ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, November 5, 2017

CRIME INCIDENTS 05-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 05-11-2017 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಕಂಬಾರ ಗಣೆವೆ ಗ್ರಾಮದ ಹತ್ತಿರ ಶ್ರೀ ಮೌಲಾ ಅಲಿ ಹುಸೇನಸಾಬ ಡೋನಸಾಲ  ಇಬ್ಬರೂ ಕೂಡಿಕೊಂಡು ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಹನ ಸಿ ಡಿ ಡೀಲಕ್ಸ್ ನಂ,. ಕೆಎ - 25 / ಎಕ್ಸ್ - 9871 ನೇದ್ದರ ಮೇಲೆ ನನ್ನ ತಮ್ಮನಿಗೆ ಹಿಂಬದಿಗೆ ಕೂಡಿಸಿಕೊಂಡು ನಮ್ಮ ಊರಾದ ಕಂಬಾರಗಣವಿಗೆ ಬರುತ್ತಿರುವಾಗ ಇನ್ನೂ ನಮ್ಮ ಊರ 1 ಕಿ. ಮೀ. ದೂರ ಇರುವಾಗ ಶ್ರೀ ಅಲ್ಲಾಬಕ್ಷ ಅಳ್ನಾವರ ಇವರ ಹೊಲದ ಹತ್ತಿರ ನಮ್ಮ ಎದುರಿನಿಂದ ಬರುತ್ತಿದ್ದ ಕಾರ ನಂ. ಕೆಎ - 37 / ಎನ್ - 0924 ನೇದ್ದರ ಚಾಲಕ ಅತೀ ವೇಗ ಹಾಗೂ ನಿಶಕಾಳಜಿತನದಿಂದ ಬಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಹಿಂದೆ ಕೂತಿದ್ದ ನಮ್ಮ ತಮ್ಮನಾದ ಮೌಲಾ ಅಲಿ ಡೋನಸಾಲ ಇತನು ಕಾರ ಡಿಕ್ಕಿ ಮಾಡಿದ ರಭಸಕ್ಕೆ ಪುಟಿದು ಕಾರಿನ ಮುಂಭಾಗದ ಗಿಲಾಸಿನ ಮೇಲೆ ಬಿದ್ದು ಅವನಿಗೆ ಮುಖಕ್ಕೆ, ತಲೆಗೆ, ಸೊಂಟಕ್ಕೆ ತೀವ್ರವಾಗಿ ಪೆಟ್ಟು ಆಗಿದ್ದು ಮತ್ತು ನನಗೆ ಕೈ ಕಾಲುಗಳಿಗೆ ಒಳಪೆಟ್ಟು ಆಗಿರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/2017 ಕಲಂ 279.337.338. ನೇದ್ದರಲ್ಲಿ ಪ್ರರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಹಳಿಯಾಳ ಬ್ರೀಜ್ಡ್ ಹತ್ತಿರ ಯಾವುದೋ  ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆ ಸೈಡಿನಲ್ಲಿದ್ದ  ಸುಮಾರು 40-45 ವಯಸ್ಸಿನ  ಅನಾಮದೇಯ ಗಂಡಸ್ಸು ವ್ಯಕ್ತಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತ ಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 261/2017 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸವಾಳ ರೋಡ ಹತ್ತಿರ ವಿರುವ ವಾಟರ ಟ್ಯಾಂಕ ಹತ್ತಿರ  ಅಪರಿಚಿತ ಮೃತ ಗಂಡಸು ಅಂದಾಜು 55 ರಿಂದ 60 ವರ್ಷದವನು ಯಾವುದೋ ವಿಷಯಕ್ಕಾಗಿ ಜೀವನದಲ್ಲಿ ಜಿಗುಪ್ಸೆ ತನ್ನಷ್ಟಕ್ಕೆ ತಾನೇ ನುವಾನೊ ವಿಷವನ್ನು ಕುಡಿದು ಮೃತಪಟ್ಟಿದ್ದುಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 53/2017 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.