ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, November 1, 2017

CRIME INCIDENTS 01-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 01-11-2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದುಮ್ಮವಾಡ ಗ್ರಾಮದ ಬಸವ್ವ ಕೊಂ ಸಣ್ಣಬಸಪ್ಪ ಸತ್ತೂರ  ಇವರ ಮನೆಯಿಂದ ಅವರ ಮಗಳಾದ  ಗಿರಜಾ 19 ವರ್ಷ ಸಾ; ದುಮ್ಮವಾಡ ಇವರು ಮನೆಯಲಿ  ಕಾಲೇಜಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನಗೆ ಬಂದಿರುವುದಿಲ್ಲ ಎಲ್ಲ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 340/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ:19-10-2017 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ರಾಮನಾಳ ಗ್ರಾಮದ ಫಿರ್ಯಾದಿ ಚನ್ನಬಸಪ್ಪ ತಿಮ್ಮಾಪೂರ ಇವರ ಮನೆಯಿಂದ ಫಿ:ದಿಯ ಹೆಂಡತಿ ಕರೆವ್ವ ಕೋಂ. ಚನ್ನಬಸಪ್ಪ ತಿಮ್ಮಾಪೂರ, 35 ವರ್ಷ ಸಾ: ರಾಮನಾಳ ಇವಳು ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುವುದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ.ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 341/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.