ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, November 9, 2017

CRIME INCIDENTS 09-11-2017

ಧಾರವಾಡ ಜಿಲ್ಲೆಯಲ್ಲಿ ದಿನಾಂಕ 09-11-2017 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 09-11-2017 ರಂದು ಮುಂಜಾನೆ 9-10 ಗಂಟೆಗೆ, ತಿರುಮಲಕೊಪ್ಪ ಕ್ರಾಸ್ ಹತ್ತಿರ, ವೆಲ್ಡಿಂಗ್ ಗ್ಯಾರೇಜ್ ಮುಂದೆ, ಪೂನಾ ಬೆಂಗಳೂರು ರಸ್ತೆ ಮೇಲೆ ಆರೋಪಿ ಕಾರ ನಂ. ಕೆಎ-04-ಎಂ.ಜೆ-4874 ನೇದ್ದರ ಚಾಲಕ ತಿಮ್ಮಪ್ಪ ಹನಮಂತಪ್ಪ ಜರಳಿ ಇವನು ತನ್ನ ಕಾರನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ತಿರುಮಲಕೊಪ್ಪ ಕ್ರಾಸ್ ಕಡೆಯಿಂದ ವರೂರ ಕಡೆಗೆ ಹೊರಟಿದ್ದ, ಪಿರ್ಯಾದಿಯ ಅಳಿಯ ಯಲ್ಲಪ್ಪ ಅರ್ಜುನಪ್ಪ ಜಾನಕಾಯಿ ಸಾ. ಅಗಡಿ ಇವನು ಚಾಲನೆ ಮಾಡಿಕೊಂಡು ಹೊರಟಿದ್ದ ಮೋಟರ ಸೈಕಲ್ ನಂ. ಕೆಎ-25-ಇ.ಎ-9955 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ, ಮೋಟರ ಸೈಕಲ್ ಸವಾರ ಯಲ್ಲಪ್ಪ ಅರ್ಜುನಪ್ಪ ಜಾನಕಾಯಿ ಇವನಿಗೆ ತೀವ್ರ ಗಾಯಪಡಿಸಿ, ತಾನೂ ಸಾದಾ ಗಾಯ ಹೊಂದಿದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 259/2017 ಕಲಂ 279.337,338 IPC ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.