಿ ತನ್ನ ಮುಂದೆ ಹೊರಟ ಟ್ರ್ಯಾಕ್ಟರ ನಂ ಎಪಿ-22/ಎ.ಡಿ-7693 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಟ್ರ್ಯಾಕ್ಟರದಲ್ಲಿದ್ದ ಈರಪ್ಪ ಬಸಪ್ಪ ಹರಿಜನ @ ಮೇತ್ರಿ. ಸಾ: ಜಿಗಳೂರ, ತಾ: ಕುಂದಗೋಳ ಈತನಿಗೆ ಒಳಪೆಟ್ಟುಗಳಾಗುವಂತೆ ಮಾಡಿದ್ದು, ಆರೋಪಿ ನಂ 2 ನೇದವನು ತನ್ನ ಲಾರಿ ನಂ ಎಮ್.ಎಚ್-12/ಎಮ್.ವ್ಹಿ-5859 ನೇದ್ದನ್ನು ಅತೀ ಜೋರಿನಿಂದ ವ ಅಲಕ್ಷತನದಿಂದ ಚಲಾಯಿಸಿ ಲಾರಿಗೆ ಹಿಂದೆ ಡಿಕ್ಕಿ ಮಾಡಿ ಅಫಘಾತಪಡಿಸಿ ತಮ್ಮ ಲಾರಿಗಳಿಗೆ ಜಖಂಗೊಳ್ಳುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 162/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪಾಳೆ ಗ್ರಾಮದ ಭಾರತ ಬೆಂಜ್ ಶೋರೂಂ(ಆರ್.ಎನ್ಸ್.ಎಸ್. ಟ್ರಕ್ಕಿಂಗ್) ನೇದ್ದರ ಆವರಣದಲ್ಲಿ ನಿಲ್ಲಿಸಿದ್ದ ಲಾರಿ ನಂ. 1] ಕೆಎ-29-ಎ-6883 2] ಕೆಎ-29-ಎ-8167 3] ಕೆಎ-33-ಎ-6925 4] ಕೆಎ-51-ಬಿ-8739 5] ಕೆಎ-29-ಎ-8230 ನೇದ್ದವುಗಳಲ್ಲಿಯ ತಲಾ ಎರಡು ಬ್ಯಾಟರಿಗಳು ತಲಾ ಒಂದು ಬ್ಯಾಟರಿಯ ಅ.ಕಿ 3,000/- ರೂ. ಗಳು ಅದರಂತೆ ಒಟ್ಟು 10 ಬ್ಯಾಟರಿಗಳ ಅ.ಕಿ 30,000/- ರೂ. ನೇದ್ದವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 233/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ನರೇಂದ್ರ ಬೈಪಾಸ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿಟ್ಟ ಹುಲೇಂದ್ರ ಪವಾರ ಇವರ  ಅಂದಾಜು 20.000/- ರೂ ಕಿಮ್ಮತ್ತಿನ 40 ತಗಡುಗಳನ್ನು ಹಾಗೂ ಅಂದಾಜು 13.000/- ರೂ ಕಿಮ್ಮತ್ತಿನ 13 ಕಬ್ಬಿಣದ ಪರ್ಲಿಂಗ ಪೈಪಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 236/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಪರಸಾಪೂರ ಗ್ರಾಮದ ಮೃತ ಗುರುಶಿದ್ದಗೌಡ ತಂದೆ ರಾಮನಗೌಡ ಪಾಟೀಲ 38 ವರ್ಷ ಸಾ..ಪರಸಾಪೂರ ತಾ..ಕಲಘಟಗಿ ಇವನು ತನ್ನ ಮೊದಲನೆಯ ಹೆಂಡತಿ ಸರಿಯಾಗಿ ಬಾಳ್ವೆ ಮಾಡದೆ ಡೈವೋರ್ಸ ನೀಡಿದ್ದು, ತದನಂತರ ಮೃತನು ಎರಡನೇಯ ಮದುವೆಯಾದಾಗ ಅವಳು ಸಹಾ ಮೃತನೊಂದಿಗೆ ಸರಿಯಾಗಿ ಬಾಳ್ವೆ ಮಾಡದೆ ಯಾರಿಗೂ ಹೇಳದೆ ಕೇಳದೆ ಹೋಗಿದ್ದರಿಂದ ಮೃತನು ತನ್ನ ಹೆಂಡತಿಯರಿಬ್ಬರೂ ತನ್ನೊಂದಿಗೆ ಸರಿಯಾಗಿ ಬಾಳ್ವೆ ,ಮಾಡಲಿಲ್ಲಾ ಅಂತಾ ಮಾನಸಿಕ ಮಾಂಡಿಕೊಂಡು ಅದೆ ಮಾನಸೀಕದಲ್ಲಿ ಯಾವುದೋ ವಿಷವನ್ನು ಕುಡಿದು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಆಸ್ಪತ್ರೆಲ್ಲಿ ದಾಖಲಿಸಿದಾಗ ಉಪಚಾರ ಫಲಿಸಿದೆ ದಿ..09-10-2017 ರಂದು 00-20 ಗಂಟೆಯ ಸುಮಾರಿಗೆ ಮರಣಹೊಂದಿದ್ದು ಈ ಬಗ್ಗೆ ಯಾರ ಮೇಲೂ ಯಾವ ಸಂಶಯ ವಗೈರೆ ಇರುವದಿಲ್ಲಾ ಅಂತಾ ವರದಿಯಲ್ಲಿಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 63/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.