ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, November 6, 2017

CRIME INCIDENTS 06-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 06-11-2017 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಗೇರಿ ಗ್ರಾಮದ ಹತ್ತಿರ ನಾಗೇಶ ತಂದೆ ಮುರುಗೇಶ ಭದ್ರಶೆಟ್ಟಿ ಸಾ: ದಾಂಡೇಲಿ ಇವನು ತನ್ನಕಾರ ನಂ ಕೆಎ-65/ಎಂ-0751 ನೇದ್ದನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಮತ್ತು ಸರಾಯಿ ಕುಡಿದು ಪಾನಮತ್ತನಾಗಿ ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ನಡೆಸಿಕೊಂಡು ಹೋಗಿ ತನ್ನ ಮುಂದೆ ಹೊರಟಿದ್ದ ಪಿರ್ಯಾದಿ ವೀರೇಶ ಗುರುಲಿಂಗಯ್ಯ ಹಾಲಾಪೂರ ಸಾ ಃ ಹಾಲಾಪೂರ ತಾ ಃ ಮಾನ್ವಿ ಇವರ ಬಾಬತ್ ಕಾರ ನಂ ಕೆಎ-28/ಎಂ-4342 ನೇದ್ದರ ಹಿಂಬದಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನವಾರ ಪೊಲಿಸ್ ಠಾಣೆಯಲ್ಲಿ ಗುನ್ನಾನಂ 133/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸ  ತೇಗೂರ ಗ್ರಾಮದ ರೂಪಾ ಸಾಲಿಮಠ ಇವರ ಮೇಲೆ ಸಂಶಯ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳಕೊಟ್ಟು ಹಲ್ಕಟ ಬೈದಾಡಿ ಕೈಯಿಂದ ಮತ್ತು ಕಲ್ಲಿನಿಂದಾ ಹೊಡೆದು ಗಾಯ ಪಡಿಸಿ ಜೀವಧ ಬೇದರಿಕೆಯನ್ನು ಹಾಕಿದ್ದು ಅಲ್ಲದೇ  ಅವರ ಅಣ್ಣನಿಗೂ ಸಹ ಹಲ್ಕಟ ಬೈದಾಡಿ ಹೊಡಿಬಡಿ ಮಾಡಿದ್ದು ಇರುತ್ತದೆ ಈ  ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 172/2017 ಕಲಂ 506.34.323.324.504.498 ಎ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಚನ್ನಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿ ಮಾರುತಿ ಫಕ್ಕಿರಪ್ಪ ಬೆಟದೂರ ಸಾ. ಚನ್ನಾಪೂರ ಇವನು ಕೈಯಲ್ಲಿ ಕಲ್ಲು ಹಿಡಿದುಕೊಂಡು, ರಸ್ತೆಯಲ್ಲಿ ಬರ ಹೋಗುವ ಜನರನ್ನು ಅವಾಚ್ಯ ಬೈದಾಡಿ, ತೊಂದರೆ ಕೊಡುವುದಲ್ಲದೇ, ಗ್ರಾಮದಲ್ಲಿ ಶಾಂತತಾ ಭಂಗವನ್ನುಂಟು ಮಾಡಿದ್ದು, ಸದರಿಯವನ ಮೇಲೆ ಗುನ್ನಾನಂ 255/2017ಕಲಂ: 110(ಇ)(ಜಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.