ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, November 14, 2017

CRIME INCIDENTS 14-11-2017
ಧಾರವಾಡ ಜಿಲ್ಲೆಯಲ್ಲಿ ದಿನಾಂಕ 14-11-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿಂಡಸಗೇರಿ  ಗ್ರಾಮದ ಚನ್ನಬಸಪ್ಪ ದಪ್ಪಲಣ್ಣವರ ಇವರ ಜಮೀನ ರಿ ಸ ನಂ 3 ಬ ನೇದ್ದರಲ್ಲಿ  ಆರೋಪಿತರಾದ 1.ಅಶೋಕ ಮುದಕ್ಕಣ್ಣವರ 2.ಮಂಜುನಾಥ ಮುದಕ್ಕಣ್ಣವರ ಇವರು ಪಿರ್ಯಾದಿ ನಮ್ಮ ಜಮೀನನ್ನು ಯಾರಿಗೇ ಹೇಳಿ ಕೇಳಿ ಬಿತ್ತನೆ ಮಾಡಿದ್ದಿರಿ ಅಂತಾ ಕೇಳಿದಕ್ಕೆ ಅವಾಚ್ವವಾಗಿ ಬೈದಾಡಿದ್ದಲ್ಲದೇ ಬಡಿಗೆಯಿಂದ  ಮೈ ಕೈ ಗೆ ಕಾಲಿಗೆ ಬೆನ್ನಿಗೆ ಹೊಡಿದ್ದಲ್ಲದೇ ಬಿಡಿಸಲು ಬಂದ ಪಿರ್ಯಾದಿ ಹೆಂಡತಿ ಶಾಂತವ್ವ ಇವರಿಗೆ ಬಡಿಗೆಯಿಂದ ಮೈ ಕೈಗೆ ಹೊಡೆದಿದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 346/2017 ಕಲಂ 324.504.506.34.ಐಪಿಸಿ ನೇದ್ದರಲ್ಲಿ ಪ್ರಕರಣವನ್ನ ದಾಖಲಿಸಿದ್ದು ಇರುತ್ತದೆ.