ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, December 1, 2017

CRIME INCIDENTS 01-12-2017


ದಿನಾಂಕ.01-12-2017 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ರಾಜು ಸಿದ್ದಪ್ಪ ಅಬಾಚಿ ಸಾ: ಹಿರೇಕುಂಬಿ. ಸವದತ್ತಿ ಇತನು ದಿನಾಂಕ 30-11-2017 ರಂದು ಸಾಯಂಕಾಲ 06-30 ಗಂಟೆ ಸುಮಾರಿಗೆ ತಮ್ಮ ದೊಡ್ಡಮ್ಮನ ಊರಾದ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮಕ್ಕೆ ಹೋಗುತ್ತೆನೆ ಅಂತಾ ಮೋಟರ್ ಸೈಕಲ್ ನಂ ಕೆಎ-25/ಇಇ-4447 ನೇದ್ದನ್ನು ತೆಗೆದುಕೊಂಡು ಅತಿ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಬ್ಯಾಲ್ಯಾಳ ಗ್ರಾಮ ಹದ್ದಿಯ ಫಕೀರಸಾಬ ನದಾಫ್ ಇವರ ಹೊಲದ ಮುಂದಿನ ರಸ್ತೆಯ ಮೇಲೆ ಮೋಟರ್ ಸೈಕಲ್ ಸ್ಕಿಡ್ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.  

2) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 01-12-2017 ರಂದು 13-15 ಗಂಟೆಗೆ ಕೊಟಗೊಂಡಹುಣಸಿ ಗ್ರಾಮ ಹದ್ದಿಯ ಘೋಡಾವತ ಪ್ಯಾಕ್ಟರಿ ಎದುರಿಗೆ ಇದರಲ್ಲಿ ನಮೂದ ಮಾಡಿದ ಆರೋಪಿ ದ್ಯಾಮಣ್ಣ ಮಹಾದೇವಪ್ಪ ಅಂಚಿಕಟ್ಟಿ ಸಾ!! ಕೊಡಗೊಂಡಹುಣಸಿ ಇತನು ತನ್ನ ಪಾಯ್ದೆಗೋಸ್ಕರ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಓಸಿ ಎಂಬ ಜೂಜಾಟವನ್ನು ಆಡಿಸುತ್ತಿದ್ದಾಗ ಸದರಿಯವನ ತಾಬಾದಲ್ಲಿಂದ ಒಟ್ಟು ರೋಖ ರಕ್ಕಂ 720, ಒಂದು ಓಸಿ ಅಂಕಿ ಸಂಖ್ಯೆ ಬರೆದ ಹಾಳೆ, ಒಂದು ಬಾಲ ಪೆನ್ ಸಹಿತ ಸಿಕ್ಕಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ  ದಿನಾಂಕ: 29-11-2017 ರಂದು 15-00 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆ ಮೇಲೆ ವರೂರ ವ್ಹಿ.ಆರ್.ಎಲ್ ಆಫೀಸ ಎದುರಿಗೆ ಇದರಲ್ಲಿಯ ಆರೋಪಿತನಾದ ರಜತ ಮಂಜುನಾಥ ಮನಿಮಠ ಸಾ!! ಇಂದ್ರಪ್ರಸ್ಥನಗರ ಹಳೆಹುಬ್ಬಳ್ಳಿ ಇತನು ಮೋಟಾರ್ ಸೈಕಲ್ ನಂಬರ ಕೆಎ-25/ಇಪಿ-5424 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ಡಾಗಿ ಕೆಡವಿ ಅಪಗಾತಪಡಿಸಿ ಹಣೆಗೆ, ಮೂಗಿನ ಹತ್ತಿರ ಭಾರಿ ರಕ್ತಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:01-12-2017 ರಂದು ಮದ್ಯಾಹ್ನ 12-30 ಗಂಟೆಗೆ  ಕಲಘಟಗಿ ಧಾರವಾಡ ಹಳೆ ರಸ್ತೆ ಹೂಲಿಕಟ್ಟಿ ಗ್ರಾಮದ ಹದ್ದಿ ಚನಬಸಪ್ಪ ಗುಡಿನವರ ಇವರ ಜಮೀನ ಸಮೀಪ ರಸ್ತೆ ಮೇಲೆ ನಮುದ ಮಾಡಿದ ಕೆಎಸ್ ಆರ್ ಟಿಸಿ ಬಸ್ ನಂ KSRTC BUS NO KA25/F 2653 ನೇದ್ದರ ಚಾಲಕನು  ತುಮರಿಕೊಪ್ಪ ಕಡೆಯಿಂದ ಕಲಘಟಗಿ ಕಡೆಗೆ ಅತಿ ಜೋರು ಅವಿಚಾರ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ಬೇಗೂರ ಕಡೆಗೆ ಹೊರಟ ಮೊಟಾರ ಸೈಕಲ್ಲ ನಂ KA25/EY 3029 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅದರ ಸವಾರನಿಗೆ ಬಲವಾದ ಗಾಯಪಡಿಸಿದ್ದಲ್ಲದೇ ಹಿಂದಬದಿಯಲ್ಲಿ ಕುಳಿತಿದ್ದ ಗುರುನಾಥ ಬಸಪ್ಪ ಸಿಂಪಿಗೇರ ವಯಾ 22 ವರ್ಷ ಸಾ: ಬೇಗೂರ ಈತನಿಗೆ ಬಲವಾದ ಗಾಯಪಡಿಸಿ ಉಪಚಾರಕ್ಕೆ ಸಾಗಿಸುವಾಗ ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಇರುತ್ತದೆ.