ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, December 2, 2017

CRIME INCIDENTS 02-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 02/12/2017 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ 02-12-2017 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಅಳ್ನಾವರದಲ್ಲಿ ಆಪಾದಿತನಾದ ಮಹ್ಮದಇಝಾರಖಾನ ತಂದೆ ರಸೀದಖಾನ ಸಾ|| ಬಾಂಗರಮು ತಾ||ಜಿ|| ಉನ್ನಾವ ುತ್ತರ ಪ್ರದೇಶ ಹಾಲಿವಸ್ತಿ ಕಡಬಗಟ್ಟಿ ಕ್ರಾಸ ತಾ||ಜಿ|| ದಾರವಾಡ ಇವನು ತನ್ನ ಮೋಬೈಲ ನಂಬರ 7411009639 ನೇದ್ದರಲ್ಲಿಯ ವ್ಯಾಟ್ಸಪ್ ಡಿ.ಪಿಯಲ್ಲಿಂದ ಮಕ್ಕಾ ಮಸೀದಿಯ ಮೇಲೆ ಪಾಕಿಸ್ತಾನ ದ್ವಜ ಹಾಗೂ ಟರ್ಕಿ ದೇಶದ ದ್ವಜ ಹಾಗೂ ಸೌದಿ ಅರೇಬಿಯಾ ದೇಶದ ದ್ವಜಗಳ ಬಾವಚಿತ್ರಗಳನ್ನು ಅಳವಡಿಸಿ ಪ್ರದರ್ಶನ ಮಾಡಿ ಹಿಂದೂ ಧರ್ಮಿಯರ ಮತೀಯ ಬಾವನೆಗೆ ನೋವು ಉಂಟು ಮಾಡಿದ ಅಪರಾಧ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 137/2017 ಕಲಂ 295, 505(2) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಆರೋಪಿತ ಅನಂ 1 ಗುರಪ್ಪ ಕಲ್ಲೂರ, 2 ಉಮೇಶ ಕೌಜಗೇರಿ ನೇದವರು ತಮ್ಮ ಹೆಸರಿನಲ್ಲಿ ಇದ್ದ ರಿ.ಸ ನಂಬರ್ 119ಅ/5 ಕ್ಷೇತ್ರ  20 ಗುಂಟೆ ಜಮೀನನ್ನು ಪಿರ್ಯಾದಿ ಗಂಗಾ ಕರೆಟ್ಟನವರ ಇವಳ ಗಂಡನಿಗೆ ತಮಗೆ ಇರುವ ಹಣದ ಅಡಚಣೆ ಸಲುವಾಗಿ ಮಾರಾಟ ಮಾಡಿದ್ದು ಖರೀದಿ ಸಂಚಗಾರ ಪತ್ರವನ್ನು ನೊಂದ ಮಾಡಿ ಉಳಿದ ಹಣವನ್ನು ಕೊಡದೇ ಇರುವುದರಿಂದ ಪಿರ್ಯಾದಿ ಗಂಡ ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ದಾವಾ ಮಾಡಿದ್ದು ಇರುತ್ತದೆ. ಹಾಗು ಈ ಬಗ್ಗೆ ಆರೋಪಿತರು ಪಿರ್ಯಾದಿ ಗಂಡನನ್ನು ರಾಜಿ ಮಾಡುವ ಕುರಿತು ದಿನಾಂಕ 30-11-2017 ರಂದು ರಾತ್ರಿ 22-50 ಘಂಟೆಗೆ ಅಣ್ಣಿಗೇರಿಯ ಸಬ್ ರಜಿಸ್ಟ್ರಾರ ಆಪೀಸ್ ಹತ್ತಿರ ಕರೆಯಿಸಿಕೊಂಡು ತಮ್ಮ ಮೋಟರ್ ಸೈಕಲ್ನಿಂದ ಪಿರ್ಯಾದಿಯ ಹಿಡಿದು ನಿಲ್ಲಿಸಿ ತಾವು ಹಣ ನೀಡುವ ಬಗ್ಗೆ ಹಾಗು ಪಿರ್ಯಾದಿ ಗಂಡನು ಮಾನ್ಯ ನ್ಯಾಯಾಲಯದಲ್ಲಿ ದಾವಾ ಮಾಡಿದ್ದರ ಉದ್ದೇಶದಿಂದ ಪಿರ್ಯಾದಿ ಗಂಡನಿಗೆ ಅವಾಚ್ಯ ಬೈದಾಡಿ ಹೊಡಿ ಬಡಿ ಮಾಡಿದ್ದು ಅಲ್ಲದೇ ಉಳಿದ ಆರೋಪಿತರು ಗುಂಪು ಕೂಡಿಕೊಂಡು ಬಂದು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸೈಕಲ್ ಚೈನಿನಿಂದ ಕುತ್ತಿಗೆಗೆ ಹಾಕಿ ಜಗ್ಗಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಲ್ಲದೇ ಕೈಯಿಂದ ಬಡಿಗೆಯಿಂದ ಹೊಡೆದು ಕಾಲಿನಿಂದ ಒದ್ದು ದುಖಾಃಪತ್ ಪಡಿಸಿದ್ದು ಬಿಡಿಸಲು ಬಂದ ಪಿರ್ಯಾದಿಯ ಸೀರೆಯನ್ನು ಎಳೆದು ಬೈದಾಡಿ ಮಾನಭಂಗ ಪಡಿಸಿ ಬಿಡಿಸಲು ಹೋದ ಉಳಿದ ಸಾಕ್ಷಿದಾರ ಜನರಿಗೂ ಸಹಿತ ಹೊಡೆಯಲು ಹೋಗಿ ಜೀವದ ಬೆದರಿಕೆ ಹಾಕಿದ ಅಪರಾಧ.ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 147/2017 ಕಲಂ IPC 1860 (U/s-143, 147, 148, 323, 324, 307, 354, 504,506,109,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ:ದಿನಾಂಕ: 01-12-2017 ರಂದು ಬೆಳಿಗ್ಗೆ 9-00 ಗಂಟೆಗೆ, ಉಮಚಗಿ ಗ್ರಾಮದ ಪಿರ್ಯಾದಿಯ ಮನೆಯಲ್ಲಿ, ಪಿರ್ಯಾದಿಯು ಆರೋಪಿ ಯಶವಂತ ಬಸಪ್ಪ ಕೋರಿ ಸಾ. ಉಮಚಗಿ ಇವನಿಗೆ ಆಸ್ತಿಯಲ್ಲಿ ಪಾಲು ಕೊಡುವ ಅಂತ ಕೇಳಿದ್ದಕ್ಕೆ ಅವಳ ಮೇಲೆ ಸಿಟ್ಟಾಗಿ, ಅವಾಚ್ಯ ಬೈದಾಡಿ, ಕೈಯಿಂದ ಕಪಾಳಕ್ಕೆ ಹೊಡೆದು, ಕಬ್ಬಿಣದ ರಾಡನಿಂದ ಕಿವಿಗೆ, ಎರಡು ಮೊಣಕಾಲಿಗೆ, ಕುಂಡಿಗೆ, ಹೊಟ್ಟೆಗೆ, ತಲೆಗೆ ಹೊಡೆದು ರಕ್ತ ಗಾಯಪಡಿಸಿ, ಮನೆಯ ಬಾಗಿಲ ಹೊರಗಿನಿಂದ ಚಿಲಕ ಹಾಕಿ, ಪಿರ್ಯಾದಿ ಎಲ್ಲಿಯೂ ಹೋಗದಂತೆ ಮನೆಯಲ್ಲಿ ಕೂಡಿ ಹಾಕಿ,  ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 275/2017 ಕಲಂ IPC 1860 (U/s-323, 324, 342, 504,506) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ:02-12-2017 ರಂದು ಮುಂಜಾನೆ 07-00 ಗಂಟೆಗೆ ಕಾರವಾರ ಹುಬ್ಬಳ್ಳಿ ರಸ್ತೆ ಕಲಘಟಗಿ ಪಟ್ಟಣದ ನಾಯಕ್ ಪೆಟ್ರೋಲ್ ಪಂಪ ಹತ್ತಿರ ರಸ್ತೆ ಮೇಲೆ ಗೂಡ್ಸ ಟ್ರಕ್ ನಂ KL13/U 4560 ನೇದ್ದನ್ನು ಕಲಘಟಗಿ ನಾಯಕ ಪೆಟ್ರೊಲ್ ಪಂಪ ಕಡೆಯಿಂದ ಕಾರವಾರ ಕಡೆಗೆ ಒಮ್ಮೇಲೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟ ಟಾಟಾ ಎಸ್ ವಾಹನ ನಂ KA25/D 7567 ನೇದ್ದಕ್ಕೆ ಮುಂಬದಿಯಲ್ಲಿ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾದಿಗೆ ಸಾದಾ ಗಾಯ ಪಡಿಸಿದ್ದಲ್ಲದೇ ಟಾಟಾ ಎಸ್ ಚಾಲಕ  ಹನಮಂತಪ್ಪ ಪಕ್ಕಿರಪ್ಪ ಹೊಸಮನಿ ವಯಾ 30 ವರ್ಷ ಸಾ: ಕ್ಯಾಲಕೊಂಡ ಈತನಿಗೆ ಬಲವಾದ ಗಾಯಪಡಿಸಿದ ಸ್ಥಳದಲ್ಲಿಯೇ ಮರಣಹೊಂದುವಂತೆ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 366/2017 ಕಲಂ IPC 1860 (U/s-279,337,304(A)) ನೇದ್ದರಲ್ಲಿ ಪ್ರಕರಣ ಧಾಖಲಾಗಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ: ದಿನಾಂಕ: 02-12-2017 ರಂದು ಬೆಳಗಿನ 01-30 ಗಂಟೆ ಸುಮಾರಿಗೆ ತಡಸ-ಕಲಘಟಗಿ ರಸ್ತೆ ಮೇಲೆ ಮಡಕಿಹೊನ್ನಳ್ಳಿ ಸಮೀಪ ಕಾರ ನಂ. ಕೆಎ-04 ಎಂ.ಎನ್-6044 ನೇದ್ದರ ಚಾಲಕನಾದ  ನಿತಿನ್ ಕುಮಾರ ತಂದೆ ಸಿದ್ರಾಮಪ್ಪ ಹೂಗೊಂಡರ, ಐ.ಟಿ.ಐ ಲೇ ಔಟ್ ಸಂದ್ಯಾಶ್ರೀ ಪ್ಯಾರಡೈಸ್ ರಾಜರಾಜೇಶ್ವರ ನಗರ ಬೆಂಗಳೂರು ಇವರು ತಡಸ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ  ಮಡಕಿಹೊನ್ನಳ್ಳಿ ಸಮೀಪ ರಸ್ತೆಯ ಎಡಬದಿ ಗಿಡಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಫಿ:ದಿಗೆ ಗಾಯಪಡಿಸಿದ್ದಲ್ಲದೇ ಮಂಡ್ಯಮ ಅದ್ಯಾಪಕ ರಘು  ತಂದೆ ಅಲಸಿಂಗರಾಚಾರ ವಯಾ 60 ವರ್ಷ ಇವರಿಗೆ ತಲೆಗೆ ಭಾರೀ ಗಾಯಪಡಿಸಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮರಣ ಹೊಂದುವಂತೆ ಮಾಡಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 367/2017 ಕಲಂ IPC 1860 (U/s-279,338,304(A)) ನೇದ್ದರಲ್ಲಿ ಪ್ರಕರಣ ಧಾಖಲಾಗಿದ್ದು ಇರುತ್ತದೆ.