ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, November 30, 2017

CRIME INCIDENTS 30-11-2017


ದಿನಾಂಕ.30-11-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:30-11-2017 ರಂದು ಮದ್ಯಾಹ್ನ 2-45 ಗಂಟೆ ಸುಮಾರಿಗೆ ನೀರಸಾಗರ ಕ್ರಾಸ್ ಹತ್ತಿರ ರಾಜಾ ದಾಭಾದಲ್ಲಿ ಇದರಲ್ಲಿಯ ಫಿರ್ಯಾದಿ ಹಾಗೂ ಅವನ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಮಾವ  ಕೂಡಿ ಆರೋಪಿ 1] ಈಶ್ವರಗೌಡ ಪಾಟೀಲ್,ಇವನು ದಾಭಾದಲ್ಲಿ ಊಟ ಮಾಡಿದ್ದರಿಂದ ಊಟದ ಬಿಲ್ಲು ರೂ 1050/- ಮಾಡಿದ್ದನ್ನು ರೂ. 1000/- ತೋಗೋಳ್ರಿ 50/- ಬಿಡುವಂತೆ ಹೇಳಿದ ಫಿರ್ಯಾದಿಗೆ  ಆರೋಪಿ  ಸೆ.ನಂ. 2] ವಿಶ್ವನಾಥ ಬಾಬಜಿ ಇವನು ಊಟ ಮಾಡಿ ಬಿಲ್ಲು ಕೊಡಾಕ ಹಿಂದಮುಂದ ನೋಡ್ತೀರೇನಲೇ ಅವಾಚ್ಯ ಬೈದಾಡಿದ್ದಲ್ಲದೇ ಅಡ್ಡಗಟ್ಟಿ ತರುಬಿ,  ಬಿಲ್ಲು ಚುಕ್ತಾ ಮಾಡಲಿಲ್ಲಂದ್ರ ನಿಮನ್ನ ಇಲ್ಲೆ ಹೂತು ಹಾಕಿ ಬಿಡ್ರೇವಿ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೇ ಆರೋಪಿ 1 ನೇದವನು ಕಬ್ಬಿಣದ ರಾಡಿನಿಂದ ಫಿ:ದಿ ಚಿಕ್ಕಪ್ಪನಿಗೆ ತಲೆ ಗೆ ಹೊಡೆದು ಗಾಯಪಡಿಸಿದ್ದಲ್ಲದೇ ಫಿ:ದಿಗೆ ಆರೋಪಿ 2 &  ಆರೋಪಿ 3 ಸಹದೇವಪ್ಪ ಮುಗಳಿ ಇವರು  ಬಾಟ್ಲಿಗಳಿಂದ ಹೊಡೆದು ಗಾಯಪಡಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.


2)ಧಾರವಾಡ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆಸ್ಪಕ ತಂದೆ ಮೋದಿನಖಾನ ಜಾಗೀರದಾರ ವಯಾ-45 ವರ್ಷ. ಸಾ: ಚಂದನಮಟ್ಟಿ ಇತನು ಈಗ ಸುಮಾರು ದಿವಸಗಳಿಂದ ಚಂದನಮಟ್ಟಿ ಗ್ರಾಮದಲ್ಲಿ ಶಾಂತ ರೀತಿಯಿಂದ ಮುಗ್ದ ಸ್ವಭಾವದ ಜನರಿಗೆ ಧಮಕಿ ಹಾಕಿ ಅವರ ಮೇಲೆ ಗೂಂಡಾ ವರ್ತನೆ ಹಾಗೂ ರೌಡಿ ವರ್ತನೆ ತೋರುತ್ತಿದ್ದು ಗ್ರಾಮದ ಹೆಣ್ಣುಮಕ್ಕಳಿಗೆ. ಮಹಿಳೆಯರಿಗೆ ಶಾಲಾ ವಿದ್ಯಾರ್ಥಿನಿಯರಿಗೆ ಅವಾಚ್ಯವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾ ಗ್ರಾಮದ ಶಾಂತತೆಯನ್ನು ಹಾಳು ಮಾಡುವ ಸ್ವಭಾವದವನಿರುತ್ತಾನೆ ಸದರಿಯವನಿಗೆ ಹೀಗೇಯೇ ಬಿಟ್ಟಲ್ಲಿ ಸದರಿಯವನು ಗ್ರಾಮದ ಶಾಂತತೆಯನ್ನು ಹಾಳು ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಸಾದ್ಯತೆಗಳಿರುವದ್ದರಿಂದ  ಹಾಗೂ ತನ್ನ ಪ್ರವೃತಿಯಿಂದ ಗ್ರಾಮದಲ್ಲಿ ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ ಇರ್ಯಾದೆಯವನಿದ್ದರಿಂದ ಸದರಿಯವನಿಗೆ ಚಂದನಮಟ್ಟಿ ಗ್ರಾಮದ ಬಸ ನಿಲ್ದಾಣದ ಹತ್ತಿರ ದಿನಾಂಕ 30-11-2017 ರಂದು 1530 ಗಂಟೆ ಹಿಡಿದು ಠಾಣೆಗೆ ಕರೆತಂದು ಸದರಿಯವನ ಮೇಲೆ ಕಲಂ 110(ಈ)&(ಜಿ) ಸಿ.ಆರ್.ಪಿ.ಸಿ ಅಡಿಯಲ್ಲಿ ಮುಂಜಾಗೃತ ಕ್ರಮ ಕೈಗೊಂಡಿದೆ ಇರುತ್ತದೆ. 

Wednesday, November 29, 2017

CRIME INCIDENTS 29-11-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 29-11-2017 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವಿ ಕ್ರಾಸ್ ಹತ್ತಿರ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿತಾದನ ಚಾಲಕ ಪರಮೇಶ್ವರ ಮೆಣಸಿನಕಾಯಿ ಇವರ ಕಾರ ನಂ. ಕೆಎ-23-ಎಂ-6849 ನೇದ್ದರ ಸಾ. ಸುಳ್ಳ ಇವನು ಕಾರನ್ನು ತಡಸ್ ಕ್ರಾಸ್ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ಕಾರ ನಿಯಂತ್ರಣ ತಪ್ಪಿ, ರಸ್ತೆಯ ಮಧ್ಯದಲ್ಲಿರುವ ಡಿವೈಡರಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಕಾರನಲ್ಲಿದ್ದ ತನಗೆ ಮತ್ತು ಹೇಮಾ ಕೋಂ ಸಿದ್ದನಗೌಡ ಪಾಟೀಲ ಸಾ. ಸೋಮಾಪೂರ ಇವರಿಗೆ ತೀವ್ರ ಗಾಯಪಡಿಸಿ, ಸುವರ್ಣ ಕೋಂ ಶ್ರೀಶೈಲ್ ಅಬ್ಬಾರ ಸಾ. ತಡಕೋಡ, ಸುಧಾ ಕೋಂ ಕಲ್ಮೇಶ ಶಿರಕೋಳ ಸಾ. ತಲವಾಯಿ ಇವರಿಗೆ ಸಾದಾ ಗಾಯಪಡಿಸಿದ್ದಲ್ಲದೇ, ತಾನೂ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 271/2017 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ  ಮೃತ ಅನಾಮಧೇಯ ಗಂಡಸು ಅಂದಾಜು 26 ವರ್ಷ ವಯಸ್ಸಿನ ಬೂದು ಟೀ ಶರ್ಟ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ ಸಾದಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ ಚಹರೆ ಗುರುತಿನ ಈತನು ನಮ್ಮೂರಿನಲ್ಲಿ ಕಳೆದ 4-5 ದಿನಗಳಿಂದ ಹುಚ್ಚರಂತೆ ವರ್ತಿಸುತ್ತಾ ಓಡಾಡಿಕೊಂಡಿದ್ದನು ಈತನು ಊಟವಿಲ್ಲದೇ ಉಪವಾಸ ಇದ್ದುದರಿಂದ ಅಥವಾ ಯಾವುದೋ ಕಾಯಿಲೆಯಿಂದ ನರಳಿ 2 ದಿನಗಳ ಹಿಂದೆಯೇ ಸತ್ತಿರಬಹುದು ಅಂತಾ ಶವವನ್ನು ನೋಡಿ ತಿಳಿದುಬಂದಿರುತ್ತದೆ. ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತಾ ಫಿಯಾಱಧೀ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 19/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಗಲುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರಕೋಳ ಗ್ರಾಮದ ಮೃತ ಉಡಚ್ಚವ್ವ ಮಾದರ ಇವರು ಕೆ ವಿ ಜಿ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿ ಸಾಲ ಮಾಡಿದ್ದು ಮತ್ತು ಅಲ್ಲಲ್ಲಿ ಕೈಗಡ ಸಾಲ ಮಾಡಿದ್ದು ಸಾಲ ತೀರೀಸಲಿಲ್ಲ ಅಂತಾ ಮತ್ತು ತನ್ನ ಮದುವೆಗೆ ತನ್ನ ತಂದೆ ಸಾಲ ಮಾಡಬಹುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಗುಮ್ಮಗೋಳ ಹದ್ದಿಯ ಯಲ್ಲಪ್ಪ ತಂದೆ ಕಾಶಪ್ಪ ಮಾದರ ಇವರ ಹೊಲದ ಮುಂದಿನ ಎಮ್ ಆರ್ ಬಿ ಸಿ ಕಾಲುವೆಯಲ್ಲಿ ದಿ:28-11-2017 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಬಿದ್ದು ಆತ್ಮಹತ್ಯ ಮಾಡಿಕೊಂಡಿದ್ದು ಸದರಿ ಮೃತಳ ಶವ ರಾಯನಗೌಡ ಸಣ್ಣಗೌಢಪ್ಪ ಹೊಸೂರ ಇವರ ಹೊಲದ ಮುಂದಿನ ಎಮ್ ಆರ್ ಬಿ ಸಿ ಕಾಲುವೆಯಲ್ಲಿ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 40/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ನವಗಲುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಗುನ್ನಾನಂ 141/2017 ಕಲಂ107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ  ಗುನ್ನಾನಂ 363/2017 ಕಲಂ107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯರಗುಪ್ಪಿ-ರೊಟ್ಟಿಗವಾಡ ರಸ್ತೆಯ ಬದಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ 1760 ಗಿಡಗಳನ್ನು ನೆಟ್ಟಿರುವುದಾಗಿ ವಲಯ ಅರಣ್ಯ ಅಧಿಕಾರಿಯವರಾದ A I ಬಾಗಲಕೋಟ ಮತ್ತು ಇತರರು ಮಿಲಾಪಿಯಾಗಿ ದಾಖಲೆಗಳನ್ನು ಸೃಷ್ಟಿಸಿ ಕೇವಲ 60 ಗಿಡಗಳನ್ನು ನೆಟ್ಟು ರೂ 2,23,049/-ಗಳನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 176/2017 ಕಲಂ 409.420.465.468.471.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, November 28, 2017

CRIME INCIDENTS 28-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-11-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹಳಿಯಾಳ ರಸ್ತೆ ಮಂಗೇಶ ಕೆರೆ ಸಮೀಪ ಆರೋಪಿತನಾದ ವಿರಪ್ಪಾ ಬಳ್ಳುಳ್ಳಿ ಇತನು ನಡೆಸುತ್ತಿದ್ದ ಗೂಡ್ಸ ಟ್ರಕ್ ನಂ ಕೆಎ25/4777 ನೇದ್ದರಲ್ಲಿ ಕಬ್ಬು ಲೋಡ ಮಾಡಿಕೊಂಡು ಕಲಘಟಗಿ ಕಡೆಯಿಂದ ಹಳಿಯಾಳ ಕಡೆಗೆ ಅತಿಜೋರು ಅಲಕ್ಷ್ಯತನದಿಂದ  ಮಾನವೀಯ ಪ್ರಾಣಕ್ಕೆ ಅಪಾಯಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ತಿರುವಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ಬಲವಾದ ಗಾಯಗೊಂಡು ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 361/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯಿತಿ ಕಟ್ಟಡದ ಹತ್ತೀರ ಪಿರ್ಯಾಧಿ ರವಿ ಮಡ್ಲಿ ಇವರ ಮೋಟಾರ್ ಸೈಕಲ್ ನಂ KA-31-Q-8280 Chassi No- MD2DDDZZZTWBO9924 Engine No DUMBTB71286   ಅ..ಕಿ..25,000/- ರೂ ಕಿಮ್ಮತ್ತಿನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 362/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮನಗುಂಡಿ ಗ್ರಾಮದ ಮೃತ ಬಸಪ್ಪ ತಂದೆ ದೊಡ್ಡ ಈರಪ್ಪ ಮನಗುಂಡಿ ವಯಾ 60 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಹೆಬ್ಬಳ್ಳಿ ಅಗಸರ ಓಣಿ  ಇತನು ಮಾನಸಿಕ ಅಸ್ವಸ್ಥನಿದ್ದು ಈ ಬಗ್ಗೆ ಧಾರವಾಡದ ಪಾಂಡುರಂಗಿ ಆಸ್ಪತ್ರೆ, ಜಂಬಗಿ ಆಸ್ಪತ್ರೆ, ಮತ್ತು ಎಸ್ ಡಿ ಎಮ್ ಸತ್ತೋರದಲ್ಲಿ ಉಪಚಾರವನ್ನು ಕೊಡಿಸಿದರು ಸಹಿತಾ,ಸದರಿಯವನಿಗೆ ಇದ್ದ ಮಾನಸಿಕತೆಯು ಕಡಿಮಿಯಾಗದೆ ಇದ್ದಾಗ ಅದನ್ನೆ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 24-11-2017 ರಂದು ಬೆಳಗಿನ 0900 ಘಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಯಾವೂದು ವಿಷಕಾರಕ ಎಣ್ಣೆಯನ್ನು ಸೇವಿಸಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರವು ಪಲೀಸದೆ ದಿನಾಂಕ 28-11-2017 ರಂದು ಬೆಳಗಿನ 09,35 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ,ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 61/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಸಿದ್ದಪ್ಪ ನಾವಳ್ಳಿ  ಇವರ ಮಗಳಾದ ಕಾವೇರಿ ವಯಾ-22 ವರ್ಷ ಇವಳು ಅಮ್ಮಿನಬಾವಿ ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಅಮ್ಮಿನಬಾವಿ ಗ್ರಾಮದ ಮನೆಯಿಂದ ಹೋದವಳು ಈವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ.ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ276/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

Monday, November 27, 2017

CRIME INCIDENTS 27-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 27-11-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಗೂರ ಗ್ರಾಮದ ಹಾಲಿನ ಡೈರಿ ಮುಂದೆ ಆರೋಪಿತನಾದ ಕಲ್ಲಪ್ಪ ಮುತ್ತೇಣ್ಣವರ  ಇನತು ವಿರಭದ್ರಪ್ಪ ಚಳ್ಳಮಟ್ಟಿ ಇವರ ಹೆಂಡತಿಗೆ ಪದೇ ಪದೇ ಕೆಟ್ಟ ದೃಷ್ಟಿಯಿಂದ ನೋಡುವುದು. ಅವಳಿಗೆ ಹಿಂಬಾಲಿಸುವುದು. ಅವಳಿಗೆ ಕೇಳುವ ಹಾಗೇ ಮೋಬೈಲನಲ್ಲಿ  ಅವಾಚ್ವ ಹಾಡುಗಳನ್ನು ಹಾಕುವುದು. ಮಾಡಿದ್ದಕ್ಕೆ ಊರ ಹಿರಿಯರ ಮುಖಾಂತರ ಬುದ್ದಿವಾದ ಹೇಳಿದ್ದಕ್ಕೆ  ಆರೋಪಿತನು ಸಿಟ್ಟಾಗಿ ಪಿರ್ಯಾದಿಗೆ ಕಬ್ಬಣದ  ಸ್ಪೀಕಲರ ಪೈಪನಿಂದ ಬೆನ್ನಿಗೆ  ಹೋಡೆದು.ಗಾಯಪಡಿಸಿದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 359/2017 ಕಲಂ 324.354.354(ಡಿ)509.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.