ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, December 3, 2017

CRIME INCIDENTS 03-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ 03-12-2017 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹರಲ್ಲಾಪುರ ಗ್ರಾಮದ ಗಿರೀಶ ಹಡಪದ ಇವರು ತಂದೆಯು ಮಾನಸಿಕ ಅಸ್ವಸ್ಥರಿದ್ದು ಈ ಹಿಂದೇ 2 ಭಾರಿ ಮನೆಯಿಂದ ಹೇಳದೇ ಕೇಳದೇ ಹೋದವರು ಮರಳಿ ಮನೆಗೆ ಬಂದಿದ್ದು ಇದ್ದು ಅದೇ ರೀತಿ ದಿನಾಂಕಃ 24-05-2016 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಯಾರಿಗೂ ಹೇಳದೇ, ಕೇಳದೇ ಎಲ್ಲಿಗೋ ಹೋದವರು ಮರಳಿ ಬಂದಿರುವುದಿಲ್ಲಾ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/2017 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಧಾರವಾಡ-ಬೆಳಗಾವಿ ಪಿ.ಬಿ.ರಸ್ತೆಯ ಮೇಲೆ ಶಿಂಗನಳ್ಳಿ ಕ್ರಾಸ ಹತ್ತಿರ ದಿನಾಂಕಃ 03-12-2017 ರಂದು 07-30 ಅವರ್ಸಕ್ಕೆ ಲಾರಿ ನಂಬರಃ ಟಿಎನ್/34/ಎಫ್/8894 ನೇದ್ದರ ಚಾಲಕನು ತನ್ನ ಲಾರಿಯನ್ನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಹೋಗಿ ಶಿಂಗನಳ್ಳಿ ಕ್ರಾಸ ಹತ್ತಿರ ತನ್ನ ಮುಂದೆ ರಸ್ತೆಯ ಎಡಗಡೆಗೆ ಹೊರಟ ಮೋಟಾರ ಸೈಕಲ ನಂಬರಃ ಕೆಎ/24/ವಿ/2762 ನೇದ್ದಕ್ಕೆ ಸಿಗ್ನಲ್ ಕೊಡದೆ ಸೈಡ ಹಾಕಿ ಢಿಕ್ಕಿ ಮಾಡಿ ಅಪಘಾತಪಡಿಸಿ ಒಮ್ಮೇಲೆ  ಲಾರಿ ಎಡಗಡೆ ತೆಗೆದುಕೊಂಡು ಮೋಟಾರ ಸೈಕಲ ಮುಂದೆ ತರುಬಿ ಮೋಟಾರ ಸೈಕಲ ಸವಾರನಿಗೆ [ಮೃತ] ಮತ್ತು ಹಿಂದೆ ಕುಳಿತವನಿಗೆ [ಪಿರ್ಯಾದಿ] ಭಾರಿಗಾಯಪಡಿಸಿದ್ದು. ಸದರಿ ಗಾಯಾಳು ಮೋಟಾರ ಸೈಕಲ ಸವಾರನು ಉಪಚಾರಕ್ಕಾಗಿ ಎಸ್.ಡಿ.ಎಮ್. ಆಸ್ಪತ್ರೆ ಸತ್ತೂರಿಗೆ ದಾಖಲಾಗಿ ಉಪಚಾರ ಫಲಿಸದೆ ದಿನಾಂಕಃ 03-12-2017 ರಂದು 09-00 ಅವರ್ಸಕ್ಕೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 179/2017 ಕಲಂ 279.338.304(ಎ)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೋಳಿವಾಡ ಗ್ರಾಮದ ಪಿರ್ಯಾದಿ ಲಕ್ಷ್ಮೀ ಕೋಂ ಮುತ್ತು@ದ್ಯಾಮಣ್ಣ ಬೆಂತೂರ ಇವರಿಗೆ ಅರೋಪಿತಾದ 1.ಮುತ್ತವ್ವ ಬೆಂತೂರ 2.ದೇವಪ್ಪಾ ಬೆಂತೊರ 3.ದ್ವಾಮವ್ವ ಬೆಂತೊರ ಇವರು ತನ್ನ ತವರು ಮನೆಯಿಂದ ಹಣ & ಬಂಗಾರವನ್ನು ತರುವಂತೆ ಒತ್ತಾಯಿಸಿ, ಹೊಡಿ ಬಡಿ ಮಾಡಿ, ಬೈಯುವುದು ಮಾಡಿದ್ದಲ್ಲದೇ, ದಿನಾಂಕ: 30-11-2017 ರಂದು ರಾತ್ರಿ 11-30 ಗಂಟೆಗೆ ಕೈಯಿಂದ ಹೊಟ್ಟೆಗೆ, ಬೆನ್ನಿಗೆ, ಮುಖಕ್ಕೆ ಹೊಡೆದು, ಕೈಯಿಂದ ಕಪಾಳಕ್ಕೆ ಹೊಡೆದು, ಕೂಡಿಕೊಂಡು ವೈಯರಿನ ಹಗ್ಗದಿಂದ ಕೈ ಕಾಲು ಕಟ್ಟಿ, ಕೈಯಿಂದ ಹೊಟ್ಟೆಗೆ, ಬೆನ್ನಿಗೆ ಸಿಕ್ಕ ಸಿಕ್ಕಲ್ಲಿ ಹೊಡೆದು, ದಿನಾಂಕ: 01-12-2017 ರಂದು ಬೆಳಗಿನ ಜಾವ 5-00 ಗಂಟೆವರೆಗೆ ಮನೆಯಲ್ಲಿ ಕೂಡಿಹಾಕಿ, ನಡೆದ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 276/2017 ಕಲಂ 498(ಎ)323.342.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಶಿವನಾಪೂರ ಗ್ರಾಮದಲ್ಲನ ಆರೋಪಿತರಾದ 1.ಬಸಪ್ಪಾ ಬಾಳಪ್ಪನವರ ಹಾಗೂ ಇನ್ನೂ 03 ಜನರು ಕೊಡಿಕೊಂಡು ಬಸಪ್ಪ ಸೂಬಳದ  ಮಗಳಾದ ಸಕ್ಕುಬಾಯಿ ತಂದೆ ಬಸಪ್ಪ ಶಾಬಳದ 16 ವರ್ಷ ಇವಳಿಗೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೊದಾಗ ಯಾವುದೋ ಉದೇಶಕ್ಕೆ ಅವಳಿಗೆ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 368/2017 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಶಿವನಗೌಡ ಕೋಂ ಕಲ್ಲನಗೌಡ ನರೇಂದ್ರ ವಯಾಃ 40 ವರ್ಷ ಸಾಃ ಸುಳ್ಳ ಇವರು, ಸುಳ್ಳ ಗ್ರಾಮದ ಸಿಂಡಿಕೇಟ್ ಬ್ಯಾಂಕನಲ್ಲಿ ಹೊಲದಲ್ಲಿ ಬೆಳೆ ಬೆಳೆಯಲು ಸುಳ್ಳ ಗ್ರಾಮದ ಸಿಂಡಿಕೇಟ್ ಬ್ಯಾಂಕನಲ್ಲಿ ಮಾಡಿದ 1.80 ಲಕ್ಷ, ಬೆಳೆಸಾಲ ಮತ್ತು ಊರಲ್ಲಿ ಮಾಡಿದ ಕೈಗಡ ಸಾಲ ಹೇಗೆ ತಿರಿಸುವುದು ಅಂತ ಮನಸಿಗೆ ಹಚ್ಚಿಕೊಂಡು ಬೇಜಾರು ಮಾಡಿಕೊಂಡು, ತನ್ನಷ್ಟಕ್ಕೆ ತಾನೆ ಮೇವಿನ ಶೆಡ್ಡಿನ ಎಳೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ತ್ತಾನೆಯೇ ವಿನಃ ಸದರಿಯವನ ಮರಣದಲ್ಲಿ ತನ್ನದಾಗಲಿ ತಮ್ಮ ಮನೆಯವರದಾಗಲಿ ಯಾವುದೇ ಸಂಶಯವಿರುವುದಿಲ್ಲ ಫಿಯಾಱಧಿ  ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 50/2017 ಕಲಂ 174 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.