ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, November 4, 2017

CRIME INCIDENTS 04-11-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 04-11-2017 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಹಶೀಲ್ದಾರ ಕಲಘಟಗಿ ರವರಿಗೆ ತಾನು ಹಿಂದೂ ಭೋವಿ ಪರಿಶಿಷ್ಟ ಜಾತಿಗೆ ಸೇರಿದವನು ಅಂತಾ ಸುಳ್ಳು ಮಾಹಿತಿ ನೀಡಿ ಸುಳ್ಳು ಘೋಷಣೆಗಳನ್ನು ಮಾಡಿ ತಹಶೀಲ್ದಾರ ಕಲಘಟಗಿರವರಿಂದ ಹಿಂದೂ ಭೋವಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದುಕೊಂಡು ಅದರ ಆಧಾರದ ಮೇಲೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕ ಅಂತಾ ನೇಮಖಾತಿ  ಹೊಂದಿದ್ದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ, ಧಾರವಾಡ ರವರ ಆದೇಶದಂತೆ ನಾ.ಹ.ಜಾ.ನಿ ಬಾಗಲಕೋಟ ರವರು ಸದರಿಯವನ  ಜಾತಿ ವಿಚಾರಣೆ ಮಾಡಿ ವರದಿ ಸಲ್ಲಿಸಿದ್ದರ ಮೇರೆಗೆ ಸದರಿಯವನು ಹಿಂದೂ ಭೋವಿ ಪರಿಶಿಷ್ಟ ಜಾತಿಗೆ ಸೇರದೇ ಹಿಂದೂ ಭೋಯಿ/ಬೋವಿ ಪ್ರ.ವರ್ಗ-1 ರ ಜಾತಿಗೆ ಸೇರಿದವನು ಅಂತಾ ದೃಢಪಟ್ಟಿದ್ದು ಸದರಿಯವನು ಸರಕಾರಕ್ಕೆ ಹಾಗೂ ಹಿಂದೂ ಭೋವಿ ಪರಿಶಿಷ್ಟ ಜಾತಿಯ ಜನರಿಗೆ ನ್ಯಾಯಯುತವಾಗಿ ದೊರಕಬೇಕಿದ್ದ ಸೌಲಭ್ಯವನ್ನು ವಂಚಿಸಿ ಮೋಸ ಮಾಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 343/2017 ಕಲಂ IPC 1860 (U/s-196,198,420); SC AND THE ST  (PREVENTION OF ATTROCITIES) ACT, 1989 (U/s-3(1)(q)); Karnataka SC/ST & Other B .C. [ Reservation Of Appointment ACT]  -1990 (U/s-5(A))
 ಅಪರಾಧ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಛಬ್ಬಿ ಗ್ರಾಮದ  ಹೊಲದ ಹತ್ತಿರ ವಾಸನೆ ಬರುತ್ತಿರುವದನ್ನು ನೋಡಿ ಅಲ್ಲಿಗೆ ಹೋಗಿ ನೋಡಿದಾಗ ಅನಾಥ ಗಂಡಸಿನ ಶವ ಬಿದ್ದಿದ್ದು ಶವ ಪೂರ್ತಿ ಕೊಳೆತು ನಾರುತ್ತಿದ್ದು ಹುಳಗಳು ಮೈಮೇಲೆ ಆಡುತ್ತಿದ್ದವು ಪಿರ್ಯಾದಿದಾರನು ಗಾಬರಿಯಾಗಿ ಛಬ್ಬಿ ಗ್ರಾಮದ 1) ರಜಿಯುದ್ದೀನ ಮುಲ್ಲಾ ಹಾಗೂ ವಗೈರೆ  ಜನರನ್ನು ಕರೆದು ತೋರಿಸಿದಾಗ  ಶವದ ಮುಖ ಗುರ್ತು ಸಿಗಲಾರದೆ ಸದರಿ ಶವದ ಮುಖ ಗುರ್ತು ಸಿಗಲಾರದ್ದು ಬಾತು ಕೊಳೆತು ಕಪ್ಪಾಗಿದ್ದು ಸದರಿಯವನು ಸುಮಾರು 40 ರಿಂದ 45 ವರ್ಷ ದವನು ಮೈ ಮೇಲೆ ಟ್ರಾಕ್,ಪ್ಯಾಂಟ್ , ಟಿ ಶರ್ಟ ತೊಟ್ಟಿದ್ದು ಸದರಿಯವನು  ನಮ್ಮೂರಿನವನಲ್ಲ ಸದರಿಯವನಿಗೆ ನೋಡಿದರೆ ಯಾವದೋ ರೋಗದಿಂದ ಬಳಲಿ ಸತ್ತಂತ್ತೆ ಕಾನುತ್ತದೆ ಸದರಿಯವನು ಸತ್ತು ಸುಮಾರು 5 ರಿಂದ 6 ದಿವಸ ಆಗಿರಬಹುದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವದೆ ಸಂಶೆ ಇರುವದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 44/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.