ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, October 12, 2017

CRIME INCIDENTS 12-10-2017

ದಿನಾಂಕ.12-10-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಅಳ್ನಾವರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 12-10-2017 ರಂದು ಬೆಳಗಿನ ಜಾವ 2-45 ಗಂಟೆಗೆ ಹಳ್ಳಿಗೇರಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಬೀದಿ ಲೈಟಿನ ಬೆಳಕಿನಲ್ಲಿ ಆಫಾದಿತರಾದ 1) ಅಬ್ಬಾಸ ಅಲಿ ತಂದೆ ರಸೂಲಸಾಬ ತಂಬೂಲಿ 2) ಬಸಯ್ಯಾ ಗುರುಬಸಯ್ಯಾ ಹಿರೇಮಠ 3) ಅನ್ವರ ತಂದೆ ಇಮಾಮಸಾಬ ಮಣ್ಣಾನವರ ಸಾ|| ಎಲ್ಲರೂ ಹಳ್ಳಿಗೇರಿ ತಾ||ಜಿ|| ದಾರವಾಡ ಇವರು ತಮ್ಮ ತಮ್ಮ ಪಾಯಿದೆಗೋಸ್ಕರ 52 ಎಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬುವ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ೊಟ್ಟು 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ 12-10-2017 ರಂದು ಮುಂಜಾನೆ 11-45 ಗಂಟೆ ಸುಮಾರಿಗೆ, ವರೂರ ಬಸ್ ನಿಲ್ದಾಣದ ಹತ್ತಿರ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಕಾರ ನಂ. ಪಿ.ವೈ-01-ಬಿ.ಎ-9822 ನೇದ್ದರ ಚಾಲಕ ಶ್ರೀ ಶಿವಶಂಕರ @ ಶಿವಕುಮಾರ ತಂದೆ ಗೋವಿಂದಪ್ಪ ಸಾ. ಕೋಟೆ, 1ನೇ ಮುಖ್ಯ ರಸ್ತೆ, ಕೋಲಾರ, ಇವರು ಕಾರನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ನೀಲವ್ವ ಕೋಂ ಹನಮಂತಪ್ಪ ತಳವಾರ ವಯಾ 44 ವರ್ಷ ಸಾ. ರಾಮನಕೊಪ್ಪ ತಾ. ಕುಂದಗೋಳ ಇವರಿಗೆ ಡಿಕ್ಕಿ ಮಾಡಿ, ಎಡಗೈ ಭುಜಕ್ಕೆ ಭಾರಿ ರಕ್ತ ಗಾಯಪಡಿಸಿ, ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಈ ದಿವಸ ಮದ್ಯಾಹ್ನ 12-20 ಗಂಟೆ ಸುಮಾರಕ್ಕೆ ಮರಣ ಹೊಂದುವಂತೆ ಮಾಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಧಾರವಾಡ ಗ್ರಾಮಿಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 22-08-2017 ರಂದು ರಾತ್ರಿ 23-30 ಘಂಟೆಯಿಂದ ದಿನಾಂಕ 23-08-2017 ರ ಬೆಳಗಿನ 06-30 ಘಂಟೆಯ ಮದ್ಯೆದ ಅವದಿಯಲ್ಲಿ ಹೆಬ್ಬಳ್ಳಿ ಗ್ರಾಮದ ಪಿರ್ಯಾದಿಬುದೇಶ ಹೊನ್ನಪ್ಪನವರ ಮನೆಯ ಮುಂದೆ ನಿಲ್ಲಿಸಿದ ಪಿರ್ಯಾದಿಯ ಬಾಬತ ಒಂದು ಅಪೆ ರಿಕ್ಷಾ ನಂಬರ ಕೆ ಎ 26 ಎ 2045 ನೆದ್ದನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.