ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, October 10, 2017

CRIME INCIDENTS 10-10-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-10-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಗೋವನಕೊಪ್ಪ ಗ್ರಾಮದ ಹತ್ತಿರ ಸಿದ್ದಪ್ಪ ತಟ್ಟಿಮನಿ ಇವನು ತನ್ನ ಮೋಟರ್ ಸೈಕಲ್ ನಂ KA-25-ET-9531 ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್ ಸೈಕಲ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬದಿಯ ಗಿಡಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ತನಗೆ ಹಾಗೂ ಮೋಟರ್ ಸೈಕಲ ಹಿಂದೆ ಕುಳಿತ ಬಸವರಾಜ ಮಲ್ಲಪ್ಪ ತಟ್ಟಿಮನಿ ಇವನಿಗೆ ಸಾದಾ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 237/2017 ಕಲಂ  279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಡೋರಿ ಗ್ರಾಮದ  ಮೃತ ಶಿವಾನಂದ ತಂದೆ ಮಡಿವಾಳಪ್ಪ ಬೋರಿಮನಿ ವಯಾ 36 ಜ್ಯಾತಿ ಹಿಂಧೂ ವಾಲ್ಮೀಖಿ ಉದ್ಯೋಗ ಶೇತ್ಕಿ ಸಾ: ಡೋರಿ ತಾ; ಧಾರವಾಡ ಇತನು ದಿನಾಂಕ 10-10-2017 ರಂದು ಬೆಳಗಿನ ಜಾವ 4-00 ಗಂಟೆಯಿಂದ 7-00 ಗಂಟೆಯ ನಡುವಿನ ಅವದಿಯಲ್ಲಿ ಡೋರಿ ಗ್ರಾಮ ಹದ್ದಿಯ ತನ್ನ ಹೊಲದಲ್ಲಿಯ ಬೇವಿನ ಗಿಡದ ಟೊಂಗಿಗೆ ತನಗೆ ಮದುವೆ ಮಾಡಿಲ್ಲಾ ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ಹಗ್ಗದಿಂದ ಉರುಲು ಹಾಕಿಕಂಡು ಸತ್ತಿದ್ದು ಅದೆ ವಿನ: ಅವನ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.