ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, December 4, 2017

CRIME INCIDENTS 04-12-2017ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-12-2017 ರಂದು ವರದಿಯಾದ ಪ್ರಕರಣಗಳು

1 .ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅದರಗುಂಚಿ ಗ್ರಾಮದ ಹತ್ತಿರ, ಹಳ್ಯಾಳ ಅದರಗುಂಚಿ ರಸ್ತೆಯ ಮೇಲೆ, ಆರೋಪಿಯ ಮೋಟರ ಸೈಕಲ್ ನಂ. ಕೆಎ-25-ಇ.ವಿ-6858 ನೇದ್ದರ ಸವಾರ ಗುರಪ್ಪ ತಿಪ್ಪಣ್ಣ ಬ್ಯಾಲ್ಯಾಳ ಸಾ. ಕುಸುಗಲ್ ಇವನು ಮೋಟರ ಸೈಕಲ್ ನ್ನು ಹಳ್ಯಾಳ ಕಡೆಯಿಂದ ಅದರಗುಂಚಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ರಸ್ತೆ ಉಬ್ಬು ಹತ್ತಿರ ಮೋಟರ ಸೈಕಲ್ ನಿಯಂತ್ರಣ ತಪ್ಪಿ, ಮೋಟರ ಸೈಕಲ್ ಹಿಂಬದಿ ಸವಾರಳಾದ ಸವಿತಾ ಕೋಂ ಮಂಜುನಾಥ ಹುಬ್ಬಳ್ಳಿ ಸಾ. ಬೆಳಗಲಿ ಇವಳು ಮೋಟರ ಸೈಕಲ್ ಮೇಲಿಂದ  ಪುಟಿದು ರಸ್ತೆಯ ಮೇಲೆ ತಲೆ ಹಚ್ಚಿ ಬಿದ್ದು, ತಲೆಗೆ ಭಾರಿ ರಕ್ತ ಗಾಯವಾಗಿ, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 277/2017 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ಮೇಲೆ ಜೋಡಳ್ಳಿ ಹೂಲಿಅಜ್ಜನ ಮಠದ ಹತ್ತಿರ  ಡಸ್ಟರ್ ಕಾರ ನಂ. ಕೆಎ-27 ಎನ್-0934 ನೇದ್ದರ ಚಾಲಕ ನೇಮನಗೌಡ ಯಲ್ಲಪ್ಪಗೌಡ ಹಿರೇಗೌಡ್ರ ಸಾ: ಯಲಿವಾಳ ಇತನು ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದ ಅವಿಚಾರ ತಾತ್ಸಾರತನದಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ರಸ್ತೆ ಎಡಬದಿ ಫೂಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ  ಪಲ್ಟಿ ಮಾಡಿ ಕಾರನ್ನು ತಗ್ಗಿನಲ್ಲಿ ಬೀಳುವಂತೆ ಮಾಡಿ ಜಕಂಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 369/2017 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಾಳ ಗ್ರಾಮದಲ್ಲಿ ಸುನೀತಾ ಹೊನ್ನರೆಡ್ಡಿ ಇವರು ಇವರಿಗೆ  ಬೈದಾಡುತ್ತಾ ಆಸ್ತಿ ಕೊಡು ಇಲ್ಲದಿದ್ದರೆ ನಿನ್ನನ್ನೂ ಸುಟ್ಟುಬಿಡುತ್ತೇನೆ ಅಂತಾ  ಆರೋಪಿತಾದ 1.ಜಗ್ನನಾಥ ಕಿರೇಸೂರ 2.ುಮೇಶ ಬಮ್ಮರೆಡ್ಡಿ 3.ದೇವಕ್ಕಾ ಹೊನ್ನರೆಡ್ಡಿ 4.ಸುಜಾತಾ ಕಿರೆಸೂರ ಇವೆರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ ಪಿರ್ಯಾಧಿಯು ಹೀಗೇಕೆ ಬೈಯುತ್ತಿ ಅಂತಾ ಕೇಳಿದ್ದಕ್ಕೆ ಎಲ್ಲರೂ ಸೇರಿ ಇವಳಿಗೆ ಸೊಕ್ಕಬಾಳ ಇದೆ ಒದಿರಿ ಅಂತಾ ಹುರುಪು ಕೊಟ್ಟಾಗ ಮರ್ಯಾಧೆ ಹೋಗುವ ರೀತಿಯಲ್ಲಿ ಸೀರೆ ಹಿಡಿದು ಜಗ್ಗಾಡಿ ಅಪಮಾನ ಪಡಿಸಿದ್ದಲ್ಲದೇ 4 ನೇ ಆರೋಪಿತಳು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ದುಬ್ಬಕ್ಕೆ ಗುದ್ದಿದ್ದು ಹೊಡೆ ಬಡಿ ಮಾಡಿದ್ದು ಸದರಿ ಆರೋಪಿತರೆಲ್ಲರೂ ಕೈಯಿಂದ ಹೊಡಿಬಡಿ ಮಾಡಿ ಅವಾಚ್ಯ ಬೈದಾಡಿ ಜೀವಧ ಬೇದರಿಕೆ ಹಾಕಿದ್ದು ಮಾನಭಂಗ ಪಡಿಸಿದ್ದು ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ದ ಠಾಣೆಯಲ್ಲಿ ಗುನ್ನಾನಂ 145/2017 ಕಲಂ 323.354.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.