ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, November 8, 2017

CRIME INCIDENTS 08-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 08-11-2017 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಬ್ರಾಹಿಪುರ ಗ್ರಾಮದ ಆರೋಪಿತನಾದ ಬಸವರಾಜ ಮಲ್ಲಪ್ಪ ಲಿಂಗದಾಳ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಪಾಸ್ ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ ಸರಾಯಿ ಪಾಕೀಟಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾಗ 29 ಓಲ್ಡ ಟಾವರೆನ್ ವಿಸ್ಕಿ ತುಂಬಿದ 180 ML ಟೆಟ್ರಾ ಪಾಕೇಟಗಳು ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2017 ಕಲಂ ಅಬಕಾರಿ ಕಾಯ್ದೆ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದ, ಕ್ಯಾಲವಿನ್ ಕೇನ್ ವೇರ ಹೌಸ ಹತ್ತಿರ, ರಸ್ತೆ ಮೇಲೆ, ಆರೋಪಿತನಾದ ವೆಂಕಟೇಶ ಇತನು ಲಾರಿ ನಂ. ಹೆಚ್.ಆರ್-55-ಎಕ್ಸ್-5888 ನೇದ್ದರ ಚಾಲಕನು ತನ್ನ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ತಾರಿಹಾಳ ಇಂಡಸ್ಟ್ರೀಯಲ್ ಏರಿಯಾ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾರಿಹಾಳ ಇಂಡಸ್ಟ್ರೀಯಲ್ ಏರಿಯಾದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಮೋಟರ ಸೈಕಲ್ ನಂ. ಕೆಎ-25-ಇ.ವೈ-5222 ನೇದ್ದಕ್ಕೆ ಡಿಕ್ಕಿ ಮಾಡಿ, ಮೋಟರ ಸೈಕಲ್ ಜಖಂಗೊಳಿಸಿ, ಪಿರ್ಯಾದಿಗೆ ಸಾದಾ ಒಳನೋವು ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 257/2017 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.