ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, October 11, 2017

CRIME INCIDENTS 11-10-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-09-2017 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಾಪೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಮಾಗಪ್ಪಾ ಬಡಗೇರ ಹಾಗೂ ಇನ್ನೂ 08 ಜನರು ಕೊಡಿಕೊಂಡು ತಮ್ಮ ತಮ್ಮ ಫಾಯದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪಿಟ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದಾಗ ಸಿಕ್ಕ್ಕಿದ್ದು ಅವರಿಂದ ರೂ 750-00  ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.        

2. ನವಲಗುಂದ ಪೊಲೀಸ್ ಠಾಣಾ  ವ್ಯಾಪ್ತಿಯ:ತಿಲಾಱಪುರ ಗ್ರಾಮದ ಕಾಣೆಯಾದ ಮಹಿಳೆ ಶಾಂತವ್ವ ಕೋಂ ಯಲ್ಲಪ್ಪ ಕಾಳಿ ಇತಳು ಕಳೆದ 3 ವರ್ಷದಿಂದ ತನ್ನ ಮಗಳು ರೇಖಾ ತೀರಿಕೊಂಡಿದ್ದಕ್ಕೆ ಮಾನಸಿಕ ಮಾಡಿಕೊಂಡು ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ತವರು ಮನೆ ತಿರ್ಲಾಪೂರದಲ್ಲಿ  ತಿರ್ಲಾಪೂರದಲ್ಲಿರುವ ತನ್ನ ತವರು ಮನೆಯಿಂದ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2017  ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಮೇಲೆ ಹೆಬಸೂರ ಕಾಲೇಜ್ ಹತ್ತಿರ ಟಾಟಾ ಸಫಾರಿ ವಾಹನ ನಂಬರ ಕೆಎ-36/ಎಮ್-8134 ನೇದ್ದನ್ನು ಅದರ ಚಾಲಕ ಬಸವರಾಜ ಹನಮಂತಪ್ಪ ಗಾಮನಗಟ್ಟಿ ಸಾ!! ಬ್ಯಾಹಟ್ಟಿ ಇತನು ಸದರ ವಾಹನವನ್ನು ಬ್ಯಾಹಟ್ಟಿ ಕಡೆಯಿಂದ ಹೆಬಸೂರ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹೆಬಸೂರ ಕಡೆಯಿಂದ ಬ್ಯಾಹಟ್ಟಿ ಕಡೆಗೆ ಹೊರಟ್ಟಿದ್ದ ಯಾವುದೋ ಒಂದು ವಾಹನವನ್ನು ತಪ್ಪಿಸಲು ಹೋಗಿ ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಗಡೆ ಸೈಡ್ ಪಲ್ಟಿ ಮಾಡಿ ಕೆಡವಿ ಅಪಗಘಾತಪಡಿಸಿ ವಾಹನದಲ್ಲಿದ್ದ ಪಿರ್ಯಾದಿ ಬಸವರಾಜ ಸಿದ್ದಪ್ಪ ಅರಳಿ, ಚೇತನ ಉಮೇಶ ಅರಳಿ, ಶರೀಫಸಾಬ ಖಾದರಸಾಬ ನದಾಫ್, ಕೋಟ್ರೇಶ @ ಕಾಳಪ್ಪ ತಂದೆ ವೀರಬದ್ರಪ್ಪ ಬಡಿಗೇರ ಎಲ್ಲರೂ ಸಾ!! ಬ್ಯಾಹಟ್ಟಿ ಇವರುಗಳಿಗೆ ಸಾಧಾ ವ ಬಾರಿ ಗಾಯಪಡಿಸಿದ್ದಲ್ಲದೇ, ತಾನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 234/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ,: ತಾರಿಹಾಳ ಗ್ರಾಮದ ಗಿರಿಯಪ್ಪ ಬಾಗಲಿದೇವರ ಇವರ ಮನೆಯ ಮುಂದೆ ನಿಲ್ಲಿಸಿದ್ದ, ಹಿರೋ ಹೊಂಡಾ ಸ್ಪೆಂಡರ್ ಮೋಟರ ಸೈಕಲ್ ನಂ. KA-25-E.B-8606 ಚಾಸ್ಸಿ ನಂ. MBLHA10EJ8GK01642 ಇಂಜಿನ್ ನಂ. HA10EA8GK02429 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 235/2017 ಕಲಂ 379  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಪಶುಪತಿಹಾಳ ಗ್ರಾಮದ ಸಿದ್ದಾರೋಡ ಬೋಲಿ ಹಾಗೂ ಇನ್ನೂ 02 ಜನರು  ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಚೀರಾಡುವುದು, ಬೈದಾಡುವುದು ಮಾಡುತ್ತಾ ಗ್ರಾಮದಲ್ಲಿ ಜನರಿಗೆ ಭಯವಾಗುವ ರೀತಿಯಲ್ಲಿ ವರ್ತಿಸುತ್ತಾ ತಿರುಗಾಡುತ್ತಿದ್ದು ಅವರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅವರು ಯಾರ ಮಾತನ್ನೂ ಕೇಳದವರು, ದುಷ್ಟರು, ಹುಂಬರು, ಅಂತಾ ಕಂಡು ಬಂದಿದ್ದರಿಂದ ಅಲ್ಲದೇ ಅವರು ಪದೇ ಪದೇ ಇದೇ ರೀತಿಯಲ್ಲಿ ಗ್ರಾಮದಲ್ಲಿ ಜನರಿಗೆ ಭಯವಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿದು ಬಂದಿದ್ದರಿಂದ ಅವರು ಯಾವ ವೇಳೆಗೆ ಯಾರಿಗೆ ಯಾವ ಅನಾಹುತ ಮಾಡುತ್ತಾರೋ ಯಾರ ಆಸ್ತಿ ಪಾಸ್ತಿಗೆ ಲುಕ್ಷಾನು ಮಾಡುತ್ತಾರೋ ಅಂತಾ ಹೇಳಲು ಬಾರದ್ದರಿಂದ ಸದರಿಯವರ ಗುನ್ನಾನಂ 67/2017 ಕಲಂ 110 ಇ & ಜಿ ಸಿ,ಆರ್,ಪಿ,ಸಿ ಪ್ರಕಾರ ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ.

6. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ :ನಲವಡಿ ಗ್ರಾಮದ ಹತ್ತಿರ ಆರೋಪಿತನಾದ ದಲ್ಲದ್ದರ ಮುಳಗುಂದ ಇವನ ಇನೋವಾ ಕಾರ ನಂಬರ ಕೆಎ-26/ಎಮ್-5655 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ನವೀನ ತಂದೆ ಶರಣಪ್ಪ ಅಕ್ಕಿ ವಯಾ-9 ವರ್ಷ ಸಾ!! ಭದ್ರಾಪುರ ಈತನಿಗೆ ಡಿಕ್ಕಿ ಮಾಡಿ ಅಪಗಾತ ಪಡಿಸಿ ಸಾಧಾ ವ ಭಾರಿ ಗಾಯ ಪಡಿಸಿದ್ದು  ಇರುತ್ತೆದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 133/2017 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.