ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, November 3, 2017

CRIME INCIDENTS 03-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 03-11-2017 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಗೋವಾ ರಸ್ತೆ ಪ್ರಭುನಗರ ಹೊನ್ನಾಪೂರ ಗ್ರಾಮದ ಕರೆಮ್ಮದೇವರ ಗುಡಿ ಹತ್ತಿರ ಬಸ್ಸ  ನಂ AR 02 6356 ನೇದ್ದರ ಚಾಲಕ ಇಮ್ರಾನಬಾಷಾ ತಂದೆ ಅಹ್ಮದಬಾಷಾ ಸಾಃಬೆಂಗಳೂರ ಇವನು ಬಸ್ಸನ್ನು ಧಾರವಾಡ ಕಡೆಯಿಂದ ಗೋವಾದಕಡೆಗೆ   ಅತಿಜೋರಿನಿಂದ ನಿಷ್ಕಾಳಜೀತನದಿಂದ ನಡೆಸಿಕೊಂಡು ಬಂದು ಬಸ್ಸಿನ ವೇಗ ನಿಯಂತ್ರಣ ಮಾಡಲಾಗದೇ ಬಸ್ಸನ್ನು ಪಲ್ಟಿಮಾಡಿ ಕೆಡವಿ ಅಪಘಾತ ಪಡಿಸಿ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಾದಾ ವ ಭಾರಿ ಗಾಯ  ಪಡಿಸಿದ್ದಲ್ಲದೆ ತ್ರಿಲೋಕ ತಂದೆ ಯುವರಾಜ ವಯಾಃ23 ವರ್ಷ ಉದ್ಯೋಗಃಜಿಮ್ಮ ಟ್ರೈನರ ಸಾಃಚಿಕ್ಕಬಾನಸವಾಡಿ ಬೆಂಗಳೂರ ಇವನಿಗೆ ಮರಣ  ಪಡಿಸಿದಲ್ಲದೆ ತನಗೂ ಸಹ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ  ಗುನ್ನಾನಂ 259/2017 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮಾರಡಗಿ ಗ್ರಾಮದ  ಬಸಪ್ಪ ಲಕ್ಕಪುರ ಇವರ ಮನೆಯಿಂದ  ಅರೋಪಿತನಾದ ಚಂದ್ರಶೇಖರ  ಇತನು ಯಾವುದೋ ಉದ್ದೇಶಕ್ಕೆ ಬಸಪ್ಪ ಲಕ್ಕಪ್ಪನವರ ಇವರ  ಮಗಳನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 260/2017 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.