ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, November 2, 2017

CRIME INCIDENTS 02-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 02-11-2017 ರಂದು ವರದಿಯಾದ ಪ್ರಕರಣಗಳು

1.ಅಣ್ಣಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಾಸ್ವಿಹಳ್ಳಿ ಗ್ರಾಮದ  ಆರೋಪಿತರಾದ ಚಾಮಸಾಬ ಸೈದಾಪುರ ಹಾಗೂ ಇನ್ನೂ 10 ಜನರು  ಸಾಸ್ವಿಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮುಂದಿನ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಸ್ಪಿ ಎಲೆಗಳ ಸಾಹಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ್ ಎಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 2070-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 140/2017 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ.ರಸ್ತೆಯ ಮೇಲೆ ಕೋಟೂರ ಕ್ರಾಸ ಕೆರಿ ಮುಲ್ಲಾ ದಾಬಾ ಹತ್ತಿರ ಲಗ್ಝರಿ ಬಸ್ಸ ಚಾಲಕನು ತನ್ನ ಬಸ್ಸನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಕೋಟೂರ ಕ್ರಾಸ ಕೆರಿ ಮುಲ್ಲಾ ದಾಬಾ ಹತ್ತಿರ ರಸ್ತೆ ಬದಿಗೆ ತನ್ನ ಮುಂದೆ ಹೊರಟ ಮೋಟಾರ ಸೈಕಲ ನಂಬರಃ ಕೆಎಃ28/ಇಕ್ಯೂ/2200 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ ಸೈಕಲ ಹಿಂದೆ ಕುಳಿತ ಪವನ ಇವರಿಗೆ ಸಾದಾ ಗಾಯಪಡಿಸಿದ್ದಲ್ಲದೆ ಅದರ ಸವಾರನಿಗೆ ಸ್ಥಳದಲ್ಲಿಯೇ ಮರಣಪಡಿಸಿ ಠಾಣೆಗೆ ಸುದ್ದಿ ತಿಳಿಸದೆ ಹೋಗಿದ್ದು ಇರುತ್ತೆದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 171/2017 ಕಲಂ 279.337.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮುಂಜಾಗೃತ ಕ್ರಮವಾಗಿ ಗುನ್ನಾನಂ 256/2017.ಹಾಗೂ 257/2017 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.