ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, November 28, 2017

CRIME INCIDENTS 28-11-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28-11-2017 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹಳಿಯಾಳ ರಸ್ತೆ ಮಂಗೇಶ ಕೆರೆ ಸಮೀಪ ಆರೋಪಿತನಾದ ವಿರಪ್ಪಾ ಬಳ್ಳುಳ್ಳಿ ಇತನು ನಡೆಸುತ್ತಿದ್ದ ಗೂಡ್ಸ ಟ್ರಕ್ ನಂ ಕೆಎ25/4777 ನೇದ್ದರಲ್ಲಿ ಕಬ್ಬು ಲೋಡ ಮಾಡಿಕೊಂಡು ಕಲಘಟಗಿ ಕಡೆಯಿಂದ ಹಳಿಯಾಳ ಕಡೆಗೆ ಅತಿಜೋರು ಅಲಕ್ಷ್ಯತನದಿಂದ  ಮಾನವೀಯ ಪ್ರಾಣಕ್ಕೆ ಅಪಾಯಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ತಿರುವಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ಬಲವಾದ ಗಾಯಗೊಂಡು ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 361/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯಿತಿ ಕಟ್ಟಡದ ಹತ್ತೀರ ಪಿರ್ಯಾಧಿ ರವಿ ಮಡ್ಲಿ ಇವರ ಮೋಟಾರ್ ಸೈಕಲ್ ನಂ KA-31-Q-8280 Chassi No- MD2DDDZZZTWBO9924 Engine No DUMBTB71286   ಅ..ಕಿ..25,000/- ರೂ ಕಿಮ್ಮತ್ತಿನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 362/2017 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮನಗುಂಡಿ ಗ್ರಾಮದ ಮೃತ ಬಸಪ್ಪ ತಂದೆ ದೊಡ್ಡ ಈರಪ್ಪ ಮನಗುಂಡಿ ವಯಾ 60 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಹೆಬ್ಬಳ್ಳಿ ಅಗಸರ ಓಣಿ  ಇತನು ಮಾನಸಿಕ ಅಸ್ವಸ್ಥನಿದ್ದು ಈ ಬಗ್ಗೆ ಧಾರವಾಡದ ಪಾಂಡುರಂಗಿ ಆಸ್ಪತ್ರೆ, ಜಂಬಗಿ ಆಸ್ಪತ್ರೆ, ಮತ್ತು ಎಸ್ ಡಿ ಎಮ್ ಸತ್ತೋರದಲ್ಲಿ ಉಪಚಾರವನ್ನು ಕೊಡಿಸಿದರು ಸಹಿತಾ,ಸದರಿಯವನಿಗೆ ಇದ್ದ ಮಾನಸಿಕತೆಯು ಕಡಿಮಿಯಾಗದೆ ಇದ್ದಾಗ ಅದನ್ನೆ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 24-11-2017 ರಂದು ಬೆಳಗಿನ 0900 ಘಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ಯಾವೂದು ವಿಷಕಾರಕ ಎಣ್ಣೆಯನ್ನು ಸೇವಿಸಿ ಉಪಚಾರ ಕುರಿತು ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರವು ಪಲೀಸದೆ ದಿನಾಂಕ 28-11-2017 ರಂದು ಬೆಳಗಿನ 09,35 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ,ಸದರಿಯವನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 61/2017 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಸಿದ್ದಪ್ಪ ನಾವಳ್ಳಿ  ಇವರ ಮಗಳಾದ ಕಾವೇರಿ ವಯಾ-22 ವರ್ಷ ಇವಳು ಅಮ್ಮಿನಬಾವಿ ಗ್ರಾಮದ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಅಮ್ಮಿನಬಾವಿ ಗ್ರಾಮದ ಮನೆಯಿಂದ ಹೋದವಳು ಈವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ.ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ276/2017 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ